alex Certify ಈ ರಾಶಿಯವರ ಮನೆಯಲ್ಲಿರುತ್ತೆ ಇಂದು ಶಾಂತ ವಾತಾವರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರ ಮನೆಯಲ್ಲಿರುತ್ತೆ ಇಂದು ಶಾಂತ ವಾತಾವರಣ

ಮೇಷ ರಾಶಿ

ವ್ಯಾಪಾರಿ ವರ್ಗಕ್ಕೆ ಇಂದು ಶುಭ ದಿನ. ಆದಾಯ ವೃದ್ಧಿ ಜೊತೆಗೆ ಯಶಸ್ಸು ಕೂಡ ಸಿಗಲಿದೆ. ಬಾಕಿ ವಸೂಲಿ ಮಾಡಲಿದ್ದೀರಿ. ತಂದೆ ಮತ್ತು ಹಿರಿಯರಿಂದ ಲಾಭವಿದೆ. ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ.

ವೃಷಭ ರಾಶಿ

ಆನಂದ ಉಲ್ಲಾಸದಿಂದ ದಿನ ಕಳೆಯಲಿದ್ದೀರಿ. ವ್ಯಾಪಾರದಲ್ಲಿ ಲಾಭವಾಗಲಿದೆ. ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ವಿವಾಹ ಉತ್ಸುಕರಿಗೆ ಮದುವೆ ಯೋಗ ಕೂಡಿ ಬರಲಿದೆ.

ಮಿಥುನ ರಾಶಿ

ಕುಟುಂಬ ಸದಸ್ಯರೊಂದಿಗೆ ಮನೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಮಹತ್ವದ ಚರ್ಚೆ ನಡೆಸಲಿದ್ದೀರಿ. ಮನೆಯ ರೂಪು ರೇಷೆ ಬದಲಾವಣೆ ಬಗ್ಗೆ ವಿಚಾರ-ವಿಮರ್ಷೆ ನಡೆಯಲಿದೆ.

ಕರ್ಕ ರಾಶಿ

ದಿನ ಅನುಕೂಲಕರವಾಗಿದೆ ಮತ್ತು ಲಾಭದಾಯಕವೂ ಹೌದು. ಹಿರಿಯ ಅಧಿಕಾರಿಗಳ ಕೃಪೆ ನಿಮ್ಮ ಮೇಲಿರುತ್ತದೆ. ಇದರಿಂದ ನಿಮ್ಮ ಪ್ರಗತಿಯ ಮಾರ್ಗ ನಿರ್ವಿಘ್ನವಾಗಿರಲಿದೆ.

ಸಿಂಹ ರಾಶಿ

ಇಂದು ನಿಮ್ಮ ದಿನ ಮೋಜು-ಮಸ್ತಿಯಲ್ಲಿ ಕಳೆಯಲಿದೆ. ಮನೆಯಲ್ಲಿ ಶಾಂತವಾದ ವಾತಾವರಣವಿರುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯುವುದಿಲ್ಲ.

ಕನ್ಯಾ ರಾಶಿ

ಇಂದು ಹೊಸ ಕಾರ್ಯವನ್ನು ಆರಂಭಿಸಲು ಶುಭ ದಿನ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹೊರಗಡೆ ಊಟ-ತಿಂಡಿ ಮಾಡಬೇಡಿ. ಇಂದು ನಿಮ್ಮಲ್ಲಿ ಕೋಪ ಮತ್ತು ವ್ಯಗ್ರತೆ ಹೆಚ್ಚಾಗಿರುತ್ತದೆ.

ತುಲಾ ರಾಶಿ

ಇಂದು ಕೆಲಸದಲ್ಲಿ ಯಶಸ್ಸು ಸಿಗದೇ ಇರುವುದರಿಂದ ಹತಾಶೆ ನಿಮ್ಮನ್ನು ಆವರಿಸುತ್ತದೆ. ಕೋಪವನ್ನು ನಿಯಂತ್ರಿಸಿಕೊಳ್ಳಿ. ಸಂತಾನಕ್ಕೆ ಸಂಬಂಧಿಸಿದ ಪ್ರಶ್ನೆಗಳಿಂದ ಚಿಂತಿತರಾಗಲಿದ್ದೀರಿ.

ವೃಶ್ಚಿಕ ರಾಶಿ

ವ್ಯಾವಹಾರಿಕ ಕ್ಷೇತ್ರದಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಪ್ರತಿಸ್ಪರ್ಧಿಗಳಿಗೂ ಹೆಚ್ಚು ಲಾಭವಾಗುತ್ತದೆ. ಪಾಲುದಾರರಿಂದ ಲಾಭವಿದೆ. ವಿದೇಶದಿಂದ ಶುಭ ಸಮಾಚಾರ ಬರಲಿದೆ.

ಧನು ರಾಶಿ

ಶಾರೀರಿಕ ಮತ್ತು ಮಾನಸಿಕವಾಗಿ ಪ್ರತಿಕೂಲತೆಯ ಅನುಭವವಾಗಲಿದೆ. ನಿದ್ದೆಯ ಕೊರತೆಯಿಂದ ಆಲಸ್ಯ ಉಂಟಾಗುತ್ತದೆ. ಸ್ವಾದಿಷ್ಟ ಭೋಜನ ಹಾಗೂ ವಸ್ತ್ರಾಭರಣ ಯೋಗವಿದೆ.

ಮಕರ ರಾಶಿ

ಚಿಂತೆಯ ಕಾರ್ಮೋಡ ಸರಿಯಲಿದೆ, ಮನಸ್ಸು ಹಗುರವಾಗಲಿದೆ. ಶಾರೀರಿಕ ಆರೋಗ್ಯ ಉತ್ತಮವಾಗಿರುತ್ತದೆ. ಯಶಸ್ಸು, ಕೀರ್ತಿ ಮತ್ತು ಆನಂದ ದೊರೆಯುತ್ತದೆ. ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ.

ಕುಂಭ ರಾಶಿ

ಇಂದು ಪ್ರತಿ ವಿಷಯದಲ್ಲೂ ಅನುಕೂಲತೆಯ ಅನುಭವವಾಗಲಿದೆ. ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ. ಸುಖಮಯ ಘಟನೆಗಳು ಜರುಗುತ್ತವೆ. ಆರೋಗ್ಯ ಉತ್ತಮವಾಗಿರುತ್ತದೆ.

ಮೀನ ರಾಶಿ

ಮಾತಿನ ಮೇಲೆ ನಿಯಂತ್ರಣವಿರಲಿ. ಜಗಳ, ವಿವಾದದಲ್ಲಿ ತೊಡಗಬೇಡಿ. ಖರ್ಚನ್ನು ಕೂಡ ನಿಯಂತ್ರಿಸಿಕೊಳ್ಳಿ. ಮಿತ್ರರನ್ನು ಭೇಟಿಯಾಗಲಿದ್ದೀರಿ. ಒಡಹುಟ್ಟಿದವರ ಸಹಕಾರ ಸಿಗುತ್ತದೆ

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...