alex Certify ಈ ವಸ್ತುಗಳನ್ನು ತಿಜೋರಿಯಲ್ಲಿಟ್ಟರೆ ಆ ಮನೆಯಲ್ಲಿ ನೆಲೆಸುತ್ತಾಳೆ ಲಕ್ಷ್ಮಿ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಸ್ತುಗಳನ್ನು ತಿಜೋರಿಯಲ್ಲಿಟ್ಟರೆ ಆ ಮನೆಯಲ್ಲಿ ನೆಲೆಸುತ್ತಾಳೆ ಲಕ್ಷ್ಮಿ…..!

ಮನೆಯಲ್ಲಿರುವ ಹಣದ ತಿಜೋರಿ ಯಾವಾಗಲೂ ತುಂಬಿರಬೇಕೆಂದು ಎಲ್ಲರಿಗೂ ಆಸೆ. ಲಕ್ಷ್ಮಿಯ ಆಶೀರ್ವಾದ ಸದಾ ತಮ್ಮ ಮೇಲಿರಬೇಕೆಂದು ಬಯಸುವುದು ಸಹಜ. ಆದರೆ ಅನೇಕ ಬಾರಿ ಕಠಿಣ ಪರಿಶ್ರಮದ ನಂತರವೂ ಹಣದ ಕೊರತೆ ನಮ್ಮನ್ನು ಕಾಡುತ್ತದೆ. ಇದಕ್ಕೆ ಕಾರಣ ವಾಸ್ತು ದೋಷವೂ ಆಗಿರಬಹುದು. ವಾಸ್ತು ಶಾಸ್ತ್ರದಲ್ಲಿ, ಹಣಕ್ಕೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಹೇಳಲಾಗಿದೆ, ಅದನ್ನು ಪ್ರಯತ್ನಿಸುವ ಮೂಲಕ ನೀವು ಮಿಲಿಯನೇರ್ ಆಗಬಹುದು.

ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಸುರಕ್ಷಿತವಾಗಿರಿಸುವುದರಿಂದ ವ್ಯಕ್ತಿಯು ಆರ್ಥಿಕ  ಸಮಸ್ಯೆಗಳನ್ನು ತೊಡೆದುಹಾಕಬಹುದು. ಅವು ಯಾವುವು ಅನ್ನೋದನ್ನು ನೋಡೋಣ.

ಪೂಜೆಯ ಸುಪಾರಿ : ವಾಸ್ತು ಶಾಸ್ತ್ರದ ಪ್ರಕಾರ ಯಾವುದೇ ಧಾರ್ಮಿಕ ಆಚರಣೆಯ ನಂತರ, ಪೂಜೆಯಲ್ಲಿ ಬಳಸುವ ವೀಳ್ಯದೆಲೆಯನ್ನು ತಿಜೋರಿಯಲ್ಲಿ  ಇರಿಸಿ. ಇದರಿಂದ ಮನೆಯಲ್ಲಿ ಹಣ ಮತ್ತು ಧಾನ್ಯಗಳ ಕೊರತೆ ಇರುವುದಿಲ್ಲ.

ನಾಣ್ಯಗಳು: ಶಾಸ್ತ್ರಗಳ ಪ್ರಕಾರ ಕೆಂಪು ಬಟ್ಟೆಯಲ್ಲಿ ಏಳು ನಾಣ್ಯಗಳನ್ನು ಕಟ್ಟಿ ಶುಕ್ರವಾರದಂದು ತಿಜೋರಿಯಲ್ಲಿ ಇರಿಸಬೇಕು. ಇದು ಅದೃಷ್ಟವನ್ನು ತರುತ್ತದೆ ಮತ್ತು ಲಕ್ಷ್ಮಿ ದೇವಿಯು ಸಂತುಷ್ಟಳಾಗಿ ಆ ಸ್ಥಳದಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ.

ತುಳಸಿ ಎಲೆಗಳು: ವಾಸ್ತು ಶಾಸ್ತ್ರದ ಪ್ರಕಾರ ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯ ಪೂಜೆಯಲ್ಲಿ ಬಳಸುವ ತುಳಸಿಯನ್ನು ತಿಜೋರಿಯಲ್ಲಿ ಇರಿಸಬೇಕು. ಇದು ಮನೆಗೆ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ತರುತ್ತದೆ. ಅವಳು ನಿಮ್ಮ ಬೊಕ್ಕಸವನ್ನು ಹಣದಿಂದ ತುಂಬುತ್ತಾಳೆ.

ಧನ ಕುಬೇರನ ವಿಗ್ರಹ: ವಾಸ್ತು ಶಾಸ್ತ್ರದ ಪ್ರಕಾರ ಸಂಪತ್ತು ಮತ್ತು ಸಮೃದ್ಧಿಗೆ ಹೆಸರಾದ ಕುಬೇರನ ವಿಗ್ರಹವನ್ನು ತಿಜೋರಿಯಲ್ಲಿ ಇಡುವುದರಿಂದ ಸಂಪತ್ತು ಬರುತ್ತದೆ. ವ್ಯಕ್ತಿಯು ತನ್ನ ವೃತ್ತಿಜೀವನದಲ್ಲಿ ಪ್ರಗತಿಯನ್ನು ಪಡೆಯುತ್ತಾನೆ ಮತ್ತು ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ.

ಅರಿಶಿನ ಬೇರು: ಲಕ್ಷ್ಮಿಯ ಆಶೀರ್ವಾದವನ್ನು ಯಾವಾಗಲೂ ಪಡೆಯಬೇಕೆಂದು ಬಯಸಿದರೆ ತಿಜೋರಿಯಲ್ಲಿ ಅರಿಶಿನದ ಬೇರನ್ನು ಇರಿಸಬೇಕು. ಇದರಿಂದಾಗಿ ಲಕ್ಷ್ಮಿಯು ಯಾವಾಗಲೂ ಆ ಸ್ಥಳದಲ್ಲಿ ನೆಲೆಸುತ್ತಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...