ಮೇಷ : ವಿದ್ಯಾರ್ಥಿಗಳಿಗೆ ಹೊಸ ಪ್ರಯತ್ನ ಮಾಡಲು ಧೈರ್ಯ ಬರಲಿದೆ. ಮಕ್ಕಳಿಗೆ ಪೋಷಕರ ಮೇಲೆ ಅಸಮಾಧಾನ ಉಂಟಾಗುವ ಸಂದರ್ಭ ಎದುರಾಗಬಹುದು. ಬಹಳ ದಿನಗಳ ಬಳಿಕ ಸಹೋದರರು ಹೆಚ್ಚಿನ ಸಮಯವನ್ನು ಒಟ್ಟಾಗಿ ಕಳೆಯಲಿದ್ದಾರೆ.
ವೃಷಭ : ಕೌಟುಂಬಿಕ ಕಲಹಗಳಲ್ಲಿ ಮಧ್ಯಪ್ರವೇಶಿಸಿ ನೀವು ಪರಿಸ್ಥಿತಿಯನ್ನು ಸುಧಾರಿಸಲಿದ್ದೀರಿ. ಈ ಮೂಲಕ ನಿಮ್ಮ ಕುಟುಂಬದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದೀರಿ. ಮನೆಯಲ್ಲಿ ವಿವಾಹ ಕಾರ್ಯಕ್ರಮದ ಚಟುವಟಿಕೆಗಳು ಒಂದೊಂದಾಗಿಯೇ ಆರಂಭಗೊಳ್ಳಲಿದೆ.
ಮಿಥುನ : ಹೊಸ ನಿವೇಶನವನ್ನು ಖರೀದಿ ಮಾಡಲಿದ್ದೀರಿ. ಕಚೇರಿಯಲ್ಲಿ ಮೇಲಾಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಎದುರು ಅವಕಾಶವು ತಾನಾಗೆ ಬಂದು ಕೈ ಚಾಚಲಿದೆ. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಕಾಣಲಿದ್ದೀರಿ.
ಕಟಕ : ಸಾರ್ವಜನಿಕ ಜೀವನದಲ್ಲಿ ನಿಮ್ಮ ಖ್ಯಾತಿ ಹೆಚ್ಚಲಿದೆ. ಬಹಳ ದಿನಗಳಿಂದ ಉದ್ಯೋಗಕ್ಕೆಂದು ಅರಸುತ್ತಿರುವ ನಿಮಗೆ ದೊಡ್ಡ ಕಂಪನಿಯೊಂದರಲ್ಲಿ ಅವಕಾಶ ಸಿಗಲಿದೆ. ಪೋಷಕರು ನಿಮ್ಮ ಸಾಧನೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವರು.
ಸಿಂಹ : ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ಕಲಹ ಏರ್ಪಡಲಿದೆ. ಯಾರಿಗಾದರೂ ನೀವು ಸಾಲ ನೀಡಿದ್ದರೆ ಇಂದು ಹಣವನ್ನು ವಾಪಸ್ ಪಡೆಯಲಿದ್ದೀರಿ. ಇಂದು ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಿರಿ.
ಕನ್ಯಾ : ಅನಾರೋಗ್ಯವು ಇದ್ದಕ್ಕಿದ್ದಂತೆ ಕೈ ಕೊಡಲಿದೆ. ಇದರಿಂದಾಗಿ ಇಂದು ಯಾವುದೇ ಕೆಲಸಗಳನ್ನು ಮಾಡಲು ಸಾಧ್ಯವಾಗೋದಿಲ್ಲ. ಮಕ್ಕಳೇ ಪೋಷಕರ ವಿರುದ್ಧ ನಿಲ್ಲುವ ಪ್ರಸಂಗ ಎದುರಾದೀತು. ನಿಮ್ಮ ಚಂಚಲ ಬುದ್ಧಿಯಿಂದಾಗಿ ಅವಕಾಶ ಕೈ ತಪ್ಪಲಿದೆ.
