alex Certify ಈ ರೀತಿಯಾಗಿ ಒಮ್ಮೆ ʼಸಾಂಬಾರುʼ ಮಾಡಿ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರೀತಿಯಾಗಿ ಒಮ್ಮೆ ʼಸಾಂಬಾರುʼ ಮಾಡಿ ನೋಡಿ

ಸಾಂಬಾರು ಎಂದರೆ ಎಲ್ಲರಿಗೂ ಇಷ್ಟ. ಇಡ್ಲಿ, ದೋಸೆ ಜತೆ ಸಾಂಬಾರು ಇದ್ದರೆ ಹೊಟ್ಟೆಗೆ ಇಳಿದಿದ್ದೇ ಗೊತ್ತಾಗುವುದಿಲ್ಲ. ಇಲ್ಲಿ ರುಚಿಕರವಾದ ಸಾಂಬಾರು ಮಾಡುವ ವಿಧಾನ ಇದೆ ಒಮ್ಮೆ ಮಾಡಿ ನೋಡಿ.

ಮಾಡುವ ವಿಧಾನ:

¼ ಕಪ್ ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ಕುಕ್ಕರ್ ಗೆ ಹಾಕಿ ಅದಕ್ಕೆ 1 ಕಪ್ ನೀರು, ಸ್ವಲ್ಪ ಎಣ್ಣೆ, ಚಿಟಿಕೆ ಅರಿಶಿನ ಸೇರಿಸಿ, 2 ಆಲೂಗಡ್ಡೆಯನ್ನು ಕತ್ತರಿಸಿಕೊಂಡು ಹಾಕಿ 1 ವಿಷಲ್ ಕೂಗಿಸಿಕೊಳ್ಳಿ. ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದು ಬಿಸಿಯಾಗುತ್ತಲೆ ಅದಕ್ಕೆ 2 ಚಮಚ ಎಣ್ಣೆ, ¼ ಟೀ ಸ್ಪೂನ್ ಸಾಸಿವೆ, ¼ ಟೀ ಸ್ಪೂನ್ ಜೀರಿಗೆ, 2 ಒಣಮೆಣಸು, 2 ಹಸಿಮೆಣಸು, ಕರಿಬೇವು 5 ಎಸಳು ಹಾಕಿ ನಂತರ 10 ಸಾಂಬಾರ್ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಇದಕ್ಕೆ 1 ಟೊಮೆಟೊ ಕತ್ತರಿಸಿಕೊಂಡು ಹಾಕಿ ಫ್ರೈ ಮಾಡಿ. ಟೊಮೆಟೊ ಮೆತ್ತಗಾಗುವವರೆಗೆ ಮುಚ್ಚಿಡಿ. ಮಿಕ್ಸಿ ಜಾರಿಗೆ 3 ಟೇಬಲ್ ಸ್ಪೂನ್ ತೆಂಗಿನಕಾಯಿತುರಿ, ¼ ಟೀ ಸ್ಪೂನ್ ಸೋಂಪು, ಸಣ್ಣ ತುಂಡು ಚಕ್ಕೆ, ಹಾಕಿ ರುಬ್ಬಿಕೊಳ್ಳಿ.

ಟೊಮೆಟೊ ಮೆತ್ತಗಾದ ಮೇಲೆ ಅದಕ್ಕೆ ರುಬ್ಬಿಕೊಂಡ ಮಸಾಲೆ, 1 ಚಮಚ ಖಾರದ ಪುಡಿ ಸೇರಿಸಿ 2 ನಿಮಿಷಗಳ ಕಾಲ ಕೈಯಾಡಿಸಿ ನಂತರ ಅದಕ್ಕೆ ಬೇಯಿಸಿಕೊಂಡ ಬೇಳೆ ಹಾಕಿ ನಿಮಗೆ ಎಷ್ಟು ಬೇಕೋ ಅಷ್ಟು ನೀರು ಸೇರಿಸಿಕೊಂಡು ರುಚಿಗೆ ತಕ್ಕಷ್ಟು ಉಪ್ಪು, ಸಣ್ಣ ತುಂಡು ಬೆಲ್ಲ ಸೇರಿಸಿ ಚೆನ್ನಾಗಿ ಕುದಿಸಿ ಕೊತ್ತಂಬರಿಸೊಪ್ಪು ಉದುರಿಸಿದರೆ ರುಚಿಕರವಾದ ಸಾಂಬಾರು ಸಿದ್ದವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...