ಮೇಷ : ಕಚೇರಿಯಲ್ಲಿ ನಿಮ್ಮ ಕೆಲಸವು ಮೇಲಾಧಿಕಾರಿಗಳಿಗೆ ಮೆಚ್ಚುಗೆ ಎನಿಸಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಹೆಚ್ಚಾಗಲಿದೆ. ಹೊಸ ಉದ್ಯಮಗಳಿಗೆ ಹೂಡಿಕೆ ಮಾಡಲು ಬಯಸುವವರಿಗೆ ಇದು ಶುಭ ದಿನವಾಗಿದೆ.
ವೃಷಭ : ನಿಮ್ಮ ವ್ಯಾಪಾರ – ವ್ಯವಹಾರಗಳ ವಿಚಾರದಲ್ಲಿ ತಂದೆಯು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಆರ್ಥಿಕ ವಿಚಾರವಾಗಿ ಸ್ನೇಹಿತರೊಂದಿಗೆ ಉಂಟಾಗಿದ್ದ ಮುನಿಸು ಕ್ರಮೇಣವಾಗಿ ಸುಧಾರಿಸಲಿದೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಅನಿವಾರ್ಯ.
ಮಿಥುನ : ಕಿರಿಯ ಸೋದರನ ಆರ್ಥಿಕ ಸಂಕಷ್ಟಕ್ಕೆ ನೀವು ಹೆಗಲಾಗಲಿದ್ದೀರಿ. ಇದು ನಿಮ್ಮ ಪೋಷಕರಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಿಸಲಿದೆ. ಮನೆಗೆ ಪೀಠೋಪಕರಣಗಳನ್ನು ಖರೀದಿ ಮಾಡಲಿದ್ದೀರಿ. ನಿಮ್ಮ ವೈವಾಹಿಕ ಸಂಬಂಧದ ಬಗ್ಗೆ ಪೋಷಕರು ಚರ್ಚೆ ನಡೆಸಲಿದ್ದಾರೆ.
ಕಟಕ : ವ್ಯಾಪಾರ – ವ್ಯವಹಾರದಲ್ಲಿ ನೀವು ಲಾಭವನ್ನು ಹೊಂದಲಿದ್ದೀರಿ. ಕಚೇರಿಯಲ್ಲಿ ಭಯ ಪಟ್ಟು ಕೆಲಸ ಮಾಡುವಂತಹ ಸನ್ನಿವೇಶ ಎದುರಾಗಲಿದೆ. ಹತ್ತಿರದ ಸಂಬಂಧಿಗಳ ಭೇಟಿ ಮನಸ್ಸಿಗೆ ಖುಷಿ ಎನಿಸಲಿದೆ. ವಿದ್ಯಾರ್ಥಿಗಳಿಗೆ ದೈವಾನುಗ್ರಹ ಇರಲಿದೆ.
ಸಿಂಹ : ಪೂರ್ವಜರ ಆಸ್ತಿಯಿಂದ ನಿಮಗೆ ಲಾಭ ದೊರಕಿದೆ. ನಿಮ್ಮ ಜೀವನ ಸಂಗಾತಿಯಿಂದ ಧನಲಾಭ ಹೊಂದಲಿದ್ದೀರಿ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಭಾಗ್ಯವಿದೆ. ವ್ಯಾಪಾರ – ವ್ಯವಹಾರಗಳಲ್ಲಿ ಸ್ಥಿರತೆಯನ್ನು ಕಾಣಲಿದ್ದೀರಿ.
ಕನ್ಯಾ : ಜಾಗದ ವಿಚಾರಕ್ಕೆ ನೆರೆಮನೆಯವರ ಜೊತೆ ದೊಡ್ಡ ಗಲಾಟೆಯೇ ನಡೆಯಬಹುದು. ಯಾವುದೇ ಸಂದರ್ಭದಲ್ಲಿಯೂ ಮಾತಿನ ಮೇಲೆ ಹಿಡಿತವಿತಲಿ. ಇಂದು ನೀವು ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸಲಿದ್ದೀರಿ. ಕುಲದೇವರನ್ನು ಪ್ರಾರ್ಥಿಸಿ.
