alex Certify ಈ ರಾಶಿಯವರಿಗೆ ಇದೆ ಇಂದು ಉತ್ತಮ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಇದೆ ಇಂದು ಉತ್ತಮ ಅವಕಾಶ

ಮೇಷ : ವಿದ್ಯಾರ್ಥಿಗಳ ಪ್ರಯತ್ನಗಳು ಅವರ ಕೈ ಹಿಡಿಯಲಿದೆ. ಎಂತಹ ಸಂದಿಗ್ದ ಪರಿಸ್ಥಿತಿಯಲ್ಲಿಯೂ ನಿಮ್ಮ ಸಂಸ್ಕಾರವನ್ನು ಮರೆಯಬೇಡಿ. ನಿಮ್ಮ ಅತಿಯಾದ ಕೋಪದಿಂದ ಸಂಗಾತಿಗೆ ನಿಮ್ಮ ಮೇಲೆ ಜಿಗುಪ್ಸೆ ಮೂಡಬಹುದು.

ವೃಷಭ : ಸಾರ್ವಜನಿಕ ವಲಯದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಉದ್ಯಮದಲ್ಲಿ ನಿಮಗೆ ಆತ್ಮವಿಶ್ವಾಸ ಹೆಚ್ಚಲಿದೆ. ಭೂ ವಾಜ್ಯಗಳು ಸರಿ ಹೋಗಲಿವೆ. ನೀವು ಪಟ್ಟಿರುವ ಕನಸು ಈಡೇರುವ ಕಾಲ ಸನ್ನಿಹಿತವಾಗಲಿದೆ.

ಮಿಥುನ : ಉದ್ಯಮ ವಿಸ್ತರಣೆ ಮಾಡುವ ಬಗ್ಗೆ ಪೋಷಕರೊಂದಿಗೆ ಚರ್ಚೆ ನಡೆಸುವಿರಿ. ಮನೆಯಲ್ಲಿ ನಿಮ್ಮ ಮದುವೆ ವಿಚಾರದ ಪ್ರಸ್ತಾಪ ಕೇಳಿ ಬರಲಿದೆ. ಮಕ್ಕಳ ಒತ್ತಾಯಕ್ಕೆ ಮಣಿದು ವಾಹನ ಖರೀದಿ ಮಾಡಲಿದ್ದೀರಿ. ಆರೋಗ್ಯದ ಮೇಲೆ ಜಾಗ್ರತೆ ಇರಲಿ.

ಕಟಕ : ಇಂದು ನೀವು ಪ್ರಭಾವಿ ವ್ಯಕ್ತಿಗಳ ಸಂಪರ್ಕವನ್ನು ಸಾಧಿಸಲಿದ್ದೀರಿ. ಈ ವ್ಯಕ್ತಿಯು ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಹುಡುಕಿಕೊಡಲಿದ್ದಾರೆ. ವೃತ್ತಿ ಜೀವನದಲ್ಲಿ ಯಶಸ್ಸು ಕಾದಿದೆ.

ಸಿಂಹ : ಉದ್ಯಮದಲ್ಲಿ ನಿಮಗೆ ಉತ್ತಮ ಫಲಿತಾಂಶ ಸಿಗಲಿದೆ. ಸಂಬಳಕ್ಕೆ ಕೆಲಸ ಮಾಡುವವರು ಇಂದು ಹೆಚ್ಚಿನ ಒತ್ತಡ ಎದುರಿಸಬೇಕಾದೀತು. ಮನೆಯಲ್ಲಿ ಚಿನ್ನ ಖರೀದಿ ಮಾಡಲಿದ್ದಾರೆ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಭಾಗ್ಯವಿದೆ.

ಕನ್ಯಾ : ಯಾರೋ ತಪ್ಪು ಮಾಡ್ತಿದ್ದಾರೆ ಎಂದು ನೀವೂ ಮಾಡಿದರೆ ನಿಮಗೂ ಅವರಿಗೂ ವ್ಯತ್ಯಾಸ ಇರೋದಿಲ್ಲ. ನಿಮ್ಮ ಆತ್ಮಸಾಕ್ಷಿಗೆ ಧಕ್ಕೆ ಉಂಟಾಗುವಂತಹ ಘಟನೆಗಳು ಕಚೇರಿಯಲ್ಲಿ ನಡೆಯಲಿದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ.

