ಮೇಷ ರಾಶಿ
ರಹಸ್ಯ ವಿಷಯಗಳ ಬಗ್ಗೆ ಆಸಕ್ತಿ ಹೆಚ್ಚಲಿದೆ. ನಿಗೂಢ ವಿದ್ಯೆಯೆಡೆಗೆ ಆಕರ್ಷಿತರಾಗುತ್ತೀರಿ. ಪ್ರವಾಸವನ್ನು ಮುಂದೂಡಿ, ಯಾಕಂದ್ರೆ ವಿಘ್ನಗಳು ಎದುರಾಗುವ ಸಾಧ್ಯತೆ ಇದೆ. ಯಾವುದೇ ಹೊಸ ಕಾರ್ಯವನ್ನು ಆರಂಭಿಸಬೇಡಿ.
ವೃಷಭ ರಾಶಿ
ಇವತ್ತು ನಿಮಗೆ ಶುಭ ದಿನ. ಶಾರೀರಿಕವಾಗಿ ಆರೋಗ್ಯವಾಗಿರುತ್ತೀರಿ. ಮನಸ್ಸು ಪ್ರಸನ್ನವಾಗಿರಲಿದೆ. ಕುಟುಂಬಸ್ಥರು ಮತ್ತು ಆತ್ಮೀಯರ ಜೊತೆಗೆ ಹೆಚ್ಚು ಸಮಯ ಕಳೆಯಲಿದ್ದೀರಿ.
ಮಿಥುನ ರಾಶಿ
ಇವತ್ತು ನೀವು ಕೊಂಚ ಜಾಗರೂಕತೆಯಿಂದ, ಸಮಾಧಾನದಿಂದ ಇರುವುದು ಒಳಿತು. ಶಾರೀರಿಕ ಮತ್ತು ಮಾನಸಿಕ ಸ್ವಾಸ್ತ್ಯ ಹದಗೆಡುವ ಸಾಧ್ಯತೆ ಇದೆ. ಹೊಸ ಕಾರ್ಯವನ್ನು ಆರಂಭಿಸಲು ಇಂದು ಸಮಯ ಸೂಕ್ತವಾಗಿಲ್ಲ.
ಕರ್ಕ ರಾಶಿ
ಶಾಂತವಾಗಿ ದಿನ ಕಳೆಯಿರಿ. ಶಾರೀರಿಕ ಮತ್ತು ಮಾನಸಿಕ ಅಸ್ವಸ್ಥತೆಯಿಂದ ಆತಂಕಗೊಳ್ಳಲಿದ್ದೀರಿ. ಆಕಸ್ಮಿಕವಾಗಿ ಹಣ ಖರ್ಚಾಗಲಿದೆ. ಆತ್ಮೀಯರೊಂದಿಗೆ ವಾದ-ವಿವಾದದಿಂದ ಭಿನ್ನಾಭಿಪ್ರಾಯ ಉಂಟಾಗುತ್ತದೆ.
ಸಿಂಹ ರಾಶಿ
ಮನಸ್ಸು ವ್ಯಗ್ರವಾಗಿರುತ್ತದೆ. ನಕಾರಾತ್ಮಕ ವಿಷಯಗಳು ನಿಮ್ಮನ್ನು ಕಾಡುತ್ತವೆ. ತಾಯಿಯ ಆರೋಗ್ಯ ಹದಗೆಡಬಹುದು. ಅಧಿಕ ಸಂವೇದನಾಶೀಲತೆಯ ಅನುಭವವಾಗಲಿದೆ. ಸಮಯಕ್ಕೆ ಸರಿಯಾಗಿ ಭೋಜನ ದೊರೆಯುವುದಿಲ್ಲ.
ಕನ್ಯಾ ರಾಶಿ
ಸರಿಯಾಗಿ ವಿಚಾರ ವಿಮರ್ಷೆ ಮಾಡದೆ ಯಾವುದೇ ಕೆಲಸದಲ್ಲಿ ತೊಡಗಿಕೊಳ್ಳಬೇಡಿ. ಸ್ನೇಹಿತರೊಂದಿಗೆ ಆನಂದವಾಗಿ ಸಮಯ ಕಳೆಯುತ್ತೀರಿ. ಭಾವನಾತ್ಮಕ ಸಂಬಂಧಗಳ ಬಗ್ಗೆ ನಿಮ್ಮ ಮನಸ್ಸು ಮೃದುವಾಗಲಿದೆ.
