ಮಹರ್ಷಿ ವೇದವ್ಯಾಸರು ಬರೆದಿದ್ದಾರೆ ಎನ್ನಲಾದ ಭವಿಷ್ಯ ಪುರಾಣ ಹದಿನೆಂಟು ಪುರಾಣಗಳಲ್ಲಿ ಒಂದು. ಈ ಪುರಾಣದಲ್ಲಿ ವೃತ ಹಾಗೂ ದಾನಕ್ಕೆ ಸಂಬಂಧಿಸಿದ ವಿಷಯಗಳನ್ನು ವಿಸ್ತಾರವಾಗಿ ಹೇಳಲಾಗಿದೆ.
ಭವಿಷ್ಯ ಪುರಾಣದ ಪ್ರಕಾರ ಪ್ರತಿಯೊಂದು ದಿನಾಂಕವೂ ವ್ಯಕ್ತಿಯ ತನು, ಮನದ ಮೇಲೆ ಪ್ರಭಾವ ಬೀರುತ್ತದೆ. ನೀವು ಸೇವಿಸುವ ಆಹಾರ ಹಾಗೂ ಕುಡಿಯುವ ನೀರು ಕೂಡ ನಿಮ್ಮ ಮೇಲೆ ಪ್ರಭಾವ ಬೀರುತ್ತದೆ. ಭವಿಷ್ಯ ಪುರಾಣದಲ್ಲಿ ಹೇಳಿದಂತೆ ನೀವು ಡಯೆಟ್ ಪ್ಲಾನ್ ಮಾಡಿದ್ರೆ ಆರೋಗ್ಯದ ಜೊತೆಗೆ ಆರ್ಥಿಕ ವೃದ್ಧಿ ಹಾಗೂ ಪುಣ್ಯ ಪ್ರಾಪ್ತಿಯಾಗಲಿದೆ.
ಪ್ರತಿಪದ ತಿಥಿಯಂದು ಹಾಲು ಕುಡಿದ್ರೆ ದೇಹ ಬಲಿಷ್ಠಗೊಳ್ಳುತ್ತದೆ.
ದ್ವಿತಿಯ ತಿಥಿಯಂದು ಉಪ್ಪಿಲ್ಲದ ಆಹಾರ ಸೇವನೆ ಮಾಡಬೇಕು. ರಕ್ತ ಸಂಚಾರ ಸರಿಯಿರುವ ಜೊತೆಗೆ ವಿಷಕಾರಿ ಅಂಶ ದೇಹದಿಂದ ಹೊರಗೆ ಬರುತ್ತದೆ.
ತೃತಿಯ ತಿಥಿಯಂದು ಎಳ್ಳಿನಿಂದ ಮಾಡಿದ ಯಾವುದೇ ಆಹಾರ ಸೇವನೆ ಮಾಡಿದಲ್ಲಿ ದೇಹಕ್ಕೆ ಕ್ಯಾಲ್ಸಿಯಂ ಹಾಗೂ ಪ್ರೋಟೀನ್ ಸಿಗುತ್ತದೆ.
ಚತುರ್ಥಿ ತಿಥಿಯಂದು ಹಾಲು ಕುಡಿದ್ರೆ ಸಾಕಷ್ಟು ಅನುಕೂಲಗಳಿವೆ.
ಪಂಚಮಿಯಂದು ಹಣ್ಣು ತಿಂದ್ರೆ ಪ್ರೋಟೀನ್ ಪ್ರಾಪ್ತಿಯಾಗುತ್ತದೆ.
ಷಷ್ಠಿ ತಿಥಿಯಂದು ಹಸಿ ತರಕಾರಿ ಸೇವನೆ ಮಾಡಿದ್ರೆ ಆರೋಗ್ಯ ಪ್ರಾಪ್ತಿಯಾಗಲಿದೆ.
ಹೊಟ್ಟೆ ಸಮಸ್ಯೆ ಹಾಗೂ ಕೊಲೆಸ್ಟ್ರಾಲ್ ಸಮಸ್ಯೆಯಿದ್ದಲ್ಲಿ ಸಪ್ತಮಿಯಂದು ಬಿಲ್ವಪತ್ರೆ ಸೇವನೆ ಮಾಡಬೇಕು.
ದಶಮಿ ಹಾಗೂ ಏಕಾದಶಿಯಂದು ತುಪ್ಪ ತಿನ್ನುವುದರಿಂದ ಮುಖ ಹೊಳಪು ಪಡೆಯಲಿದೆ. ಹಾಗೆ ದೇಹಕ್ಕೆ ಶಕ್ತಿ ಸಿಗಲಿದೆ.
ದ್ವಾದಶಿಯಂದು ಪಾಯಸ, ತ್ರಯೋದಶಿಯಂದು ಗೋ ಮೂತ್ರ ಸೇವನೆ ಮಾಡಿದ್ರೆ ಕುಷ್ಠ ರೋಗ ಹಾಗೂ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.