
ಹೌದು, ಗುಜರಾತ್ ನಲ್ಲಿ ವರನಿಗೆ ಆತನ ಸಂಬಂಧಿಕರು ಒಂದು ಬಾಕ್ಸ್ ನಿಂಬೆಹಣ್ಣುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ನಿಂಬೆ ಹಣ್ಣಿನ ಬೆಲೆ ಗಗನಕ್ಕೇರಿರುವುದರಿಂದ ಇದು ಕೂಡ ಒಂದು ಅತ್ಯಮೂಲ್ಯ ಉಡುಗೊರೆಯಾಗಿದೆ. ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಿಂಬೆಹಣ್ಣನ್ನು ಖದೀಮರು ದರೋಡೆ ಮಾಡಿದ್ದರು. ಇದೀಗ ವರನಿಗೆ ನಿಂಬೆಹಣ್ಣುಗಳ ಗಿಫ್ಟ್ ಸಿಕ್ಕಿದೆ.
ವರನ ಸಂಬಂಧಿಗಳಲ್ಲಿ ಒಬ್ಬರಾದ ದಿನೇಶ್ ಎಂಬುವವರು ಈ ವಿಶಿಷ್ಟ ಉಡುಗೊರೆ ನೀಡಿದ್ದಾರೆ. ದೇಶದಲ್ಲಿ ನಿಂಬೆ ಹಣ್ಣಿನ ಬೆಲೆ ದುಬಾರಿಯಾಗಿದೆ. ಇದು ಬೇಸಿಗೆ ಋತುವಾಗಿರುವುದರಿಂದ ನಿಂಬೆಹಣ್ಣುಗಳ ಅವಶ್ಯಕತೆ ಬಹಳಷ್ಟಿದೆ. ಅದಕ್ಕಾಗಿಯೇ ತಾನು ನಿಂಬೆಹಣ್ಣುಗಳನ್ನು ಉಡುಗೊರೆಯಾಗಿ ನೀಡಿರುವುದಾಗಿ ತಿಳಿಸಿದ್ದಾರೆ.
ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಇಬ್ಬರು ವ್ಯಕ್ತಿಗಳು ವರನಿಗೆ ನಿಂಬೆಹಣ್ಣುಗಳಿರುವ ಕೆಂಪು ಬಾಕ್ಸ್ ಅನ್ನು ಉಡುಗೊರೆಯಾಗಿ ನೀಡುತ್ತಿರುವುದನ್ನು ನೋಡಬಹುದು. ಹಳದಿ ಸಮಾರಂಭದಲ್ಲಿ ಈ ಉಡುಗೊರೆಯನ್ನು ನೀಡಲಾಗಿದೆ. ಗುಜರಾತ್ ರಾಜ್ಯದ ರಾಜ್‌ಕೋಟ್‌ನ ಧೋರಾಜಿ ಪಟ್ಟಣದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಈ ಘಟನೆ ನಡೆದಿದೆ.