alex Certify ಈ ರಾಶಿಯ ʼವಿದ್ಯಾರ್ಥಿʼಗಳಿಗಿದೆ ಇಂದು ಶುಭ ಯೋಗ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ʼವಿದ್ಯಾರ್ಥಿʼಗಳಿಗಿದೆ ಇಂದು ಶುಭ ಯೋಗ….!

ಮೇಷ : ಇಂದು ಅನೇಕ ವಿಚಾರಗಳಲ್ಲಿ ನೀವು ನಿರಾಶೆಗೊಳ್ಳಲಿದ್ದೀರಿ. ಪ್ರೇಮ ಜೀವನದಲ್ಲಿ ನಿಮಗೆ ನೋವುಂಟಾಗಲಿದೆ. ಕುಟಂಬದ ವಿವಾದಗಳ ವಿಚಾರದಲ್ಲಿ ಮೌನಕ್ಕೆ ಜಾರಿದಷ್ಟು ನಿಮಗೆ ಸಮಸ್ಯೆಯಾಗಲಿದೆ. ಹೀಗಾಗಿ ಚರ್ಚೆಗಳಿಂದ ನೀವು ದೂರವಿರಿ.

ವೃಷಭ : ಮಕ್ಕಳ ನಡವಳಿಕೆಯ ಮೇಲೆ ವಿಶೇಷ ಕಾಳಜಿ ವಹಿಸಿ. ಇಲ್ಲವಾದಲ್ಲಿ ಮಕ್ಕಳು ಕೈತಪ್ಪಿ ಹೋಗುವ ಸಾಧ್ಯತೆ ಇದೆ. ಕಚೇರಿ ಕೆಲಸದಲ್ಲಿ ತಾಳ್ಮೆ ಇರಲಿ. ವಿದ್ಯಾರ್ಥಿಗಳ ಕಠಿಣ ಪರಿಶ್ರಮಕ್ಕೆ ಸರಿಯಾದ ಫಲ ಸಿಗಲಿದೆ. ವ್ಯಾಪಾರಸ್ಥರು ಅನುಭವಿಗಳಿಂದ ಉತ್ತಮ ಸಲಹೆಯನ್ನು ಪಡೆಯಲಿದ್ದಾರೆ.

ಮಿಥುನ : ವ್ಯಾಪಾರ – ವ್ಯವಹಾರಗಳಲ್ಲಿ ಸಕರಾತ್ಮಕ ಬೆಳವಣಿಗೆಗಳನ್ನು ಕಾಣಲಿದ್ದೀರಿ. ಕರಕುಶಲ ಕಾರ್ಮಿಕರಿಗೆ ಈ ದಿನ ಅಷ್ಟೊಂದು ಶುಭಕರವಲ್ಲ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಆದರೂ ಅಗತ್ಯಕ್ಕೂ ಮೀರಿದ ಖರ್ಚು ಬೇಡ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ.

ಕಟಕ : ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ಯಶಸ್ಸನ್ನು ಹೊಂದಲಿದ್ದೀರಿ. ಸಂಗಾತಿಯೊಂದಿಗೆ ನಿಮ್ಮ ಸಂಬಂಧ ಇನ್ನಷ್ಟು ಹಳಸಲಿದೆ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಇಲ್ಲವಾದಲ್ಲಿ ದೊಡ್ಡ ಸಮಸ್ಯೆ ಉಂಟಾಗಬಹುದು. ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗಲಿದ್ದೀರಿ.

ಸಿಂಹ : ಆರ್ಥಿಕ ಪರಿಸ್ಥಿತಿಯಲ್ಲಿ ಗಣನೀಯ ಸುಧಾರಣೆ ಕಾಣಲಿದ್ದೀರಿ. ಹಳೆಯ ಸಾಲಗಳೆಲ್ಲ ತೀರಲಿದೆ. ಸರ್ಕಾರಿ ಉದ್ಯೋಗಿಗಳು ಇಂದು ಶುಭ ಸುದ್ದಿಯನ್ನು ಕೇಳಲಿದ್ದಾರೆ. ಕಂಕಣ ಭಾಗ್ಯವಿದೆ. ವ್ಯವಹಾರದಲ್ಲಿ ಇರುವವರಿಗೆ ಇಂದು ವಿದೇಶಿ ಸಹವರ್ತಿಗಳು ಹೂಡಿಕೆಗೆ ಮುಂದಾಗಬಹುದು.

ಕನ್ಯಾ : ಹಣಕಾಸಿನ ವ್ಯವಹಾರಗಳಲ್ಲಿ ನಿಮಗೆ ನಿರೀಕ್ಷಿತ ಲಾಭ ಸಿಗಲಿದೆ. ಇದರಿಂದ ನೀವು ಸಂತುಷ್ಟರಾಗುವಿರಿ. ಮನೆದೇವರ ದೇಗುಲಕ್ಕೆ ಬೆಲೆಬಾಳುವ ವಸ್ತುವನ್ನು ಇಂದು ದಾನ ಮಾಡಲಿದ್ದೀರಿ. ಚಿಕ್ಕ ಪುಟ್ಟ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು. ಆದರೆ ಚಿಂತೆ ಬೇಡ. ಮನೆ ಮದ್ದಿನ ಮೂಲಕವೇ ಪರಿಹಾರವಿದೆ.

