ಶ್ರೀಮಂತರಾಗಬೇಕೆಂದು ಪ್ರತಿಯೊಬ್ಬರೂ ಬಯಸ್ತಾರೆ. ಅದಕ್ಕಾಗಿ ಹಗಲಿರುಳು ದುಡಿಯುತ್ತಾರೆ. ಆದ್ರೆ ಎಲ್ಲರ ಕೈನಲ್ಲಿ ಹಣ ನಿಲ್ಲುವುದಿಲ್ಲ. ಕೆಲವೇ ಕೆಲವು ಮಂದಿ ಮಾತ್ರ ಯಶಸ್ಸಿನ ಶಿಖರವೇರ್ತಾರೆ. ಕೆಲವರ ಜಾತಕ, ರಾಶಿಯಲ್ಲಿಯೇ ಆರ್ಥಿಕ ವೃದ್ಧಿ ಬರೆದಿರುತ್ತದೆ. ಯಾವ ರಾಶಿಯವರು ಬೇಗ ಧನವಂತರಾಗ್ತಾರೆ ಗೊತ್ತಾ?
ಮೇಷ ರಾಶಿಯ ಸ್ವಾಮಿ ಮಂಗಳನಾಗಿದ್ದು, ಅವರಿಗೆ 22-28 ವರ್ಷದಲ್ಲಿ ಮಂಗಳನ ಬೆಂಬಲ ಸಿಗಲು ಶುರುವಾಗುತ್ತದೆ. ಮನಸ್ಸಿನಲ್ಲಿಯೇ ಹಣ ಮಾಡುವ ಇಚ್ಛೆಯಿರುತ್ತದೆ. ದುಡಿದು ಕೆಲಸ ಮಾಡಲು ಶುರು ಮಾಡುವ ಈ ರಾಶಿಯವರು ಮತ್ತೆ ಹಿಂತಿರುಗಿ ನೋಡುವುದಿಲ್ಲ. ಹಣ ಮಾಡುವ ಯಾವುದೇ ಸಂದರ್ಭವನ್ನು ಅವರು ಬಿಟ್ಟು ಕೊಡುವುದಿಲ್ಲ.
ಇನ್ನು ವೃಷಭ ರಾಶಿಯವರ ಸ್ವಾಮಿ ಶುಕ್ರ. 28ನೇ ವರ್ಷದಲ್ಲಿ ಭಾಗ್ಯದ ಬಾಗಿಲು ತೆರೆಯುತ್ತದೆ. ಐಷಾರಾಮಿ ವಸ್ತು ಖರೀದಿಗೆ ಜನರು ಆಸಕ್ತರಾಗಿರ್ತಾರೆ. ಈ ರಾಶಿಯವರು ಕೂಡ ಶ್ರೀಮಂತಿಕೆಯನ್ನು ಬಯಸುತ್ತಾರೆ. ಅವ್ರಿಗೆ ಎಂದೂ ಹಣದ ಕೊರತೆ ಕಾಡುವುದಿಲ್ಲ.
ಕರ್ಕ ರಾಶಿ ಸ್ವಾಮಿ ಕೂಡ ಚಂದ್ರ. 16ರಿಂದ 22 ವರ್ಷದಲ್ಲಿ ಭಾಗ್ಯದ ಬಾಗಿಲು ತೆರೆಯುತ್ತದೆ. ಹೊಸ ಅವಕಾಶವನ್ನು ಇವರು ಹುಡುಕ್ತಾರೆ. ದುಡಿದು ಹಣ ಮಾಡುವ ಛಲ ಹೊಂದಿರುತ್ತಾರೆ. ಎಲ್ಲ ಸ್ವಪ್ನವನ್ನು ಅವರು ಈಡೇರಿಸಿಕೊಳ್ತಾರೆ.
ಸಿಂಹ ರಾಶಿ ಸ್ವಾಮಿ ಸೂರ್ಯ. 16ರಿಂದ 22 ವರ್ಷ ವಯಸ್ಸಿನಲ್ಲಿ ಹಣ ಸಂಪಾದಿಸುವ ಆಸಕ್ತಿ ಹೊಂದಿರುತ್ತಾರೆ. ಹಣದ ಕನಸು ಕಾಣುವು ಇವರು ಅದನ್ನು ಈಡೇರಿಸಿಕೊಳ್ಳಲು ಯತ್ನಿಸುತ್ತಾರೆ.
ಧನು ರಾಶಿಯವರು ತಮ್ಮ ಆಲೋಚನೆಗಳಿಂದ ಹಣ ಸಂಪಾದಿಸುವ ಗುಣ ಹೊಂದಿರುತ್ತಾರೆ. ಈ ರಾಶಿಯವರ ಸ್ವಾಮಿ ಗುರು. ತಮ್ಮ ಆಲೋಚನೆ ಮೂಲಕ ಹಣ ಗಳಿಸುವ ಇವರು ಮಾರುಕಟ್ಟೆಯಲ್ಲಿ ಹೆಚ್ಚು ಪ್ರಸಿದ್ಧಿ ಹೊಂದಿರುತ್ತಾರೆ.
ಮೀನ ರಾಶಿ ಸ್ವಾಮಿ ಕೂಡ ಗುರು. 16ರಿಂದ 22 ವರ್ಷದಲ್ಲಿಯೇ ಹಣ ಸಂಪಾದಿಸುವ ಆಸಕ್ತಿ ಹೊಂದಿರುತ್ತಾರೆ. ಹೊಸದನ್ನು ಕಲಿಯುವುದು ಇವರಿಗೆ ಇಷ್ಟ. ಕೆಲಸ ಮಾಡುವುದನ್ನು ಇಷ್ಟಪಡುವ ಇವರು ಸಾಧಿಸಿ ತೋರಿಸುತ್ತಾರೆ.