ನಿಮ್ಮ ಮಲಗುವ ರೀತಿಗೂ ನಿಮ್ಮ ಚರ್ಮಕ್ಕೂ ಸಂಬಂಧವಿದೆ. ನಿದ್ರೆ ಮಾಡುವಾಗ ತಪ್ಪಾದ ಸ್ತಾನದಲ್ಲಿ ಮಲಗಿದರೆ ನಿಮ್ಮ ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮುಖದಲ್ಲಿ ಸುಕ್ಕುಗಳು, ಗುಳ್ಳೆಗಳು ಮೂಡುತ್ತವೆ. ಆದಕಾರಣ ಮಲಗುವಾಗ ಸರಿಯಾದ ಸ್ಥಾನದಲ್ಲಿ ಮಲಗಿದರೆ ನಿಮ್ಮ ಚರ್ಮವು ಸುಂದರವಾಗಿ ಆರೋಗ್ಯಕರವಾಗಿರುತ್ತದೆ.
*ಬೆನ್ನಿನ ಮೇಲೆ ಮಲಗಿ ನಿದ್ರಿಸುವುದು ಬಹಳ ಉತ್ತಮ ಸ್ಥಾನವಾಗಿದೆ. ಇದರಿಂದ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುತ್ತದೆ. ಇದು ಚರ್ಮಕ್ಕೆ ಒಳ್ಳೆಯದು. ಇನ್ನೂ ಕೆಲವರು ಹೊಟ್ಟೆಯ ಮೇಲೆ ಮಲಗುತ್ತಾರೆ. ಇದರಿಂದ ಮುಖ ಕೆಳಗೆ ತಾಕಿ ಚರ್ಮದ ಮೇಲೆ ಒತ್ತಡ ಬೀಳುವುದರಿಂದ ಮುಖದ ಚರ್ಮ ಸುಕ್ಕುಗಟ್ಟುತ್ತದೆ.
*ದಿಂಬಿನ ಮೇಲೆ ಮಲಗುವುದರಿಂದ ಮುಖದ ಚರ್ಮಕ್ಕೆ ಒತ್ತಾಗಿ ಚರ್ಮಗಳಿಗೆ ಉಸಿರಾಡಲು ಕಷ್ಟವಾಗುತ್ತದೆ. ನೀವು 8 ಗಂಟೆಗಳ ಕಾಲ ಹೀಗೆ ಮಲಗಿದರೆ ಮುಖದ ಚರ್ಮಕ್ಕೆ ಹಾನಿಯಾಗುತ್ತದೆ. ಇದರಿಂದ ಮುಖದಲ್ಲಿ ಚರ್ಮ ಸುಕ್ಕುಗಟ್ಟುತ್ತದೆ.
*ದೇಹದ ಒಂದು ಭಾಗದಲ್ಲಿ ಮಲಗುವುದರಿಂದ ಇಡೀ ದೇಹದ ಭಾರ ಒಂದೇ ಕಡೆಗೆ ಬಿದ್ದು ನೋವಾಗುವುದರಿಂದ ಸರಿಯಾಗಿ ನಿದ್ರೆ ಮಾಡಲು ಆಗುವುದಿಲ್ಲ. ಇದರಿಂದ ಕಣ್ಣಿನ ಸುತ್ತ ಕಪ್ಪು ಕಲೆ ಮೂಡುತ್ತದೆ. ಇದರಿಂದ ರಕ್ತಸಂಚಾರದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ಚರ್ಮದ ಮೇಲೆ ಹಾನಿಯುಂಟಾಗುತ್ತದೆ.