ಅಡುಗೆಗೆ ಬಳಸುವ ಪದಾರ್ಥಗಳ ಜೊತೆ ಅಡುಗೆ ಮಾಡಲು ಬಳಸುವ ಪಾತ್ರೆಗಳು ಮಹತ್ವ ಪಡೆಯುತ್ತವೆ. ಆಹಾರವನ್ನು ಬೇಯಿಸುವ ವೇಳೆ ಲೋಹದ ಗುಣ ಅಡುಗೆಯಲ್ಲಿ ಸೇರುವುದ್ರಿಂದ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಕೆಲವೊಂದು ಲೋಹದ ಪಾತ್ರೆಯಲ್ಲಿ ಅಡುಗೆ ಮಾಡಬಾರದು.
ಸಾಮಾನ್ಯವಾಗಿ ಎಲ್ಲರೂ ಸ್ಟೀಲ್ ಪಾತ್ರೆಯಲ್ಲಿ ಅಡುಗೆ ಮಾಡ್ತಾರೆ. ಸ್ಟೇನ್ಲೆಸ್ ಸ್ಟೀಲ್ ನಲ್ಲಿ ಅನೇಕ ಲೋಹಗಳು ಸೇರಿರುತ್ತವೆ. ಕಾರ್ಬನ್, ಕ್ರೋಮಿಯಂ ಮತ್ತು ನಿಕಲ್ ಸಾಮಾನ್ಯವಾಗಿರುತ್ತದೆ. ಈ ಲೋಹದಿಂದ ಮಾಡಿದ ಪಾತ್ರೆಯಲ್ಲಿ ಆಹಾರ ಬೇಯಿಸುವುದ್ರಿಂದ ಆರೋಗ್ಯಕ್ಕೆ ಯಾವುದೇ ಸಮಸ್ಯೆಯಾಗುವುದಿಲ್ಲ. ಇದೇ ಕಾರಣಕ್ಕೆ ಅನೇಕರು ಸ್ಟೇನ್ಲೆಸ್ ಸ್ಟೀಲ್ ಬಳಕೆ ಮಾಡ್ತಾರೆ.
ಹಿಂದಿನ ಕಾಲದಲ್ಲಿ ಹಿತ್ತಾಳೆ ಪಾತ್ರೆಗಳನ್ನು ಹೆಚ್ಚಾಗಿ ಬಳಕೆ ಮಾಡಲಾಗ್ತಾಯಿತ್ತು. ಆದ್ರೆ ಹಿತ್ತಾಳೆ ಪಾತ್ರೆಯಲ್ಲಿ ಮಾಡಿದ ಆಹಾರ ಬಹುಬೇಗ ಹಾಳಾಗುತ್ತದೆ. ಉಪ್ಪು ಹಾಗೂ ಹುಳಿ ಪದಾರ್ಥಗಳನ್ನು ಇದರಲ್ಲಿ ಮಾಡುವಂತಿಲ್ಲ. ಉಪ್ಪು-ಹುಳಿ ಹಿತ್ತಾಳೆಗೆ ಬಿದ್ರೆ ಆಹಾರ ವಿಷವಾಗುತ್ತದೆ.
ಅಲ್ಯೂಮಿನಿಯಂ ಪಾತ್ರೆಗಳನ್ನು ಪ್ರತಿ ಮನೆಯಲ್ಲೂ ಬಳಸಲಾಗುತ್ತದೆ. ಅಲ್ಯೂಮಿನಿಯಂ ಆರೋಗ್ಯಕ್ಕೆ ಹಾನಿಕಾರಕ. ಇಂದಿನಿಂದ್ಲೇ ಅಲ್ಯೂಮಿನಿಯಂ ಬಳಕೆ ಬಿಟ್ಟುಬಿಡಿ. ಹಾಗೆ ಕಬ್ಬಿಣದ ಪಾತ್ರೆಯಲ್ಲೂ ಅಡುಗೆ ಮಾಡಬೇಡಿ. ಇದು ಆರೋಗ್ಯಕ್ಕೆ ಹಾನಿಕರ. ಇದು ಅನೇಕ ಗಂಭೀರ ಖಾಯಿಲೆಗಳಿಗೆ ಕಾರಣವಾಗುತ್ತದೆ.