ಮೇಷ:
ಮಧ್ಯಾಹ್ನದ ನಂತರ ಪರಿಸ್ಥಿತಿ ಸುಧಾರಿಸಲಿದೆ. ಗೃಹಸ್ಥ ಜೀವನದಲ್ಲಿ ಆನಂದದಾಯಕ ವಾತಾವರಣವಿರುತ್ತದೆ. ಅಧಿಕಾರಿಗಳು ನಿಮ್ಮ ಮೇಲೆ ಪ್ರಸನ್ನರಾಗಿರುತ್ತಾರೆ. ಪದೋನ್ನತಿ ಸಿಗುವ ಸಾಧ್ಯತೆಯೂ ಇದೆ. ಆರ್ಥಿಕ ಲಾಭ ದೊರೆಯಲಿದೆ.
ವೃಷಭ:
ಉನ್ನತ ಅಧಿಕಾರಿಗಳೊಂದಿಗೆ ವಾದ-ವಿವಾದದ ಸಂದರ್ಭ ಎದುರಾಗಬಹುದು, ಆದಷ್ಟು ಅದರಿಂದ ದೂರವಿರಿ. ಪ್ರತಿಸ್ಪರ್ಧಿಗಳ ಜೊತೆಗೂ ವಾದ ಅಥವಾ ತೀವ್ರವಾದ ಚರ್ಚೆ ಬೇಡ. ಕಾರ್ಯದಲ್ಲಿ ಯಶಸ್ಸು ಸಿಗಲು ಕೊಂಚ ವಿಳಂಬವಾಗಲಿದೆ. ಹಾಗಾಗಿ ಧೈರ್ಯ ಕಳೆದುಕೊಳ್ಳಬೇಡಿ.
ಮಿಥುನ:
ಮಧ್ಯಾಹ್ನದ ನಂತರ ನೀವು ಹೆಚ್ಚು ಭಾವುಕರಾಗುತ್ತೀರಿ. ಮನಸ್ಸಿನ ಸಂಕಟ ಹೆಚ್ಚಲಿದೆ. ಖರ್ಚು ಕೂಡ ಅಧಿಕವಾಗಲಿದೆ. ಅನೈತಿಕ ಮತ್ತು ಅಕ್ರಮಗಳಿಂದ ದೂರವಿರಿ. ದೇವರ ಆರಾಧನೆ ಮತ್ತು ಧ್ಯಾನದಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ.
ಕರ್ಕ:
ಶಾರೀರಿಕ ಮತ್ತು ಮಾನಸಿಕವಾಗಿ ನೀವು ಆರೋಗ್ಯವಾಗಿರುತ್ತೀರಾ. ಬೌದ್ಧಿಕ ಚರ್ಚೆಗಳಲ್ಲಿ ನಿಮ್ಮಲ್ಲಿರುವ ತಾರ್ಕಿಕ ವಿಚಾರಗಳನ್ನು ಮುಂದಿಡಲು ಇದು ಸರಿಯಾದ ಸಮಯ. ಸಮಾಜದಲ್ಲಿ ಗೌರವ ದೊರೆಯುತ್ತದೆ. ಪಾಲುದಾರರಿಂದ ಉಪಯೋಗವಾಗಲಿದೆ.
ಸಿಂಹ:
ಉದರ ಸಂಬಂಧಿ ಖಾಯಿಲೆಯಿಂದ ದೇಹದ ಆರೋಗ್ಯ ಹದಗೆಡಬಹುದು. ಆದ್ರೆ ಮಧ್ಯಾಹ್ನದ ನಂತರ ಕುಟುಂಬದಲ್ಲಿ ಸಂತೋಷ ಮತ್ತು ಉತ್ಸಾಹದ ವಾತಾವರಣವಿರಲಿದೆ. ಮಾನಸಿಕವಾಗಿ ಪ್ರಸನ್ನತೆ ಮತ್ತು ಸ್ಪೂರ್ತಿಯ ಅನುಭವವಾಗಲಿದೆ. ವ್ಯವಸಾಯದಿಂದ ಲಾಭವಾಗಲಿದೆ.
ಕನ್ಯಾ:
ಸಾಮಾಜಿಕವಾಗಿ ಅವಮಾನವಾಗದಂತೆ ಎಚ್ಚರಿಕೆ ವಹಿಸಿ. ಧನಹಾನಿಯಾಗುವ ಸಾಧ್ಯತೆಗಳೂ ಇವೆ. ಕೋಪದ ಮೇಲೆ ನಿಯಂತ್ರಣ ಇರಲಿ. ಅಂದುಕೊಂಡ ಕಾರ್ಯ ಸಫಲವಾಗದೇ ಇರುವುದರಿಂದ ನಿರಾಸೆ ಉಂಟಾಗಲಿದೆ. ಸಂತಾನ ವಿಚಾರದಲ್ಲಿ ಚಿಂತೆ ಕಾಡಲಿದೆ.
