ಗಂಡ-ಹೆಂಡತಿಗೆ ಉನ್ನತ ಸ್ಥಾನ ನೀಡ್ತಾನೆ. ಹಾಗೆ ನೀಡಿದ್ರೆ ಮಾತ್ರ ಸಂಸಾರ ಸುಖಕರವಾಗಿರಲು ಸಾಧ್ಯ. ದಾಂಪತ್ಯ ಸಂತೋಷಮಯವಾಗಿರಬೇಕೆಂದ್ರೆ ಹೊಂದಾಣಿಕೆ ಬಹಳ ಮುಖ್ಯ. ಪತಿ-ಪತ್ನಿ ಸಂಬಂಧ ಸೂಜಿ-ದಾರದಂತೆ. ಎರಡೂ ಬಂಧಿಯಾಗಿದ್ರೆ ಮಾತ್ರ ಸಂಸಾರ ಸರಿಯಾಗಿರುತ್ತದೆ.
ಮದುವೆ ಸಂದರ್ಭದಲ್ಲಿ ಜಾತಕ ನೋಡಿ ಮದುವೆ ಮಾಡಲಾಗುತ್ತದೆ. ಕೆಲ ರಾಶಿಯ ಪುರುಷರು ಪತ್ನಿಯನ್ನು ಪ್ರೀತಿಯಿಂದ ನೋಡಿಕೊಳ್ತಾರೆ. ಈ ಕೆಳಗಿನ ರಾಶಿ ಹುಡುಗ್ರು ಸಿಕ್ಕರೆ ಮದುವೆಗೆ ನಿರಾಕರಿಸಬೇಡಿ.
ಮೇಷ : ಈ ರಾಶಿಯ ಪುರುಷ ತನ್ನ ಪತ್ನಿಯನ್ನು ಹೂವಿನಂತೆ ನೋಡಿಕೊಳ್ತಾನಂತೆ. ಈ ರಾಶಿಯ ಪತಿ, ಸದಾ ತನ್ನ ಪತ್ನಿಯನ್ನು ಪ್ರೀತಿಸ್ತಾನಂತೆ. ಈ ರಾಶಿ ಹುಡುಗ್ರು ಪತ್ನಿ ಮೇಲೆ ಹೆಚ್ಚು ಕಾಳಜಿ ವಹಿಸ್ತಾರೆ. ಪತ್ನಿಯ ಸಣ್ಣಪುಟ್ಟ ವಿಷ್ಯಕ್ಕೂ ಮಹತ್ವ ನೀಡ್ತಾರೆ.
ಸಿಂಹ ರಾಶಿ : ಈ ರಾಶಿಯ ಪತಿ ತನ್ನ ಪತ್ನಿಯನ್ನು ಒಂದು ಕ್ಷಣಕ್ಕೂ ಒಂಟಿಯಾಗಿ ಬಿಟ್ಟಿರುವುದಿಲ್ಲ. ಹೆಂಡತಿ ಇಲ್ಲದೆ ಇವ್ರು ಬದುಕುವುದಿಲ್ಲ. ಈ ರಾಶಿ ಹುಡುಗ್ರಿಗೆ ಪತ್ನಿ ಮೇಲೆ ಅಪಾರ ಪ್ರೀತಿಯಿರುತ್ತದೆ. ಅವ್ರಿಗೆ ಜೀವನದಲ್ಲಿ ಪ್ರತಿಯೊಂದು ಪತ್ನಿಯೇ ಆಗಿರುತ್ತಾಳೆ.
ಧನು ರಾಶಿ : ಈ ರಾಶಿಯ ಪುರುಷ, ಪತ್ನಿ ಜೊತೆ ವಿಶೇಷ ಸಂಬಂಧ ಹೊಂದಿರುತ್ತಾನೆ. ಅದನ್ನು ಸಂಭಾಳಿಸುತ್ತಾನೆ. ಪತ್ನಿ ಮುಖದಲ್ಲಿ ಸದಾ ನಗುವಿರಲಿ ಎಂದು ಬಯಸುತ್ತಾನೆ. ಪತ್ನಿ ಕಣ್ಣಲ್ಲಿ ನೀರು ಬರುವುದನ್ನು ಈತ ಎಂದಿಗೂ ಸಹಿಸುವುದಿಲ್ಲ.