ಈ ವಾರ ನೀವು ಬ್ಯಾಂಕ್‌ಗೆ ಹೋಗುವ ಯೋಜನೆ ಹಾಕಿಕೊಂಡಿದ್ದರೆ ಬೇಗನೆ ಕೆಲಸ ಮುಗಿಸಿಕೊಳ್ಳಿ. ಯಾಕಂದ್ರೆ ಈ ವಾರ ಸತತ 4 ದಿನಗಳವರೆಗೆ ಬ್ಯಾಂಕ್ ಗಳಿಗೆ ರಜಾ ಇದೆ. ಯಾವ್ಯಾವ ದಿನ ಬ್ಯಾಂಕ್ ಗೆ ರಜಾ ಇದೆ ಅನ್ನೋದನ್ನು ನೋಡಿಕೊಂಡು, ನಿಮ್ಮ ವಹಿವಾಟನ್ನು ಪ್ಲಾನ್ ಮಾಡಿಕೊಳ್ಳಿ.
ಏಪ್ರಿಲ್ 14, 15, 16 ಮತ್ತು 17 ರಂದು ಬ್ಯಾಂಕ್‌ಗಳಲ್ಲಿ ಯಾವುದೇ ಕೆಲಸ ನಡೆಯುವುದಿಲ್ಲ. ಈ ಪಟ್ಟಿಯಲ್ಲಿ ಭಾನುವಾರದ ರಜೆಯೂ ಸೇರಿದೆ. ಏಪ್ರಿಲ್ 14, 15, 16 ರಂದು ಕೆಲವು ನಗರಗಳಲ್ಲಿ ಮಾತ್ರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡುತ್ತದೆ. ಉದ್ಯೋಗಿಗಳು ಮತ್ತು ಗ್ರಾಹಕರಿಗೆ ತೊಂದರೆಯಾಗಬಾರದೆಂದೇ ಆರ್‌ಬಿಐ ವರ್ಷದ ಆರಂಭದಲ್ಲಿ ಬ್ಯಾಂಕಿಂಗ್ ರಜಾ ದಿನಗಳ ಪಟ್ಟಿಯನ್ನು ನೀಡುತ್ತದೆ.
ಏಪ್ರಿಲ್ 14 – ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ/ ಮಹಾವೀರ ಜಯಂತಿ/ ಬೈಸಾಖಿ/ ತಮಿಳು ಹೊಸ ವರ್ಷ/ ಚೈರೋಬಾ, ಬಿಜು ಹಬ್ಬ/ ಬೋಹರ್ ಬಿಹು ಹಬ್ಬದ ಹಿನ್ನೆಲೆಯಲ್ಲಿ ಶಿಲ್ಲಾಂಗ್ ಮತ್ತು ಶಿಮ್ಲಾ ಹೊರತುಪಡಿಸಿ ಉಳಿದೆಡೆ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.
ಏಪ್ರಿಲ್ 15 – ಶುಭ ಶುಕ್ರವಾರ/ಬಂಗಾಳಿ ಹೊಸ ವರ್ಷ/ಹಿಮಾಚಲ ದಿನ/ವಿಷು/ಬೋಹಾಗ್ ಬಿಹು ನಿಮಿತ್ತ ಜೈಪುರ, ಜಮ್ಮು ಮತ್ತು ಶ್ರೀನಗರ ಹೊರತುಪಡಿಸಿ ಇತರ ಸ್ಥಳಗಳಲ್ಲಿ ಬ್ಯಾಂಕ್ ಬಂದ್ ಆಗಿರುತ್ತದೆ.
ಏಪ್ರಿಲ್ 16 – ಬೊಹಾಗ್ ಬಿಹು ಹಿನ್ನೆಲೆಯಲ್ಲಿ ಗುವಾಹಟಿಯಲ್ಲಿ ಬ್ಯಾಂಕುಗಳು ಮುಚ್ಚಿರುತ್ತವೆ.
ಏಪ್ರಿಲ್ 17 – ಭಾನುವಾರದ ವಾರದ ರಜೆಯ ಹಿನ್ನೆಲೆಯಲ್ಲಿ ಎಲ್ಲಾ ಕಡೆಗಳಲ್ಲಿ ಬ್ಯಾಂಕ್ ಗಳು ಕಾರ್ಯನಿರ್ವಹಿಸುವುದಿಲ್ಲ. ಏಪ್ರಿಲ್ ತಿಂಗಳಿನಲ್ಲಿ ಒಟ್ಟು 15 ದಿನ ಬ್ಯಾಂಕ್ ಗಳಿಗೆ ರಜಾ ಇದೆ.
ಬೇರೆ ಬೇರೆ ರಾಜ್ಯದಲ್ಲಿ ರಜಾದಿನಗಳ ಪಟ್ಟಿ ಬೇರೆ ತೆರನಾಗಿದೆ. ಪ್ರತಿ ರಾಜ್ಯದ ರಜಾದಿನಗಳ ಪಟ್ಟಿಯನ್ನು ಆ ರಾಜ್ಯದ ಹಬ್ಬಗಳಿಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ.