ಮೇಷ ರಾಶಿ
ಕೋಪವನ್ನು ನಿಯಂತ್ರಿಸಿಕೊಳ್ಳುವುದು ಅತ್ಯವಶ್ಯಕ. ಸಮಾಧಾನದಿಂದಿದ್ದರೆ ಹದಗೆಡಬಹುದಾದ ಸಂಬಂಧವನ್ನು ಉಳಿಸಿಕೊಳ್ಳಬಹುದು. ನೀವು ಕೈಗೊಂಡ ಕೆಲಸಗಳು ಕೂಡ ಯಶಸ್ವಿಯಾಗುತ್ತವೆ.
ವೃಷಭ ರಾಶಿ
ಶಾರೀರಿಕವಾಗಿ ಅಸ್ವಸ್ಥರಾಗಿರುತ್ತೀರಾ. ಕೆಲಸದಲ್ಲಿ ಯಶಸ್ಸು ಸಿಗುವುದು ವಿಳಂಬವಾಗುವುದರಿಂದ ನಿರಾಸೆ ಆವರಿಸುತ್ತದೆ. ಯಾವುದೇ ಹೊಸ ಕೆಲಸವನ್ನು ಆರಂಭಿಸಬೇಡಿ.
ಮಿಥುನ ರಾಶಿ
ಇಂದು ಮೋಜು-ಮಸ್ತಿಯಲ್ಲಿ ದಿನ ಕಳೆಯುತ್ತೀರಿ. ಶಾರೀರಿಕ ಮತ್ತು ಮಾನಸಿಕವಾಗಿ ಸಂತೋಷ ತುಂಬಿರುತ್ತದೆ. ಮಿತ್ರರು ಮತ್ತು ಕುಟುಂಬದವರೊಂದಿಗೆ ಪ್ರವಾಸಕ್ಕೆ ತೆರಳಲಿದ್ದೀರಿ.
ಕರ್ಕ ರಾಶಿ
ವ್ಯವಹಾರದಲ್ಲಿ ಇಂದು ಲಾಭದಾಯಕ ದಿನ. ಕುಟುಂಬಸ್ಥರೊಂದಿಗೆ ಆನಂದವಾಗಿ ಸಮಯ ಕಳೆಯಲಿದ್ದೀರಿ. ಮನೆಯಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ.
ಸಿಂಹ ರಾಶಿ
ಇಂದು ಸೃಜನಾತ್ಮಕ ಮತ್ತು ಕಲೆಗೆ ಸಂಬಂಧಪಟ್ಟ ಕೆಲಸಗಳಿಗೆ ದಿನ ಉತ್ತಮವಾಗಿದೆ. ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ. ಓದಿನಲ್ಲಿ ಯಶಸ್ಸು ಸಿಗಲಿದೆ.
ಕನ್ಯಾ ರಾಶಿ
ಇಂದು ಪ್ರತಿಯೊಂದು ಕಾರ್ಯದಲ್ಲೂ ಪ್ರತಿಕೂಲತೆಯ ಅನುಭವವಾಗುತ್ತದೆ. ಆರೋಗ್ಯ ಹದಗೆಡುವ ಸಾಧ್ಯತೆ ಇದೆ. ಮನಸ್ಸು ಚಿಂತಾಗ್ರಸ್ಥವಾಗಿರಲಿದೆ.
ತುಲಾ ರಾಶಿ
ಮನೆಯಲ್ಲಿ ಕಲಹಮುಕ್ತ ವಾತಾವರಣವಿರುತ್ತದೆ. ಇದಕ್ಕಾಗಿ ನೀವು ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳಿ. ನಿಮ್ಮ ಮಾತುಗಳಿಂದ ಇತರರಿಗೆ ನೋವುಂಟಾಗಬಹುದು.
ವೃಶ್ಚಿಕ ರಾಶಿ
ಇಂದು ಧಾರ್ಮಿಕ ಪ್ರವಾಸ ಕೈಗೊಳ್ಳಲಿದ್ದೀರಿ. ಆಧ್ಯಾತ್ಮದೆಡೆಗೆ ಆಸಕ್ತಿ ಮೂಡಲಿದೆ. ನಿಗದಿತ ಕೆಲಸ ಕಾರ್ಯಗಳನ್ನು ಇಂದು ಪೂರ್ಣಗೊಳಿಸಲಿದ್ದೀರಿ.
ಧನು ರಾಶಿ
ಇಂದು ಆನಂದವಾಗಿ ದಿನ ಕಳೆಯುತ್ತೀರಿ. ಇಂದು ಗೆಲುವಿನ ಯೋಗವಿದೆ. ಪ್ರತಿಯೊಂದು ಕಾರ್ಯದಲ್ಲೂ ನಿಮಗೆ ಯಶಸ್ಸು ಸಿಗುತ್ತದೆ.
ಮಕರ ರಾಶಿ
ಇಂದು ಆಧ್ಯಾತ್ಮಿಕ ಮತ್ತು ಧಾರ್ಮಿಕ ವಿಷಯಗಳ ಬಗ್ಗೆ ಆಸಕ್ತಿ ಹೆಚ್ಚಾಗಿರುತ್ತದೆ. ಇದರಿಂದ ಖರ್ಚು ಕೂಡ ಹೆಚ್ಚಾಗಲಿದೆ. ಆರೋಗ್ಯ ಸಂಬಂಧಿ ಸಮಸ್ಯೆಗಳು ದೂರವಾಗಲಿವೆ.
ಕುಂಭ ರಾಶಿ
ಇಂದು ಲಾಭದಾಯಕ ದಿನ. ವ್ಯವಹಾರ ಕ್ಷೇತ್ರದಲ್ಲಿ ಲಾಭವಾಗಲಿದೆ. ಮಿತ್ರರ ಭೇಟಿಯಿಂದ ಮನಸ್ಸಿಗೆ ಆನಂದ ಸಿಗಲಿದೆ.
ಮೀನ ರಾಶಿ
ಬರವಣಿಗೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಲಿದ್ದೀರಿ. ವಿದ್ಯಾರ್ಥಿಗಳು ಓದಿನಲ್ಲಿ ಒಳ್ಳೆ ಸಾಧನೆ ಮಾಡುತ್ತಾರೆ. ಪ್ರೇಮ ಪ್ರಣಯದ ವಿಷಯದಲ್ಲೂ ಯಶಸ್ಸು ಸಿಗಲಿದೆ. ಪ್ರಿಯ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ.