
ಪ್ರಸಿದ್ಧ ಬ್ರೆಜಿಲಿಯನ್ ಮಾಡೆಲ್ ಆರ್ಥರ್ ಓ ಉರ್ಸೊಗೆ ಎಂಟು ಹೆಂಡತಿಯರಿದ್ದಾರೆ. ವಿಶೇಷ ಅಂದ್ರೆ ಎಲ್ಲರೂ ಅವನೊಟ್ಟಿಗೆ ವಾಸಿಸ್ತಾರೆ. ಆರ್ಥರ್ ಉರ್ಸೊ 7500 ಚದರ ಅಡಿ ವಿಸ್ತೀರ್ಣದ ಐಷಾರಾಮಿ ಅರಮನೆಯನ್ನು ನಿರ್ಮಿಸುತ್ತಿದ್ದಾನೆ. ಎಲ್ಲಾ ಹೆಂಡತಿಯರನ್ನು ವೈಭವದಿಂದ ನೋಡಿಕೊಳ್ಳಲು ಆ ಅರಮನೆಗೆ ‘ಮ್ಯಾನ್ಷನ್ ಆಫ್ ಫ್ರೀ ಲವ್’ ಎಂದು ಹೆಸರಿಟ್ಟಿದ್ದಾನೆ.
ಆರ್ಥರ್ ಉರ್ಸೊ 2021ರಲ್ಲಿ ಏಕಕಾಲದಲ್ಲಿ 9 ಹುಡುಗಿಯರನ್ನು ಮದುವೆಯಾಗುವ ಮೂಲಕ ಸಂಚಲನ ಸೃಷ್ಟಿಸಿದ್ದ. ನಂತರ ಓರ್ವ ಪತ್ನಿ ವಿಚ್ಛೇದನ ಪಡೆದಿದ್ದರಿಂದ ಪತ್ನಿಯರ ಸಂಖ್ಯೆ 8ಕ್ಕೆ ಇಳಿಯಿತು. ಗಂಡನನ್ನು ಇತರರೊಂದಿಗೆ ಹಂಚಿಕೊಳ್ಳಲು ಇಷ್ಟವಿಲ್ಲ ಎಂದ ಆಕೆ ವಿಚ್ಛೇದನ ಪಡೆದಿದ್ದಾಳೆ.
ಆದರೆ ಆರ್ಥರ್‌ನ ಈ ಮದುವೆಗಳು ಕಾನೂನುಬದ್ಧವಾಗಿಲ್ಲ. ಏಕೆಂದರೆ ಬ್ರೆಜಿಲ್‌ನಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗುವುದು ಕಾನೂನಿಗೆ ವಿರುದ್ಧವಾಗಿದೆ. 8 ಪತ್ನಿಯರೊಂದಿಗೆ ಆರ್ಥರ್ ಖುಷಿಯಿಂದ ಇದ್ದಾನೆ. ಬಹುಪತ್ನಿಯರೊಂದಿಗೆ ಮಜವಾಗಿರುವ ಆರ್ಥರ್‌ನನ್ನು ನೋಡಿ ಅನೇಕರು ಹೊಟ್ಟೆ ಉರಿದುಕೊಳ್ತಿದ್ದಾರೆ. ಆತನ ಮನೆಯ ಗೋಡೆ ಮೇಲೆ ಯಾರೋ ರಾಕ್ಷಸ ಎಂದು ಬರೆದಿದ್ದಾರಂತೆ.
ಆರ್ಥರ್ ಓ ಉರ್ಸೋಗೆ ಎಲ್ಲಾ ಹೆಂಡತಿಯರಿಗೆ ಸಮಯ ನೀಡುವುದು ಸುಲಭದ ಕೆಲಸವಲ್ಲ. ಇದಕ್ಕಾಗಿಯೇ ಆತ ಸೆಕ್ಸ್ ರೋಟಾವನ್ನು ಸಿದ್ಧಪಡಿಸಿದ್ದಾನಂತೆ. ಅದರ ಆಧಾರದ ಮೇಲೆ ತನ್ನ ಹೆಂಡತಿಯರೊಂದಿಗೆ ಆತ ಸಮಯ ಕಳೆಯುತ್ತಾನೆ. ವೇಳಾಪಟ್ಟಿಯ ಆಧಾರದ ಮೇಲೆ ಅವರನ್ನು ಪ್ರೀತಿಸುತ್ತಾನೆ. ಆರ್ಥರ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯನಾಗಿದ್ದಾನೆ. ತನ್ನ ಅಷ್ಟ ಪತ್ನಿಯರ ಜೊತೆಗಿನ ಫೋಟೋಗಳನ್ನ ಹಂಚಿಕೊಳ್ಳುತ್ತಲೇ ಇರುತ್ತಾನೆ.