ತುಲಾ : ವೈವಾಹಿಕ ಸಂಬಂಧಕ್ಕಾಗಿ ಅರಸುತ್ತಿರುವ ನಿಮಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ. ಮಾನಸಿಕವಾಗಿ ನೀವು ಚೇತರಿಸಿಕೊಳ್ಳಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಸಹೋದರರ ಜೊತೆಯಲ್ಲಿ ಕಲಹ ಉಂಟಾಗಲಿದೆ.
ವೃಶ್ಚಿಕ : ಇಂದು ನಿಮಗೆ ಖರ್ಚು ಹೆಚ್ಚಾಗಲಿದೆ. ಕಚೇರಿಯಲ್ಲಿ ಭಯಪಟ್ಟು ಕೆಲಸ ಮಾಡುವಂತಹ ಸನ್ನಿವೇಶ ಎದುರಾಗಲಿದೆ. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವ ಅವಕಾಶ ನಿಮ್ಮದಾಗಲಿದೆ. ವ್ಯವಹಾರವನ್ನು ನಂಬಿಕಸ್ಥರ ಜೊತೆಯಲ್ಲಿ ಮಾಡಿ. ಇಲ್ಲವಾದಲ್ಲಿ ನಷ್ಟವಿದೆ.
ಧನು : ನಿಮ್ಮ ವ್ಯಾಪಾರ- ವ್ಯವಹಾರಗಳ ವಿಚಾರದಲ್ಲಿ ತಂದೆಯು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಆರ್ಥಿಕ ವಿಚಾರವಾಗಿ ಸ್ನೇಹಿತರೊಂದಿಗೆ ಉಂಟಾಗಿದ್ದ ಮುನಿಸು ಕ್ರಮೇಣವಾಗಿ ಸುಧಾರಿಸಲಿದೆ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಅನಿವಾರ್ಯ.
ಮಕರ : ಕಿರಿಯ ಸೋದರನ ಆರ್ಥಿಕ ಸಂಕಷ್ಟಕ್ಕೆ ನೀವು ಹೆಗಲಾಗಲಿದ್ದೀರಿ. ಇದು ನಿಮ್ಮ ಪೋಷಕರಿಗೆ ನಿಮ್ಮ ಮೇಲೆ ಪ್ರೀತಿ ಹೆಚ್ಚಿಸಲಿದೆ. ಮನೆಗೆ ಪೀಠೋಪಕರಣಗಳನ್ನು ಖರೀದಿ ಮಾಡಲಿದ್ದೀರಿ. ನಿಮ್ಮ ವೈವಾಹಿಕ ಸಂಬಂಧದ ಬಗ್ಗೆ ಪೋಷಕರು ಚರ್ಚೆ ನಡೆಸಲಿದ್ದಾರೆ.
ಕುಂಭ : ವ್ಯಾಪಾರ- ವ್ಯವಹಾರದಲ್ಲಿ ನೀವು ಲಾಭವನ್ನು ಹೊಂದಲಿದ್ದೀರಿ. ಆಧ್ಯಾತ್ಮದ ಕಡೆಗೆ ನಿಮ್ಮ ಮನಸ್ಸು ವಾಲಲಿದೆ. ಹತ್ತಿರದ ಸಂಬಂಧಿಗಳ ಭೇಟಿ ಮನಸ್ಸಿಗೆ ಖುಷಿ ಎನಿಸಲಿದೆ.
ಮೀನ : ಕಚೇರಿಯಲ್ಲಿ ನಿಮ್ಮ ಕೆಲಸವು ಮೇಲಾಧಿಕಾರಿಗಳಿಗೆ ಮೆಚ್ಚುಗೆ ಎನಿಸಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಹೆಚ್ಚಾಗಲಿದೆ. ಹೊಸ ಉದ್ಯಮಗಳಿಗೆ ಹೂಡಿಕೆ ಮಾಡಲು ಬಯಸುವವರಿಗೆ ಇದು ಶುಭದಿನವಾಗಿದೆ.