ಬೆಳಿಗ್ಗಿನ ತಿಂಡಿ ಮಾಡುವುದೇ ದೊಡ್ಡ ತಲೆಬಿಸಿ. ತಿಂಡಿಗೆ ಏನೂ ಇಲ್ಲದೇ ಇದ್ದಾಗ ಸುಲಭದಲ್ಲಿ ಮಾಡಬಹುದಾದ ಅಕ್ಕಿರೊಟ್ಟಿ ಇಲ್ಲಿದೆ ನೋಡಿ.
ಸಾಮಗ್ರಿಗಳು: 2 ಕಪ್ – ಬೆಳ್ತಿಗೆ ಅಕ್ಕಿ , 2 ಕಪ್ – ಕುಚ್ಚಲಕ್ಕಿ, ತೆಂಗಿನಕಾಯಿ ತುರಿ – 1 ಕಪ್, ಈರುಳ್ಳಿ – 1 ದೊಡ್ಡದ್ದು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲಿಗೆ ಎರಡೂ ಬಗೆಯ ಅಕ್ಕಿಯನ್ನು ತೊಳೆದು 1 ಗಂಟೆಗಳ ನೆನೆಸಿಡಿ. ನಂತರ ಇದನ್ನು ಮಿಕ್ಸಿಗೆ ಹಾಕಿ. ರುಬ್ಬುವಾಗ ಅದಕ್ಕೆ ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ. ನಂತರ ಇದಕ್ಕೆ ಉಪ್ಪು ಹಾಗೂ ಕಾಯಿತುರಿ, ಈರುಳ್ಳಿ ಸೇರಿಸಿ ರುಬ್ಬಿ.
ನಂತರ ಗ್ಯಾಸ್ ಮೇಲೆ ತವಾ ಇಟ್ಟು ರುಬ್ಬಿಟ್ಟುಕೊಂಡ ಹಿಟ್ಟನ್ನು ಸ್ವಲ್ಪ ಕೈಯಲ್ಲಿ ತೆಗೆದುಕೊಂಡು ತವಾದ ಮೇಲೆ ತೆಳುವಾಗಿ ಹಚ್ಚಿ. ರೊಟ್ಟಿ ಬೇಯುವಾಗ ಅದರ ಮೇಲೆ ಸ್ವಲ್ಪ ಎಣ್ಣೆ ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಂಡು ಕಾಯಿ ಚಟ್ನಿ ಜತೆ ಸವಿಯಲು ಚೆನ್ನಾಗಿರುತ್ತದೆ.