ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಆರೋಗ್ಯಕರ ಆಹಾರವನ್ನು ಅನುಸರಿಸುವುದು ಬಹಳ ಮುಖ್ಯ. ಆದರೆ ಡಯಟ್ ಮಾಡುವುದು ಎಲ್ಲರಿಗೂ ಸುಲಭದ ಕೆಲಸವಲ್ಲ. ಡಯಟ್ ಮಾಡಲು ಸಾಧ್ಯವಿಲ್ಲ, ತಿನ್ನಲೇಬೇಕು ಎನ್ನುವ ಅನೇಕರಿದ್ದಾರೆ. ಅವರಿಗೆ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿದೆ. ನೀವು ಸಹ ಅದೇ ರೀತಿ ಆಹಾರ ಪ್ರಿಯರಾಗಿದ್ದರೆ ಕೆಲವೊಂದು ಸರಳ ಸಲಹೆಗಳನ್ನು ಅನುಸರಿಸಿ.
ನೀವು ಸಹ ತೂಕ ಇಳಿಸಿಕೊಳ್ಳಲು ಬಯಸಿದರೆ, ಯಾವಾಗಲೂ ನಿಮ್ಮ ಫ್ರಿಡ್ಜ್‌ನಲ್ಲಿ ಆರೋಗ್ಯಕರ ವಸ್ತುಗಳನ್ನು ಇರಿಸಿ. ಆಗ ಆರಾಮಾಗಿ ತೂಕವನ್ನು ಕಡಿಮೆ ಮಾಡಬಹುದು. ಏಕೆಂದರೆ ತಿನ್ನಬೇಕೆಂಬ ಕಡುಬಯಕೆಯಲ್ಲಿ ಫ್ರಿಡ್ಜ್ ತೆರೆದಾಗ ತಾಜಾ ಹಣ್ಣುಗಳು, ತರಕಾರಿಗಳು ಸೇರಿದಂತೆ ಆರೋಗ್ಯಕರ ಆಹಾರಗಳು ಮಾತ್ರ ಕಾಣುತ್ತವೆ. ಆಗ ನೀವು ಹೆಲ್ದಿ ಫುಡ್‌ಗಳನ್ನು ಮಾತ್ರ ಸೇವಿಸುತ್ತೀರಾ. ಇದರಿಂದ ಸಹಜವಾಗಿಯೇ ತೂಕ ಇಳಿಕೆಯಾಗುತ್ತದೆ.
ಫ್ರಿಡ್ಜ್‌ನಲ್ಲಿ ಸದಾ ಇರಬೇಕಾದ ವಸ್ತುಗಳು
ಮೊಟ್ಟೆ – ಮೊಟ್ಟೆ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಟ್ಟೆಯಿಂದ ಬಗೆಬಗೆಯ ತಿನಿಸುಗಳನ್ನು ಮಾಡಿ ಹೊಟ್ಟೆ ತುಂಬಿಸಿಕೊಳ್ಳಬಹುದು. ಅದಕ್ಕಾಗಿಯೇ ಯಾವಾಗಲೂ ಮೊಟ್ಟೆಗಳನ್ನು ಫ್ರಿಡ್ಜ್‌ನಲ್ಲಿ ಇಡಬೇಕು.
ತರಕಾರಿ – ತರಕಾರಿಗಳು ಸಹ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವ ಈ ತರಕಾರಿಗಳನ್ನು ಮೊಟ್ಟೆಗಳೊಂದಿಗೆ ಭಕ್ಷ್ಯವಾಗಿ ಬಳಸಬಹುದು. ಅತ್ಯುತ್ತಮವಾದ ಸಲಾಡ್ ಮಾಡಿಕೊಂಡು ಕೂಡ ತಿನ್ನಬಹುದು.
ಸೀಸನಲ್ ಫ್ರೂಟ್ಸ್: ಕೆಲವೊಮ್ಮೆ ನಮಗೆ ಸಿಹಿ ತಿನ್ನಬೇಕೆಂಬ ಕಡು ಬಯಕೆಯಾಗುತ್ತದೆ. ಆ ಸಮಯದಲ್ಲಿ ಚಾಕಲೇಟ್, ಕ್ಯಾಂಡಿ ಅಥವಾ ಕೇಕ್ ಬದಲಿಗೆ ಫ್ರಿಡ್ಜ್‌ನಲ್ಲಿ ಇಟ್ಟಿರುವ ಸೀಸನಲ್ ಫ್ರೂಟ್ಸ್ ಸೇವಿಸಿ. ಇದು ತೂಕ ಇಳಿಸಿಕೊಳ್ಳಲು ಸುಲಭದ ಮಾರ್ಗವಾಗಿದೆ.