ತುಲಾ : ಸರ್ಕಾರಿ ಹುದ್ದೆಗಾಗಿ ಪ್ರಯತ್ನಿಸುತ್ತಿರುವವರಿಗೆ ಇಂದು ಯಶಸ್ಸಿದೆ. ಯಾವುದೇ ಉದ್ಯಮಗಳಲ್ಲಿ ಹೂಡಿಕೆ ಮಾಡುವ ಮುನ್ನ ನೂರು ಬಾರಿ ಯೋಚನೆ ಮಾಡಿ.ವ್ಯಾಪಾರಿಗಳಿಗೆ ದಿನದ ಆರಂಭ ಹೆಚ್ಚು ಶುಭಕರವಾಗಿಲ್ಲ. ಸಂಜೆ ವೇಳೆಗೆ ಶುಭ ಲಾಭವಿದೆ.

ವೃಶ್ಚಿಕ : ಈ ದಿನ ನಿಮಗೆ ಅತ್ಯಂತ ಮುಖ್ಯವಾದ್ದದ್ದು. ಇಂದು ನೀವು ಪ್ರೇಮ ನಿವೇದನೆ ಮಾಡಲಿದ್ದೀರಿ. ಇದು ನಿಮ್ಮ ಜೀವನದ ಅತ್ಯಮೂಲ್ಯ ಕ್ಷಣವಾಗಿರಲಿದೆ. ಮೇಲಾಧಿಕಾರಿಗಳಿಂದ ಪ್ರಶಂಸೆಯ ಮಾತುಗಳನ್ನು ಕೇಳುವಿರಿ. ವಿದ್ಯಾರ್ಥಿಗಳಿಗೆ ಪ್ರತಿಸ್ಪರ್ಧಿಗಳು ಹೆಚ್ಚಲಿದ್ದಾರೆ.

ಧನು : ಕಬ್ಬಿಣದ ವ್ಯಾಪಾರಿಗಳಿಗೆ ಇಂದು ಲಾಭವಿದೆ. ಅನಿರೀಕ್ಷಿತ ಮೂಲಗಳಿಂದ ಹಣ ಹರಿದು ಬರಲಿದೆ. ಸಂಗಾತಿ ನಿಮಗೆ ದುಬಾರಿ ಉಡುಗೊರೆಯನ್ನು ನೀಡಲಿದ್ದಾರೆ. ರಾಜಕೀಯ ವ್ಯಕ್ತಿಗಳಿಗೆ ಉತ್ತಮ ಸ್ಥಾನ ದೊರಕಲಿದೆ. ಉದ್ಯೋಗಕ್ಕಾಗಿ ಅರಸುತ್ತಿರುವವರು ಇಂದು ಯೋಗ್ಯ ಅವಕಾಶವನ್ನು ಪಡೆಯಲಿದ್ದಾರೆ.

ಮಕರ : ತಂದೆಯೊಂದಿಗೆ ಯಾವುದೇ ಕಾರಣಕ್ಕೂ ಮನಸ್ತಾಪ ಮಾಡಿಕೊಳ್ಳಬೇಡಿ. ಇದರಿಂದ ಮುಂದಿನ ದಿನಗಳಲ್ಲಿ ದೊಡ್ಡ ಪಶ್ಚಾತಾಪ ಉಂಟಾಗಬಹುದು. ಹೀಗಾಗಿ ಆದಷ್ಟು ತಾಳ್ಮೆಯಿಂದಿರಿ. ಸಂಗಾತಿಯ ಆರೋಗ್ಯ ಕೆಡುವ ಸಾಧ್ಯತೆ ಇದೆ.

ಕುಂಭ : ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಸುವ ಬಗ್ಗೆ ಪೋಷಕರ ಜೊತೆ ಚರ್ಚೆ ಮಾಡಲಿದ್ದೀರಿ. ಉದರ ಸಂಬಂಧಿ ಕಾಯಿಲೆಯು ನಿಮ್ಮನ್ನು ಕಾಡಲಿದೆ. ಇದರಿಂದಾಗಿ ಕಚೇರಿ ಕೆಲಸದ ಕಡೆಗೆ ಗಮನ ನೀಡಲು ಸಾಧ್ಯವಾಗದೇ ಹೋಗಬಹುದು. ಕಂಕಣ ಭಾಗ್ಯವಿದೆ.

ಮೀನ : ವಿದ್ಯಾರ್ಥಿಗಳಿಗೆ ಇದು ಅತ್ಯಂತ ಶುಭ ದಿನವಾಗಿದೆ. ಗುರುವಿನ ಅನುಗ್ರಹದಿಂದ ನೀವಿಂದು ಅಂದುಕೊಂಡ ಗುರಿಯನ್ನು ತಲುಪಲಿದ್ದೀರಿ. ಕಚೇರಿಯಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಲಿದೆ. ಆದರೆ ವ್ಯಾಪಾರಸ್ಥರಿಗೆ ಈ ದಿನ ಹೆಚ್ಚು ಶುಭಕರವಲ್ಲ. ಕುಟುಂಬದಲ್ಲಿ ಹೊಂದಾಣಿಕೆ ಇರಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...