ಜೀವನದಲ್ಲಿ ಕಾಡುವ ಅನೇಕ ಸಮಸ್ಯೆ ಹಾಗೂ ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಲು ನಾವು ಉಪಾಯಗಳನ್ನು ಹುಡುಕುತ್ತೇವೆ. ದಾನ-ಧರ್ಮ ಮಾಡಿದ್ರೆ ಎಲ್ಲ ಕಷ್ಟ ದೂರಾಗುತ್ತೆ ಎಂದು ಕೆಲವರು ಸಲಹೆ ನೀಡ್ತಾರೆ. ಅವರ ಸಲಹೆಯಂತೆ ದಾನ ನೀಡಲು ಶುರು ಮಾಡ್ತೇವೆ. ಆದ್ರೆ ನಾವು ಮಾಡುವ ಕೆಲ ದಾನ ನಮಗೆ ಶುಭ ಫಲ ನೀಡುವ ಬದಲು ಸಂಕಷ್ಟ ತಂದೊಡ್ಡುತ್ತದೆ.
ಶಾಸ್ತ್ರಗಳ ಪ್ರಕಾರ ಸಂಜೆ ಕೆಲವೊಂದು ವಸ್ತುಗಳನ್ನು ದಾನ ನೀಡಬಾರದು. ಇದ್ರಿಂದ ಲಾಭವಾಗುವ ಬದಲು ನಷ್ಟವುಂಟಾಗುತ್ತದೆ. ಹಿಂದೂ ಶಾಸ್ತ್ರದಲ್ಲಿ ಪೊರಕೆಗೆ ಮಹತ್ವದ ಸ್ಥಾನವಿದೆ. ಎಂದೂ ಪೊರಕೆಯನ್ನು ಯಾರಿಗೂ ದಾನ ನೀಡಬೇಡಿ. ಇದ್ರಿಂದ ಲಕ್ಷ್ಮಿ ಮುನಿಸಿಕೊಳ್ಳುತ್ತಾಳೆ.
ಚಾಕು, ಚೂರಿ, ಕತ್ತಿ ಸೇರಿದಂತೆ ಚೂಪಾದ ಹಾನಿಯುಂಟು ಮಾಡುವ ವಸ್ತುವನ್ನು ದಾನದ ರೂಪದಲ್ಲಿ ನೀಡಬಾರದು. ಇದು ಕುಟುಂಬಸ್ಥರ ನಡುವೆ ಗಲಾಟೆಗೆ ಕಾರಣವಾಗುತ್ತದೆ.
ತಾಜಾ ಆಹಾರವನ್ನು ಯಾವಾಗ ಬೇಕಾದ್ರೂ ಯಾರಿಗೆ ಬೇಕಾದ್ರೂ ದಾನ ನೀಡಬಹುದು. ಆದ್ರೆ ಹಳೆಯ ಹಾಗೂ ಹಳಸಿದ ಆಹಾರವನ್ನು ಅಪ್ಪಿತಪ್ಪಿಯೂ ಬೇರೆಯವರಿಗೆ ನೀಡಬೇಡಿ. ಇದು ಆರೋಗ್ಯ ಸಂಬಂಧಿ ಸಮಸ್ಯೆಗೆ ಕಾರಣವಾಗುತ್ತದೆ.