ಮೇಷ : ಲೌಕಿಕ ಜೀವನದಲ್ಲಿ ಆಸಕ್ತಿ ಕಡಿಮೆಯಾಗಿ ಆಧ್ಯಾತ್ಮಿಕ ಜೀವನದತ್ತ ಮನಸ್ಸು ವಾಲಲಿದೆ. ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ವಿಮೆ ಹಾಗೂ ಖರ್ಚು ವೆಚ್ಚಿನ ವಿಚಾರದ ಕಡೆಗೆ ಗಮನಹರಿಸಬೇಕು. ವೈವಾಹಿಕ ಜೀವನವು ನೆಮ್ಮದಿಯಿಂದ ಇರಲಿದೆ.
ವೃಷಭ : ಇಂದು ನಿಮಗೆ ಹಣದ ಹರಿವು ಹೆಚ್ಚಳವಾಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಪರಿಸ್ಥಿತಿಗಳು ನಿಮ್ಮ ಪರವಾಗಿ ಇರಲಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಇಂದು ಲಾಭದ ದಿನವಾಗಿದೆ. ಪ್ರವಾಸದ ಸಮಯದಲ್ಲಿ ಅಪರಿಚಿತರ ಭೇಟಿ ಹೊಸ ಸ್ನೇಹ ಸಂಬಂಧವನ್ನ ಹುಟ್ಟಿಸಲಿದೆ.
ಮಿಥುನ : ಉತ್ತಮ ಸಂಭಾಷಣಾ ಚಾತುರ್ಯದ ಮೂಲಕ ಕಚೇರಿಯಲ್ಲಿ ಮೇಲಾಧಿಕಾರಿಗಳ ಮನಸ್ಸನ್ನು ಗೆಲ್ಲಲಿದ್ದೀರಿ. ಧ್ಯಾನ ಹಾಗೂ ಯೋಗದಿಂದ ಆರೋಗ್ಯ ಸುಧಾರಿಸಲಿದೆ . ಹಳೆಯ ಹೂಡಿಕೆಗಳ ಮೂಲಕ ಇಂದು ಲಾಭ ಗಳಿಸಲಿದ್ದೀರಿ.
ಕಟಕ : ಸಹೋದ್ಯೋಗಿಗಳ ಜೊತೆ ಉಂಟಾಗುವ ಭಿನ್ನಾಭಿಪ್ರಾಯದಿಂದ ಕಚೇರಿಯಲ್ಲಿ ಕಿರಿಕಿರಿ ಎನಿಸಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯದ ಮುನ್ಸೂಚನೆ ಸಿಗಲಿದೆ. ಕುಟುಂಬಸ್ಥರೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಬಾಧಿಸಲಿದೆ.
ಸಿಂಹ : ನಿಮ್ಮ ಮನಸ್ಸಿನಲ್ಲಿರುವ ಆತಂಕಗಳಿಗೆ ಸಂಗಾತಿ ಸಾಂತ್ವನ ಹೇಳಲಿದ್ದಾರೆ. ವಿದೇಶಿ ವ್ಯವಹಾರ ನಡೆಸುವವರಿಗೆ ಇದು ಯೋಗ್ಯ ದಿನವಲ್ಲ. ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ. ಮಕ್ಕಳಿಂದ ನಿಮಗೆ ನಿರಾಶೆ ಉಂಟಾಗಲಿದೆ.
ಕನ್ಯಾ : ಅತಿಯಾದ ಖರ್ಚು ವೆಚ್ಚಗಳು ಒಳ್ಳೆಯದಲ್ಲ. ಇದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದೀರಿ. ವೈವಾಹಿಕ ಸಂಬಂಧಕ್ಕಾಗಿ ಬಹಳ ದಿನಗಳಿಂದ ಹುಡುಕಾಟ ನಡೆಸುತ್ತಿರುವವರಿಗೆ ಇಂದು ಯೋಗ್ಯ ಸಂಬಂಧ ಕೂಡಿ ಬರಲಿದೆ. ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ವ್ಯಾಪಾರಿಗಳಿಗೆ ಇದು ಶುಭ ದಿನ.
