ಈ ಶನಿವಾರ ಮತ್ತು ಭಾನುವಾರ ನಡೆದ ‘ಬಿಗ್ ಬಾಸ್’ ಕಾರ್ಯಕ್ರಮದಲ್ಲಿ ನಟ ಸುದೀಪ್ ಗೈರು ಹಾಜರಾಗಿದ್ದಾರೆ. ಬಿಗ್ ಬಾಸ್ ಅದ್ಬುತವಾಗಿ ನಡೆಯುತ್ತಿದ್ದು, ಇದರ ಮಧ್ಯೆ ಕಿಚ್ಚ ಸುದೀಪ್ ಅವರು ವಾರಾಂತ್ಯದ ಕಾರ್ಯಕ್ರಮಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಎಲ್ಲರಲ್ಲೂ ಕುತೂಹಲ ಮೂಡಿತ್ತು.
ಇದೀಗ ಅದಕ್ಕೆ ತೆರೆ ಬಿದ್ದಿದ್ದು, ಸ್ವತಃ ಸುದೀಪ್ ಅವರೇ ಟ್ವೀಟ್ ಒಂದರ ಮೂಲಕ ಇದರ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಸುದೀಪ್ ಅವರು ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ ನಡೆದ ಟಿ ಟ್ವೆಂಟಿ ವಿಶ್ವಕಪ್ ನ ಭಾರತ – ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವನ್ನು ವೀಕ್ಷಿಸಲು ತೆರಳಿದ್ದು, ಭಾರತದ ಅದ್ಭುತ ಗೆಲುವಿಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ.
ಈ ಪಂದ್ಯದಲ್ಲಿ ಭಾರತ ತಂಡವನ್ನು ಗೆಲುವಿನ ದಡ ಮುಟ್ಟಿಸಿದ ವಿರಾಟ್ ಕೊಹ್ಲಿಯನ್ನು ಮಹಾರಾಜ ಎಂದಿರುವ ಸುದೀಪ್, ಮಹಾರಾಜನು ಎಲ್ಲಿದ್ದರೂ ಮಹಾರಾಜನೇ ತಾನೇ….. ಕಿಂಗ್ ರಿಮೈನ್ಸ್ ಎ ಕಿಂಗ್, ಕಿಂಗ್ ಕೊಹ್ಲಿ ಎಂದು ಟ್ವೀಟ್ ಮಾಡಿದ್ದಾರೆ. ಹಾಗೆಯೇ ತಮ್ಮ ಟ್ವೀಟ್ ನಲ್ಲಿ ಹಾರ್ದಿಕ್ ಪಾಂಡ್ಯ ಅವರ ಆಟವನ್ನೂ ಸುದೀಪ್ ಶ್ಲಾಘಿಸಿದ್ದಾರೆ.