ತುಲಾ:
ಹೊಸ ಕೆಲಸ ಆರಂಭಿಸಲು ಇವತ್ತು ಶುಭದಿನ. ಪ್ರಿಯ ವ್ಯಕ್ತಿಯೊಂದಿಗಿನ ಭೇಟಿ ಆನಂದದಾಯಕವಾಗಿರಲಿದೆ. ಭಾಗ್ಯವೃದ್ಧಿಯಾಗಲಿದೆ. ಸಮಾಜದಲ್ಲಿ ಗೌರವ ದೊರೆಯಲಿದೆ. ಮಧ್ಯಾಹ್ನದ ನಂತರ ನಿಮ್ಮ ಮನಸ್ಸು ಕೊಂಚ ಉದಾಸವಾಗಲಿದೆ.
ವೃಶ್ಚಿಕ:
ಮಧ್ಯಾಹ್ನದ ನಂತರ ಕುಟುಂಬ ಸದಸ್ಯರು ಮತ್ತು ಒಡಹುಟ್ಟಿದವರೊಂದಿಗೆ ಆನಂದದಾಯಕವಾಗಿ ಸಮಯ ಕಳೆಯುತ್ತೀರಿ. ಪ್ರತಿಸ್ಪರ್ಧಿಯನ್ನು ಸೋಲಿಸುತ್ತೀರಿ. ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರಲಿದೆ. ಪ್ರವಾಸ ಯೋಗವಿದೆ.
ಧನು:
ಇವತ್ತು ನಿಮಗೆ ಶುಭದಿನ. ಕಾರ್ಯಸಿದ್ಧಿಯಾಗಲಿದೆ, ಲಕ್ಷ್ಮಿ ಕಟಾಕ್ಷ ನಿಮ್ಮ ಮೇಲಿದೆ. ಶಾರೀರಿಕ ಮತ್ತು ಮಾನಸಿಕ ಸ್ಥಿತಿ ಉತ್ಸಾಹಮಯ ಮತ್ತು ಪ್ರಫುಲ್ಲತೆಯಿಂದ ಕೂಡಿರಲಿದೆ. ಹಾಗಾಗಿ ಪ್ರತಿ ಕಾರ್ಯವನ್ನೂ ಉತ್ಸಾಹದಿಂದ್ಲೇ ಮಾಡುತ್ತೀರಾ.
ಮಕರ:
ಮನಸ್ಸು ವ್ಯಗ್ರವಾಗಿರಲಿದೆ. ಹಾಗಾಗಿ ಆಧ್ಯಾತ್ಮದ ಕಡೆಗೆ ಮನಸ್ಸು ಹರಿಸಿ, ಶಾಂತವಾಗಿರಿ. ಮಧ್ಯಾಹ್ನದ ನಂತರ ಸ್ಪೂರ್ತಿ ಹಾಗೂ ಉಲ್ಲಾಸದ ಅನುಭವವಾಗುತ್ತದೆ. ಕುಟುಂಬದಲ್ಲೂ ಆನಂದದ ವಾತಾವರಣವಿರಲಿದೆ. ಶುಭ ಸಂದರ್ಭಗಳಿಗೆ ಭೇಟಿ ಮಾಡುವ ಅವಕಾಶವಿದೆ.
ಕುಂಭ:
ಇವತ್ತಿನ ದಿನ ಎಲ್ಲಾ ವಿಧದಿಂದ್ಲೂ ಲಾಭ ತರಲಿದೆ. ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿರುತ್ತೀರಿ. ಅದರ ಪ್ರತಿಫಲವಾಗಿ ನಿಮ್ಮ ಪ್ರತಿಷ್ಠೆ ಹೆಚ್ಚಲಿದೆ. ಅವಿವಾಹಿತರಿಗೆ ಸೂಕ್ತ ಜೀವನ ಸಂಗಾತಿ ದೊರೆಯುವ ಸಾಧ್ಯತೆ ಇದೆ.
ಮೀನ:
ಇವತ್ತು ನಿಮಗೆ ಶುಭದಿನ. ಪರೋಪಕಾರಿ ಕಾರ್ಯವನ್ನು ಮಾಡಲಿದ್ದೀರಿ. ವ್ಯಾಪಾರದಲ್ಲೂ ವೃದ್ಧಿಯಾಗುವ ಸಂಭವ ಇದೆ. ನಿಮ್ಮ ಕಾರ್ಯದ ಮೂಲಕ ಉನ್ನತ ಅಧಿಕಾರಿಗಳನ್ನು ಸಂತುಷ್ಟಪಡಿಸಲಿದ್ದೀರಿ, ಕಚೇರಿಯಲ್ಲೂ ಗೌರವ ಹೆಚ್ಚಲಿದೆ.