ಅರಿಶಿನ ಆರೋಗ್ಯಕ್ಕೆ, ಸೌಂದರ್ಯಕ್ಕೆ ಬಹಳ ಮುಖ್ಯ ಎಂಬುದು ಹೆಚ್ಚಿನ ಜನರಿಗೆ ತಿಳಿದಿದೆ. ಆದರೆ ಅದನ್ನು ಸೂಕ್ತವಾಗಿ ಬಳಸುವ ಕ್ರಮ ಮಾತ್ರ ಅಸಡ್ಡೆಗೆ ಒಳಗಾಗುತ್ತಲೇ ಇದೆ.
ಅರಿಶಿನವನ್ನು ಬಳಸುವ ವಿಧಾನ ತಿಳಿಯೋಣ ಬನ್ನಿ.
ರಾತ್ರಿ ಮಲಗುವ ಮುನ್ನ ಕುಡಿಯುವ ಹಾಲಿಗೆ ಚಿಟಿಕೆ ಅರಿಶಿನ ಬೆರೆಸಿ ಕುಡಿಯಿರಿ. ತಣ್ಣಗಿನ ಹಾಲಿಗೆ ಬೆರೆಸಿ ಕುಡಿಯುವುದು ಒಳ್ಳೆಯದಲ್ಲ.
ಅಡುಗೆ ಮನೆಯಲ್ಲಿ ನಾವು ನಿತ್ಯ ಬಳಸುವ ಅರಿಶಿನ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಗಾಯವಾದಾಗ ಚಿಟಿಕೆ ಅರಿಶಿನ ಪುಡಿ ಉದುರಿಸಿದರೆ ಸೂಕ್ಷ್ಮ ಜೀವಿಗಳನ್ನು ಪ್ರತಿಬಂಧಿಸುತ್ತದೆ.
ಜ್ವರಕ್ಕೆ ಕಾರಣವಾಗುವ ಉಸಿರಾಟದ ವೈರಸ್ ಗಳನ್ನು ತೊಡೆದು ಹಾಕುತ್ತದೆ. ಇದರ ಎಣ್ಣೆಯ ಬಳಕೆಯಿಂದ ಕಫ, ಕೆಮ್ಮು, ಅಸ್ತಮಾ ಸಮಸ್ಯೆಯನ್ನು ದೂರ ಮಾಡಬಹುದು.
ಜೀರ್ಣಕ್ರಿಯೆ ಹೆಚ್ಚಿಸುವ ಅರಿಶಿನ, ಹೊಟ್ಟೆ ನೋವನ್ನು ಕಡಿಮೆ ಮಾಡುತ್ತದೆ. ಯಕೃತ್ತಿನ ಕಾರ್ಯಗಳನ್ನು ಸುಧಾರಿಸುತ್ತದೆ.