
ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಿಷ್ಯಗಳ ಬಗ್ಗೆ ಹೇಳಲಾಗಿದೆ. ಮನುಷ್ಯನ ಜೀವನಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಪರಿಹಾರವಿದೆ. ಶಾಸ್ತ್ರದ ಪ್ರಕಾರ, ಬೆರಳಿಗೆ ಧರಿಸುವ ಉಂಗುರ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ.
ರಾಶಿಗೆ ಅನುಗುಣವಾಗಿ ವ್ಯಕ್ತಿಗಳು ಉಂಗುರವನ್ನು ಧರಿಸಬೇಕು. ರಾಶಿಗೆ ಹೊಂದಿಕೆಯಾಗದ ಉಂಗುರ ಧರಿಸಿದ್ರೆ ಆಪತ್ತು ಎದುರಾಗುತ್ತದೆ. ಸಾಮಾನ್ಯವಾಗಿ ಬೆಳ್ಳಿ ಉಂಗುರವನ್ನು ಎಲ್ಲರೂ ಧರಿಸ್ತಾರೆ. ಆದ್ರೆ ಮೂರು ರಾಶಿಯವರು ಎಂದೂ ಬೆಳ್ಳಿ ಉಂಗುರವನ್ನು ಧರಿಸಬಾರದು. ಸೂಕ್ತ ಸಲಹೆ ಪಡೆಯದೆ ಬೆಳ್ಳಿ ಉಂಗುರ ಧರಿಸಿದ್ರೆ ಸಮಸ್ಯೆ ಎದುರಾಗುತ್ತದೆ.
ಮೇಷ, ಧನು ಹಾಗೂ ಕನ್ಯಾ ರಾಶಿಯವರು ಎಂದೂ ಬೆಳ್ಳಿ ಉಂಗುರವನ್ನು ಧರಿಸಬಾರದು. ಈ ರಾಶಿಯವರು ಬೆಳ್ಳಿ ಉಂಗುರ ಧರಿಸಿದ್ರೆ ದೌರ್ಭಾಗ್ಯ ಕಾಡುತ್ತದೆ. ಈ ರಾಶಿಯವರು ಬೆಳ್ಳಿ ಉಂಗುರ ಧರಿಸಿದ್ರೆ ಅದು ಅಶುಭ. ಜೀವನದ ವೈಫಲ್ಯಕ್ಕೆ ಇದೇ ಕಾರಣವಾಗುತ್ತದೆ. ಹಾಗಾಗಿ ಎಂದೂ ಈ ಮೂರು ರಾಶಿಯವರು ಬೆಳ್ಳಿ ಉಂಗುರ ಧರಿಸಬಾರದು.