ತುಲಾ : ವೈದ್ಯಕೀಯ ರಂಗದಲ್ಲಿ ಇರುವವರು ಇಂದು ಮೆಚ್ಚುಗೆ ಗಳಿಸಲಿದ್ದಾರೆ. ಗೆಳೆಯರ ಗುಂಪಿನಲ್ಲಿ ನಿಮಗೆ ಡಿಮ್ಯಾಂಡ್​ ಹೆಚ್ಚಲಿದೆ. ಉತ್ತಮ ಜನರ ಸಂಪರ್ಕ ಸಾಧಿಸಲಿದ್ದೀರಿ. ಸಂಗಾತಿಯು ತಮ್ಮ ತಪ್ಪಿಗೆ ನಿಮ್ಮಲ್ಲಿ ಕ್ಷಮೆ ಯಾಚಿಸಲಿದ್ದಾರೆ.

ವೃಶ್ಚಿಕ : ಏನೋ ಮಾಡಲು ಹೋಗಿ ಇರೋದನ್ನೂ ಕಳೆದುಕೊಳ್ಳಬೇಡಿ. ಮೂಗಿನ ನೇರಕ್ಕೆ ಯೋಚನೆ ಮಾಡೋದನ್ನು ನಿಲ್ಲಿಸಿ. ಇದರಿಂದ ನಿಮಗೂ ನಷ್ಟವಿದೆ. ನಿಮ್ಮ ಆದಾಯ ಹೆಚ್ಚಾಗಲಿದೆ. ಹಣ ಸಂಪಾದನೆಗೆ ಹೊಸ ಮಾರ್ಗ ಹುಡುಕಲಿದ್ದೀರಿ.

ಧನು : ಸಂಗಾತಿಯ ನಿರ್ಲಕ್ಷ್ಯ ಬುದ್ಧಿಯು ನಿಮಗೆ ಹತಾಶೆ ಮೂಡುವಂತೆ ಮಾಡಲಿದೆ. ಇದು ನಿಮ್ಮ ದಾಂಪತ್ಯ ಜೀವನದಲ್ಲಿ ಬಿರುಕಿಗೆ ಕಾರಣವಾಗಬಹುದು. ಮಕ್ಕಳ ಓದಿನ ಖರ್ಚಿಗಾಗಿ ಇಂದು ಹೆಚ್ಚು ಹಣ ಖರ್ಚಾಗಲಿದೆ. ವಿದ್ಯಾಭ್ಯಾಸದಲ್ಲಿ ವಿದ್ಯಾರ್ಥಿಗಳಿಗೆ ಪ್ರಗತಿ ಇದೆ.

ಮಕರ : ನಿಮ್ಮ ಇಷ್ಟಾರ್ಥಗಳು ಒಂದೊಂದಾಗಿಯೇ ನೆರವೇರಲಿದೆ. ವ್ಯಾಪಾರಿಗಳಿಗೆ ಇಂದು ಲಾಭವಿದೆ. ವಿದೇಶಕ್ಕೆ ಹೋಗಬೇಕು ಎಂಬ ನಿಮ್ಮ ಕನಸು ನನಸಾಗುವ ದಿನಗಳು ಹೆಚ್ಚು ದೂರವಿಲ್ಲ.

ಕುಂಭ : ಕಚೇರಿ ಕೆಲಸಕ್ಕೆಂದು ವಿದೇಶ ಪ್ರಯಾಣ ಕೈಗೊಂಡ ನೀವು ಅತಿಯಾಗಿ ದಣಿಯಲಿದ್ದೀರಿ. ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡಲಿದ್ದೀರಿ. ನಿಮ್ಮ ಜನಪ್ರಿಯತೆ ಹೆಚ್ಚಲಿದೆ. ನಿಮಗಿಂತ ಕೆಳ ಹಂತದಲ್ಲಿ ಕೆಲಸ ಮಾಡುವವರ ಮೇಲೆ ದರ್ಪ ತೋರಬೇಡಿ.

ಮೀನ : ಅಧಿಕಾರಿಗಳೊಂದಿಗೆ ಯಾವುದೇ ಕಾರಣಕ್ಕೂ ಘರ್ಷಣೆಗೆ ಇಳಿಯಬೇಡಿ. ಹಾಗಾದಲ್ಲಿ ಮಾತ್ರ ನಿಮಗೆ ಪ್ರಗತಿ ಇದೆ. ನಿಮ್ಮ ಹಿತಶತ್ರುಗಳು ನಿಮ್ಮ ವಿರುದ್ಧ ಕತ್ತಿ ಮಸೆಯಲಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಅವಕಾಶ ಸಿಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...