alex Certify ಈ ರಾಶಿಯವರಿಗೆ ಸಿಗಲಿದೆ ಇಂದು ಉದ್ಯೋಗದಲ್ಲಿ ಉನ್ನತ ಸ್ಥಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಸಿಗಲಿದೆ ಇಂದು ಉದ್ಯೋಗದಲ್ಲಿ ಉನ್ನತ ಸ್ಥಾನ

ಮೇಷ : ಬೆಂಕಿಯಿಂದ ಆದಷ್ಟು ದೂರವಿರಿ. ಇಲ್ಲವಾದಲ್ಲಿ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ನಿಮ್ಮ ಮಂದಗತಿಯ ಕೆಲಸವು ಮೇಲಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಬಹುದು. ವಿದ್ಯಾರ್ಥಿಗಳಿಗೆ ದಸರಾ ಬಳಿಕ ಉತ್ತಮ ಯೋಗವಿದೆ.

ವೃಷಭ : ಸರ್ಕಾರಿ ಉದ್ಯೋಗಿಗಳಿಗೆ ಬಡ್ತಿ ಭಾಗ್ಯವಿದೆ. ಆರ್ಥಿಕ ಸಂಕಷ್ಟಗಳಿಗೆ ಸಹೋದರರು ಹೆಗಲಾಗಿ ನಿಲ್ಲಲಿದ್ದಾರೆ. ಯಾವುದೇ ಕಾರ್ಯಕ್ಕೆ ಕೈ ಹಾಕಿದ ಬಳಿಕ ಹಿಂದಕ್ಕೆ ಬರಬೇಡಿ. ಧೈರ್ಯದಿಂದ ಮುನ್ನುಗ್ಗಿ. ಸಹೋದರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

ಮಿಥುನ : ಮಾತು ಆಡಿದರೆ ಹೋಯಿತು. ಮುತ್ತು ಒಡೆದರೆ ಹೋಯಿತು ಎಂಬ ಗಾದೆ ಮಾತಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲೂ ಮಾತನಾಡುವ ಮುನ್ನ ಕೊಂಚ ಯೋಚಿಸಿ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಭಾರೀ ದೊಡ್ಡ ಬೆಲೆ ತೆರಬೇಕಾಗಿ ಬರಬಹುದು.

ಕಟಕ : ನೀವು ಮುಟ್ಟಿದ್ದೆಲ್ಲವೂ ಚಿನ್ನವಾಗುವಂತಹ ದಿನಗಳು ಸನ್ನಿಹಿತವಾಗಲಿದೆ. ಹೀಗಾಗಿ ಹೊಸ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಮುಂದಾಗಿ. ಕುಟುಂಬದಲ್ಲಿ ಸಂಭ್ರಮವಿರಲಿದೆ. ಮಂಗಳ ಕಾರ್ಯಗಳು ಯಾವುದೇ ವಿಘ್ನಗಳಿಲ್ಲದೇ ನೆರವೇರಲಿದೆ.

ಸಿಂಹ : ಇಂದು ನಿಮಗೆ ಅನೇಕ ಕಾರ್ಯಗಳಲ್ಲಿ ವಿಘ್ನ ಎದುರಾಗಲಿದೆ. ಉದ್ಯಮದ ವ್ಯವಹಾರಗಳಲ್ಲಿ ಆದಷ್ಟು ತಾಳ್ಮೆ ವಹಿಸಿ. ತಾಯಿಯೊಡನೆ ಕಿರಿಕಿರಿ ಉಂಟಾಗಬಹುದು. ಆದಷ್ಟು ತಾಳ್ಮೆಯಿಂದಿರಿ. ಮನೆಯಲ್ಲಿ ಮಂಗಳ ಕಾರ್ಯ ಜರುಗಲಿದೆ.

ಕನ್ಯಾ : ಹೊಸ ಆಸ್ತಿ ಖರೀದಿ ಮಾಡುವವರಿಗೆ ಇದು ಶುಭ ದಿನವಾಗಿದೆ. ಉದ್ಯಮವನ್ನು ಮುಂದುವರಿಸುವ ಬಗ್ಗೆ ಹಿರಿಯರೊಂದಿಗೆ ಚರ್ಚೆ ಮಾಡಲಿದ್ದೀರಿ. ವೃತ್ತಿ ಜೀವನದಲ್ಲಿ ಯಶಸ್ಸಿನ ಘಟ್ಟವನ್ನು ಏರುವಿರಿ. ತಂದೆಯ ಆರೋಗ್ಯದಲ್ಲಿ ಏರುಪೇರು ಉಂಟಾದೀತು.

