ಭಾದ್ರಪದ ಕೃಷ್ಣ ಪಕ್ಷದ ಅಮಾವಾಸ್ಯೆಯನ್ನು ಭಾದ್ರಪದ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ಬಾರಿ ಈ ಅಮಾವಾಸ್ಯೆ ಶನಿವಾರದಂದು ಬಂದಿದೆ. ಹಾಗಾಗಿ ಈ ದಿನ ಶನಿಯ ಮಹಾದಶೆ, ಸಾಡೆಸಾತಿಗೆ ಒಳಗಾದವರು ಈ ಕ್ರಮಗಳನ್ನು ಪಾಲಿಸಿದರೆ ಶನಿ ದೋಷದಿಂದ ಮುಕ್ತಿ ಪಡೆಯಬಹುದು.
ಈ ದಿನ ಬೆಲ್ಲ ಮತ್ತು ಕಪ್ಪು ಉದ್ದಿನ ಬೇಳೆಯನ್ನು ಬಟ್ಟೆಯಲ್ಲಿ ಕಟ್ಟಿ ಮಲಗುವಾಗ ತಲೆಯ ಬಳಿ ಇಟ್ಟು ಮರುದಿನ ಶನೇಶ್ವರನ ದೇವಸ್ಥಾನಕ್ಕೆ ಅರ್ಪಿಸಿ.
ಹಾಗೇ ಈ ದಿನ ಸಾಸಿವೆ ಎಣ್ಣೆಯನ್ನು ಪಾತ್ರೆಯಲ್ಲಿ ತೆಗೆದುಕೊಂಡು ಅದರಲ್ಲಿ ನಾಣ್ಯವನ್ನು ಹಾಕಿ ಅದರಲ್ಲಿ ನಿಮ್ಮ ಪ್ರತಿಬಿಂಬವನ್ನು ನೋಡಿ ಅದನ್ನು ಬಡವರು, ನಿರ್ಗತಿಕರಿಗೆ ದಾನ ಮಾಡಿ. ಇದರಿಂದ ಶನಿಯ ಕೆಟ್ಟ ದೃಷ್ಟಿಯನ್ನು ತಪ್ಪಿಸಬಹುದು.
ಹಾಗೇ ಈ ದಿನ ಸಂಜೆ ಅರಳೀಮರದ ಕೆಳಗೆ ಸಾಸಿವೆ ಎಣ್ಣೆಯಿಂದ ದೀಪ ಹಚ್ಚಿ, ಹಾಗೇ ಶನಿ ದೇವರ ದೇವಾಸ್ಥಾನದಲ್ಲಿ ಕೂಡ ದೀಪ ಬೆಳಗಿ. ಇದರಿಂದ ಶನಿದೋಷದಿಂದ ಪಾರಾಗಬಹುದು.