![](https://kannadadunia.com/wp-content/uploads/2022/02/horoscope-astrology-1632749846-1.jpg)
ಮೇಷ ರಾಶಿ
ಕುಟುಂಬ ಸದಸ್ಯರೊಂದಿಗೆ ಸೇರಿ ಮಹತ್ವದ ವಿಷಯ ಚರ್ಚಿಸಲಿದ್ದೀರಿ. ಹೊಸ ಯೋಜನೆಗಳನ್ನು ರೂಪಿಸಲಿದ್ದೀರಿ. ಕಚೇರಿ ಕೆಲಸದ ನಿಮಿತ್ತ ಪ್ರಯಾಣ ಮಾಡಬೇಕಾಗಬಹುದು.
ವೃಷಭ ರಾಶಿ
ವಿದೇಶದಲ್ಲಿ ನೆಲೆಸಿರುವ ಸ್ನೇಹಿತರಿಂದ ಶುಭ ಸಮಾಚಾರ ಬರುತ್ತದೆ. ವಿದೇಶಕ್ಕೆ ತೆರಳಲು ಇಚ್ಛಿಸುವವರಿಗೆ ಅವಕಾಶ ಸಿಗಲಿದೆ. ದೀರ್ಘ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ.
ಮಿಥುನ ರಾಶಿ
ಇಂದು ಅತ್ಯಂತ ಪ್ರತಿಕೂಲಕರವಾದ ದಿನ. ಹಾಗಾಗಿ ಎಚ್ಚರಿಕೆಯಿಂದಿರಿ. ಇಂದು ಯಾವುದೇ ಹೊಸ ಕಾರ್ಯ ಆರಂಭಿಸಬೇಡಿ. ಯಾವುದೇ ಅನಿಷ್ಠ ನಡೆಯದಂತೆ ಎಚ್ಚರ ವಹಿಸಿ.
ಕರ್ಕ ರಾಶಿ
ಇಂದು ಭರಪೂರ ಮನರಂಜನೆ ಸಿಗಲಿದೆ. ಆನಂದವಾಗಿ ದಿನ ಕಳೆಯಲಿದ್ದೀರಿ. ಉತ್ತಮ ಭೋಜನ, ವಾಹನ ಸುಖ ಸಿಗಲಿದೆ. ಪ್ರತಿಷ್ಠೆ ವೃದ್ಧಿಸಲಿದೆ. ವ್ಯವಹಾರದಲ್ಲೂ ಲಾಭದಾಯಕ ದಿನ.
ಸಿಂಹ ರಾಶಿ
ಇಂದು ಮಿಶ್ರಫಲವಿದೆ. ಮನೆಯಲ್ಲಿ ಶಾಂತ ವಾತಾವರಣವಿರುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುವುದಿಲ್ಲ. ಶತ್ರುಗಳು ಮತ್ತು ಪ್ರತಿಸ್ಪರ್ಧಿಗಳಿಂದ ಸಮಸ್ಯೆಯಾಗಬಹುದು.
ಕನ್ಯಾ ರಾಶಿ
ಇಂದು ಮಕ್ಕಳ ವಿಷಯಗಳ ಬಗ್ಗೆ ಚಿಂತಿತರಾಗಲಿದ್ದೀರಿ. ಮನಸ್ಸು ವಿಚಲಿತವಾಗಿರುತ್ತದೆ. ಉದರ ಬಾಧೆ ಕಾಣಿಸಿಕೊಳ್ಳಬಹುದು. ಯಾವುದೇ ಹೊಸ ಕಾರ್ಯ ಆರಂಭಿಸಬೇಡಿ. ಕೋಪ ನಿಯಂತ್ರಿಸಿಕೊಳ್ಳಿ.
ತುಲಾ ರಾಶಿ
ಇಂದು ಮಾನಸಿಕವಾಗಿ ಆಯಾಸದ ಅನುಭವವಾಗುತ್ತದೆ. ಇಂದು ಹೆಚ್ಚು ಭಾವುಕರಾಗಿರುತ್ತೀರಿ. ಮನಸ್ಸಿನಲ್ಲಿ ಮೂಡುವ ವಿಚಾರಗಳು ನಿಮ್ಮನ್ನು ಚಿಂತಿತರನ್ನಾಗಿ ಮಾಡುತ್ತವೆ.
ವೃಶ್ಚಿಕ ರಾಶಿ
ಇಂದು ಧಾರ್ಮಿಕ ಯಾತ್ರೆ ಕೈಗೊಳ್ಳಲಿದ್ದೀರಿ. ಹೊಸ ಕಾರ್ಯ ಆರಂಭಿಸಲು ಸಾಧ್ಯವಾಗುವುದಿಲ್ಲ. ವಿದೇಶದಿಂದ ಲಾಭದಾಯಕ ಸಮಾಚಾರ ಬರಲಿದೆ.
ಧನು ರಾಶಿ
ಇಂದು ಹಲವು ಬಗೆಯ ಲಾಭಗಳಿವೆ. ವ್ಯಾಪಾರ ವೃದ್ಧಿಯ ಜೊತೆಗೆ ಆದಾಯವೂ ಹೆಚ್ಚಲಿದೆ. ಉದ್ಯೋಗಿಗಳಿಗೆ ಲಾಭವಿದೆ. ವೈವಾಹಿಕ ಜೀವನದಲ್ಲಿ ಸುಖ-ಸಂತೋಷದ ಅನುಭವವಾಗಲಿದೆ.
ಮಕರ ರಾಶಿ
ಇಂದು ನಿಮಗೆ ಶುಭ ದಿನ. ಮಧುರ ಮಾತಿನಿಂದ್ಲೇ ಪ್ರೇಮಮಯ ಸಂಬಂಧಗಳನ್ನು ಸೃಷ್ಟಿಸಿಕೊಳ್ಳುತ್ತೀರಿ. ನಿಮ್ಮ ವೈಚಾರಿಕ ಸಮೃದ್ಧಿ ಇತರರನ್ನು ಪ್ರಭಾವಿತಗೊಳಿಸಲಿದೆ.
ಕುಂಭ ರಾಶಿ
ಹಣಕಾಸು ವಹಿವಾಟು, ಜಮೀನಿನ ಕೊಡು ಕೊಳ್ಳುವಿಕೆಯಲ್ಲಿ ಎಚ್ಚರಿಕೆಯಿಂದಿರಿ. ಮಾನಸಿಕ ಏಕಾಗ್ರತೆಯ ಕೊರತೆಯಾಗುವುದಿಲ್ಲ. ಖರ್ಚು ಹೆಚ್ಚಾಗಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಮೀನ ರಾಶಿ
ಮಿತ್ರರಿಂದ ನಿಮಗೆ ಲಾಭವಾಗಲಿದೆ. ಅವರಿಗಾಗಿಯೇ ಹಣ ಖರ್ಚು ಮಾಡಬೇಕಾಗುತ್ತದೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ರಮಣೀಯ ಸ್ಥಳಕ್ಕೆ ಪ್ರವಾಸ ತೆರಳಲಿದ್ದೀರಿ.