ತುಲಾ : ಅನಾರೋಗ್ಯದಲ್ಲಿ ಬಳಲುತ್ತಿದ್ದವರು ಇಂದು ಚೇತರಿಕೆ ಕಾಣಲಿದ್ದಾರೆ. ಸಹೋದರಿಯು ನಿಮಗೆ ಇಂದು ಉಡುಗೊರೆ ನೀಡಲಿದ್ದಾರೆ. ಆಧ್ಯಾತ್ಮಿಕ ಕ್ಷೇತ್ರದಲ್ಲಿ ಒಲವು ತೋರಲಿದ್ದೀರಿ. ಅನಗತ್ಯ ಖರ್ಚು ವೆಚ್ಚಗಳ ಮೇಲೆ ಹಿಡಿತ ಇರಲಿ.
ವೃಶ್ಚಿಕ : ಆದಾಯಕ್ಕಿಂತ ಹೆಚ್ಚಿನ ಖರ್ಚಿನಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಲಿದ್ದೀರಿ. ಸಾಲಗಾರರು ಮನೆ ಬಾಗಿಲಿಗೆ ಬರಲಿದ್ದಾರೆ. ಶಿವನನ್ನು ಆರಾಧಿಸಿ. ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕರವಾಗಿದೆ.
ಧನು : ಹಿರಿಯ ಸಹೋದರನಿಂದ ನೀವಿಂದು ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಮುನ್ನಡೆ ಕಾದಿದೆ. ಸೊಸೆಯು ಮನೆಯ ಶಾಂತಿಯನ್ನು ಕದಡುವ ಸಾಧ್ಯತೆ ಇದೆ.
ಮಕರ : ನೀವಿಂದು ಉದ್ಯಮದಲ್ಲಿ ಅತ್ಯುತ್ತಮ ಯಶಸ್ಸನ್ನು ಕಾಣಲಿದ್ದೀರಿ. ಭೂಮಿ ಖರೀದಿ ಮಾಡ ಬಯಸುವವರಿಗೆ ಇದು ಶುಭ ದಿನವಾಗಿದೆ. ವೃತ್ತಿ ರಂಗದಲ್ಲಿ ನಿಮ್ಮ ಸಾಮರ್ಥ್ಯ ಹೆಚ್ಚಲಿದೆ.
ಕುಂಭ : ಉದ್ಯೋಗ ಸಿಗದೇ ಅಲೆದಾಡುತ್ತಿದ್ದ ನಿಮಗೆ ಉದ್ಯೋಗ ಸಿಗುವ ಸಾಧ್ಯತೆ ಇದೆ. ಇಂದು ನೀವು ವಾಹನ ಖರೀದಿ ಮಾಡಲಿದ್ದೀರಿ. ಸಂಗಾತಿಯ ಕುಟುಂಬಸ್ಥರ ಜೊತೆ ವಾಗ್ವಾದ ಉಂಟಾಗಬಹುದು. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಲಿದ್ದೀರಿ.
ಮೀನ : ಆಧ್ಮಾತ್ಮಿಕ ಕ್ಷೇತ್ರದತ್ತ ಒಲವು ತೋರಲಿದ್ದೀರಿ. ಸಂಗಾತಿಯು ಇಂದು ಅದೃಷ್ಟದಿಂದ ಧನಲಾಭ ಪಡೆಯಲಿದ್ದಾರೆ. ಉದ್ಯಮದಲ್ಲಿ ಸಂಗಾತಿ ಸಾಧಿಸುತ್ತಿರುವ ಯಶಸ್ಸು ನಿಮಗೆ ಸಂತೋಷ ನೀಡಲಿದೆ. ಪೋಷಕರ ಆರೋಗ್ಯದ ಬಗ್ಗೆ ಆದಷ್ಟು ಜಾಗ್ರತೆ ಇರಲಿ.