ತುಲಾ : ಮಕ್ಕಳು ಓದಿನ ಕಡೆಗೆ ಗಮನ ನೀಡದೇ ಇರುವುದೇ ನಿಮಗೆ ದೊಡ್ಡ ಚಿಂತೆಯಾಗಿದೆ. ಮಕ್ಕಳ ಓದುವ ಕೋಣೆಯಲ್ಲಿ ವಾಸ್ತು ದೋಷವನ್ನು ಸರಿಪಡಿಸಿ. ಮಿತ್ರರ ಸಲಹೆ ನಿಮ್ಮ ಕಷ್ಟಗಳಿಗೆ ನೆರವಾಗಲಿದೆ. ಸಂಗಾತಿಯ ಆರೋಗ್ಯ ಹದಗೆಡುವುದರಿಂದ ನೀವು ಆತಂಕಕ್ಕೊಳಗಾಗುವಿರಿ.

ವೃಶ್ಚಿಕ : ಸ್ತ್ರೀಯರಿಗೆ ಇಂದು ಧನಲಾಭವಿದೆ. ವ್ಯವಹಾರಗಳು ಲಾಭದಾಯಕವಾಗಿ ಇರಲಿದೆ. ಮಹತ್ವದ ಕೆಲಸಗಳಿಗೆ ವಿಘ್ನ ಉಂಟಾಗುವ ಸಾಧ್ಯತೆ ಇದೆ. ಎಚ್ಚರಿಕೆ ಇರಲಿ. ದೂರ ಪ್ರಯಾಣ ಮಾಡುವ ಅವಕಾಶ ಕೂಡಿ ಬರಬಹುದು. ವಿದ್ಯಾರ್ಥಿಗಳು ತಮ್ಮ ಪ್ರಯತ್ನವನ್ನು ಮುಂದುವರಿಸಿ.

ಧನು : ವೃತ್ತಿ ರಂಗದಲ್ಲಿ ಅಭಿವೃದ್ಧಿ ಇದೆ. ಹಣಕಾಸಿನ ವ್ಯವಹಾರಗಳಲ್ಲಿ ಜಾಗ್ರತೆಯಿಂದಿರಿ. ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ. ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾಗಲಿದೆ. ಸಂಗಾತಿಯು ನಿಮ್ಮೆಲ್ಲ ಕಾರ್ಯಗಳಿಗೆ ಸಹಾಯ ಮಾಡಲಿದ್ದಾರೆ.

ಮಕರ : ಹೊಸ ಹೂಡಿಕೆಗಳಿಗೆ ಇದು ಸಕಾಲವಲ್ಲ. ವಾಹನ ಪ್ರಯಾಣಗಳಿಂದ ಆದಷ್ಟು ದೂರವೇ ಇರಿ. ನಿಮ್ಮ ಒಳ್ಳೆಯ ಸ್ವಭಾವವು ಕುಟುಂಬದಲ್ಲಿ ನಿಮಗೆ ಗೌರವವನ್ನು ಹೆಚ್ಚಿಸಲಿದೆ. ನಿಮ್ಮ ಆಸಕ್ತಿಗೆ ತಕ್ಕಂತ ಉದ್ಯೋಗ ಮಾಡುವ ಸದಾವಕಾಶ ಕೂಡಿ ಬರಲಿದೆ.

ಕುಂಭ : ನಿಷ್ಠೆಯಿಂದ ಮಾಡುವ ಯಾವುದೇ ಕಾರ್ಯವು ನಿಮಗೆ ಜಯ ತಂದುಕೊಡಲಿದೆ. ಸಂಗಾತಿಗೆ ಉದ್ಯೋಗದಲ್ಲಿ ಉನ್ನತ ಸ್ಥಾನ ದೊರಕಲಿದೆ. ಮನೆಯ ಪೀಠೋಪಕರಣಗಳ ಖರೀದಿಗಾಗಿ ತುಸು ಹೆಚ್ಚೇ ವ್ಯಯಿಸಬೇಕಾಗಿ ಬಂದೀತು.

ಮೀನ : ಇಂದು ನಿಮಗೆ ವಿಪರೀತ ಬೆನ್ನು ನೋವಿನ ಸಮಸ್ಯೆ ಉಂಟಾಗಲಿದೆ. ಹೀಗಾಗಿ ಯಾವುದೇ ಕೆಲಸಗಳ ಮೇಲೆ ಗಮನ ಹರಿಸಲು ಸಾಧ್ಯವಾಗದೇ ಹೋಗಬಹುದು. ದುರ್ಗೆಯ ಕೃಪೆಯಿಂದ ಅಂದುಕೊಂಡ ಕಾರ್ಯಗಳಲ್ಲಿ ಜಯ ಪಾಪ್ತಿಯಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...