ತುಲಾ ರಾಶಿ
ನಿಮ್ಮ ಮನಸ್ಸು ಗೊಂದಲಮಯವಾಗಿರುತ್ತದೆ. ಸೂಕ್ತ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗದೇ ಇರುವುದರಿಂದ ಹೊಸ ಕಾರ್ಯ ಆರಂಭಿಸುವುದು ನಿಮಗೆ ಹಿತಕರವಲ್ಲ. ಬಾಂಧವ್ಯಗಳ ಬಗ್ಗೆ ಔಪಚಾರಿಕತೆ ಇಟ್ಟುಕೊಳ್ಳಿ.
ವೃಶ್ಚಿಕ ರಾಶಿ
ಮಿತ್ರರು, ಆತ್ಮೀಯರಿಂದ ಉಪಹಾರ ದೊರೆಯಲಿದೆ. ಪ್ರಿಯ ವ್ಯಕ್ತಿಗಳೊಂದಿಗೆ ಭೇಟಿ ಸಫಲವಾಗುತ್ತದೆ. ಶುಭ ಸಮಾಚಾರ ದೊರೆಯಲಿದೆ. ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ. ವೈವಾಹಿಕ ಜೀವನದಲ್ಲಿ ಸುಖ-ಶಾಂತಿ ದೊರೆಯಲಿದೆ.
ಧನು ರಾಶಿ
ಆರೋಗ್ಯ ಹದಗೆಡಬಹುದು. ಮಾತು ಮತ್ತು ವ್ಯವಹಾರದಲ್ಲಿ ಸಂಯಮವಿರಲಿ. ದುರ್ಘಟನೆಗಳ ಬಗ್ಗೆ ಎಚ್ಚರಿಕೆಯಿಂದಿರಿ. ವ್ಯರ್ಥ ಕೆಲಸಗಳಿಂದ ಶಾಂತಿ ಭಂಗವಾಗಬಹುದು. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಾಗರೂಕರಾಗಿರಿ.
ಮಕರ ರಾಶಿ
ಅವಿವಾಹಿತರಿಗೆ ವಿವಾಹದ ಪ್ರಯತ್ನಗಳು ಇಂದು ಸಫಲವಾಗುವುದಿಲ್ಲ. ಶುಭ ಕಾರ್ಯಗಳನ್ನು ಆಯೋಜಿಸಲಿದ್ದೀರಿ. ಸ್ತ್ರೀಯರು ಮತ್ತು ಮಕ್ಕಳ ಸಹಕಾರ ಸಿಗಲಿದೆ. ಯಾವುದೇ ವಸ್ತು ಖರೀದಿಗೆ ಇಂದು ಶುಭ ದಿನ. ಸಂಗಾತಿಯ ಆರೋಗ್ಯದ ಬಗ್ಗೆ ಚಿಂತೆ ಕಾಡಲಿದೆ.
ಕುಂಭ ರಾಶಿ
ಸಮಾಜದಲ್ಲಿ ಗೌರವ-ಪ್ರತಿಷ್ಠೆ ದೊರೆಯುತ್ತದೆ. ಮಿತ್ರರು ಮತ್ತು ಸಂಬಂಧಿಕರೊಂದಿಗೆ ಆನಂದವಾಗಿ ಪ್ರವಾಸ ಮಾಡಲಿದ್ದೀರಿ. ದಿನವಿಡೀ ನೀವು ಮಾಡುವ ಕೆಲಸಗಳೆಲ್ಲ ಸರಳವಾಗಿ ಪೂರ್ಣಗೊಳ್ಳಲಿವೆ.
ಮೀನ ರಾಶಿ
ಹಿರಿಯ ಅಧಿಕಾರಿಗಳ ಜೊತೆಗೆ ಭಿನ್ನಾಭಿಪ್ರಾಯ ಮೂಡದಂತೆ ಎಚ್ಚರ ವಹಿಸಿ. ಶಾರೀರಿಕ ಶಿಥಿಲತೆ ಮತ್ತು ಮಾನಸಿಕ ಚಿಂತೆ ಕಾಡುತ್ತದೆ. ಪ್ರತಿಸ್ಪರ್ಧಿಗಳೊಂದಿಗಿನ ವಾದ-ವಿವಾದದಿಂದ ಆದಷ್ಟು ದೂರವಿರಿ.