ವಿಶ್ವದ ಪ್ರತಿಯೊಬ್ಬ ವ್ಯಕ್ತಿಯೂ ಯಶಸ್ಸನ್ನು ಬಯಸ್ತಾನೆ. ಶ್ರೀಮಂತನಾಗುವ ಆಸೆ ಹೊಂದಿರುತ್ತಾನೆ. ಉಳಿದವರಿಗಿಂತ ಉನ್ನತ ಸ್ಥಾನಕ್ಕೇರಲು ಬಯಸ್ತಾನೆ. ಆದ್ರೆ ಎಷ್ಟು ಪ್ರಯತ್ನಪಟ್ಟರೂ ಕೆಲವೊಮ್ಮೆ ಯಶಸ್ಸು, ಹಣ ನಮ್ಮ ಕೈ ಹಿಡಿಯೋದಿಲ್ಲ.
ಅನುಭವಿಗಳ ಪ್ರಕಾರ ಯಶಸ್ಸು ಗಳಿಕೆಗೆ ಶ್ರಮವೊಂದೇ ಮುಖ್ಯವಲ್ಲ. ಅದ್ರ ಜೊತೆಗೆ ವೃತ್ತಿ, ಪ್ರೀತಿ, ಸಂಪತ್ತು, ಆರೋಗ್ಯ, ಕುಟುಂಬ ಎಲ್ಲವೂ ಮಹತ್ವ ಪಡೆಯುತ್ತದೆ. ಅದೃಷ್ಟ ನಮ್ಮ ಜೊತೆಗಿದ್ದರೆ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಕೆಲವೊಮ್ಮೆ ಎಲ್ಲವೂ ನಮ್ಮ ಪರವಾಗಿದ್ದರೂ ನಾವು ಮಾಡುವ ಕೆಲವೊಂದು ತಪ್ಪುಗಳು ನಮ್ಮ ಯಶಸ್ಸಿಗೆ ಅಡ್ಡಿಯುಂಟು ಮಾಡುತ್ತವೆ.
ನಾರದ ಪುರಾಣದ ಪ್ರಕಾರ ತಿಳಿಯದೆ ನಾವು ಕೆಲವೊಂದು ವಸ್ತುಗಳನ್ನು ಸ್ಪರ್ಶಿಸುತ್ತೇವೆ. ಅದು ನಮ್ಮ ಅದೃಷ್ಟದ ಬಾಗಿಲಿಗೆ ಅಡ್ಡ ಗೋಡೆಯಾಗುತ್ತದೆ.
ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ಹೋಗುವ ನಾವು ಅಲ್ಲಿರುವ ಅಶುಭ ವಸ್ತುಗಳನ್ನು ಸ್ಪರ್ಶಿಸುತ್ತೇವೆ. ಮೃತ ವ್ಯಕ್ತಿ ಅಥವಾ ಆತನಿಗೆ ಸಂಬಂಧಪಟ್ಟ ವಸ್ತುಗಳನ್ನು ಮುಟ್ಟುತ್ತೇವೆ. ಇದರಿಂದ ನಕಾರಾತ್ಮಕ ಶಕ್ತಿಗೆ ನಾವು ಬಲಿಯಾಗುತ್ತೇವೆ. ದೌರ್ಭಾಗ್ಯ ನಮ್ಮ ಬೆನ್ನು ಹತ್ತುತ್ತದೆ.
ತಿನ್ನುವ ಆಹಾರ ನೆಲಕ್ಕೆ ಬೀಳುವುದು ಅಶುಭ. ಈ ಆಹಾರವನ್ನು ಅದ್ರಲ್ಲೂ ದೇವರೆಂದು ಪೂಜಿಸುವ ಅನ್ನವನ್ನು ಕಾಲಿನಿಂದ ತುಳಿದ್ರೆ ಬಡತನ ಕಾಡಲು ಶುರುವಾಗುತ್ತದೆ.
ಒಳ್ಳೆ ಕೆಲಸಕ್ಕೆ ಹೊರಗೆ ಹೋಗುವ ಸಮಯದಲ್ಲಿ ನಾಯಿ ಸ್ಪರ್ಶ ಮಾಡಿದ್ರೆ ಇದು ಅಶುಭವೆಂದು ನಾರದ ಪುರಾಣದಲ್ಲಿ ಹೇಳಲಾಗಿದೆ. ಜೀವನದಲ್ಲಿ ಕೆಟ್ಟ ದಿನಗಳು ಬರಲಿವೆ ಎಂಬುದು ಇದ್ರ ಸಂಕೇತವಾಗಿದೆ.
ಮನೆ ಶುಚಿಗೊಳಿಸುವ ವೇಳೆ ಪೊರಕೆ ನಿಮ್ಮ ದೇಹಕ್ಕೆ ಸ್ಪರ್ಶವಾದ್ರೆ ಇದು ಅಶುಭ.
ಸಮಾಧಿಯಿಂದ ಬರುವ ಹೊಗೆ ದೇಹಕ್ಕೆ ಸ್ಪರ್ಶಿಸಬಾರದು. ಒಂದು ವೇಳೆ ಈ ಹೊಗೆ ನಿಮ್ಮನ್ನು ಸ್ಪರ್ಶಿಸಿದ್ರೆ ಇದು ಅಶುಭದ ಸಂಕೇತ. ಬಡತನ, ದೌರ್ಭಾಗ್ಯ, ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಶವ ಸಂಸ್ಕಾರಕ್ಕೆ ಬಳಸುವ ಮರದ ತುಂಡು, ಶವವನ್ನು ಸ್ಪರ್ಶಿಸಬಾರದು. ಒಂದು ವೇಳೆ ತಿಳಿಯದೆ ತಪ್ಪಾದಲ್ಲಿ ಗಂಗಾ ಸ್ನಾನ ಮಾಡಿ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸಬೇಕು.
ಕೊಳಕು ವ್ಯಕ್ತಿಯನ್ನು ಬರಿಗೈನಲ್ಲಿ ಮುಟ್ಟಬಾರದು. ಆತ ಸುತ್ತಲಿರುವ ಸಕಾರಾತ್ಮಕ ಶಕ್ತಿಯನ್ನು ತಾನು ಪಡೆದು ನಕಾರಾತ್ಮಕ ಶಕ್ತಿಯನ್ನು ಬಿಟ್ಟು ಹೋಗ್ತಾನೆಂಬ ನಂಬಿಕೆಯಿದೆ.