ದಾನ ಮಾಡುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಇದ್ರ ಜೊತೆಗೆ ಹಿಂದೆ ಮಾಡಿದ ಪಾಪವೆಲ್ಲ ತೊಳೆದು ಹೋಗುತ್ತದೆ. ನಿರ್ಗತಿಕರಿಗೆ ದಾನ ಮಾಡುವುದರಿಂದ ದಾನ ಮಾಡಿದ ವ್ಯಕ್ತಿಯ ಸಮಸ್ಯೆಗಳೆಲ್ಲ ದೂರವಾಗುತ್ತವೆ.
ಆದ್ರೆ ಕೆಲವೊಂದು ವಸ್ತುಗಳನ್ನು ದಾನ ಮಾಡುವುದರಿಂದ ಸುಖ-ಶಾಂತಿ ನಾಶವಾಗುತ್ತದೆ. ಅನೇಕ ಸಮಸ್ಯೆಗಳು ಎದುರಾಗುತ್ತವೆ.
ಪೊರಕೆಯನ್ನು ಯಾವಾಗ್ಲೂ ದಾನವಾಗಿ ನೀಡಬಾರದು. ಪೊರಕೆಯಲ್ಲಿ ಲಕ್ಷ್ಮಿ ಇರ್ತಾಳೆ. ಪೊರಕೆಯನ್ನು ದಾನ ಮಾಡಿದ್ರೆ ಮನೆಯ ಲಕ್ಷ್ಮಿ ಅದ್ರ ಜೊತೆಯೇ ಹೊರಟು ಹೋಗ್ತಾಳೆ.
ಶಾಸ್ತ್ರಗಳ ಪ್ರಕಾರ ಸ್ಟೀಲ್ ನಲ್ಲಿ ತಯಾರಾದ ವಸ್ತುಗಳನ್ನು ಕೂಡ ದಾನವಾಗಿ ನೀಡಬಾರದು. ಸ್ಟೀಲ್ ವಸ್ತುಗಳನ್ನು ದಾನ ಮಾಡುವುದರಿಂದ ಮನೆಯ ಸುಖ-ಶಾಂತಿ ಹೊರಟು ಹೋಗುತ್ತದೆ.
ಶನಿ ದೇವನಿಗೆ ತೈಲ ಶುಭವೆಂದು ಪರಿಗಣಿಸಲಾಗಿದೆ. ಹಾಗಾಗಿ ಬಳಸಿದ ಹಾಗೂ ಹಳೆಯ ಎಣ್ಣೆಯನ್ನು ಯಾರಿಗೂ ದಾನ ಮಾಡಬಾರದು.
ಹಸಿದವನಿಗೆ ಅನ್ನ ದಾನ ಮಾಡುವುದು ಪುಣ್ಯದ ಕೆಲಸ. ಆದ್ರೆ ಹಾಳಾದ ಆಹಾರವನ್ನು ದಾನವಾಗಿ ನೀಡುವುದು ಅಶುಭ. ಕೋರ್ಟ್ ವಿವಾದದಿಂದಾಗಿ ಹಣ ನಷ್ಟವಾಗುವ ಸಾಧ್ಯತೆ ಇರುತ್ತದೆ.
ತೀಕ್ಷ್ಣವಾದ ಹಾಗೂ ಚೂಪಾದ ವಸ್ತುಗಳನ್ನು ದಾನದ ರೂಪದಲ್ಲಿ ನೀಡಬಾರದು. ಇದ್ರಿಂದ ಮನೆಯ ಶಾಂತಿ ಹಾಳಾಗಿ ಕುಟುಂಬದಲ್ಲಿ ಜಗಳ ಕಾಣಿಸಿಕೊಳ್ಳುತ್ತದೆ.