ತುಲಾ : ಕೋರ್ಟ್ – ಕಚೇರಿ ವ್ಯವಹಾರಗಳಲ್ಲಿ ಪರಿಸ್ಥಿತಿ ನಿಮ್ಮ ಪರವಾಗಿ ಇರಲಿದೆ. ವೈವಾಹಿಕ ಜೀವನದಲ್ಲಿ ಕೊಂಚ ಏರಿಳಿತಗಳು ಕಂಡುಬರಲಿದೆ. ನಿಮ್ಮಿಂದ ಸಾಲ ಪಡೆದವರು ಇಂದು ಹಣ ಹಿಂದಿರುಗಿಸಲಿದ್ದಾರೆ. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ.
ವೃಶ್ಚಿಕ : ಸಂಗಾತಿಯನ್ನ ನಿರ್ಲಕ್ಷಿಸಿದಷ್ಟೂ ವೈವಾಹಿಕ ಜೀವನದ ಸಂತೋಷ ನೆಮ್ಮದಿ ಹದಗೆಡುತ್ತದೆ ಅನ್ನೋದು ತಲೆಯಲ್ಲಿರಲಿ. ಇಷ್ಟು ದಿನ ಆರ್ಥಿಕ ಸಂಕಷ್ಟದಲ್ಲಿದ್ದ ನಿಮಗೆ ಇಂದು ಹಣದ ಹರಿವು ಹೆಚ್ಚಲಿದೆ. ನಾಳೆ ಮಾಡಿದರಾಯಿತು ಎಂಬ ಸೋಮಾರಿ ಬುದ್ಧಿ ಬಿಟ್ಟುಬಿಡಿ.
ಧನು : ಕಚೇರಿ ಕೆಲಸಗಳಲ್ಲಿ ಸಕಾರಾತ್ಮಕ ಬೆಳವಣಿಗೆ ಕಾಣಲಿದ್ದೀರಿ. ಅನಿರೀಕ್ಷಿತ ಜವಾಬ್ದಾರಿಯೊಂದು ನಿಮ್ಮ ಹೆಗಲೇರಲಿದೆ. ಹಿರಿಯರು ಬೈದರು ಎಂದ ಮಾತ್ರಕ್ಕೆ ಮರುವಾದ ಮಾಡಲು ಹೋಗದಿರಿ. ಇದರಿಂದ ಮನೆಯ ನೆಮ್ಮದಿ ಕೆಡಲಿದೆ.
ಮಕರ: ದೀರ್ಘಕಾಲದ ಅನಾರೋಗ್ಯ ಸಮಸ್ಯೆ ಕ್ರಮೇಣವಾಗಿ ಸುಧಾರಿಸಲಿದೆ. ಅಪೂರ್ಣವಾದ ಕೆಲಸಗಳು ಇಂದು ಪೂರ್ಣಗೊಳ್ಳಲಿವೆ. ಸಂಗಾತಿಯ ಜೊತೆ ಉತ್ತಮ ಸಂವಹನ ನಡೆಸಲಿದ್ದೀರಿ. ವಿದ್ಯಾರ್ಥಿಗಳು ಇನ್ನಷ್ಟು ಕಠಿಣ ಪರಿಶ್ರಮ ಪಡಲೇಬೇಕು.
ಕುಂಭ: ಹಣದ ವಿಚಾರವಾಗಿ ಸಂಗಾತಿಯೊಂದಿಗೆ ವಾದ ಮಾಡುವ ಸಾಧ್ಯತೆ ಇದೆ. ವ್ಯಾಪಾರ-ವ್ಯವಹಾರದಲ್ಲಿ ಅದೃಷ್ಟ ನಿಮ್ಮ ಕೈ ಹಿಡಿಯಲಿದೆ. ಎಲ್ಲರ ಸಲಹೆಗಳಿಗೆ ಕಿವಿಗೊಡಲೇಬೇಕು ಎಂದೇನಿಲ್ಲ. ಕಚೇರಿ ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ.
ಮೀನ : ಸಾರ್ವಜನಿಕ ಜೀವನದಲ್ಲಿ ರಾಜಕೀಯ ರಂಗದವರಿಗೆ ಉತ್ತಮ ಪ್ರಶಂಸೆ ಸಿಗಲಿದೆ. ಅನಗತ್ಯ ವಾದಗಳಿಂದ ದೂರವಿದ್ದಷ್ಟು ನಿಮಗೆ ಒಳ್ಳೆಯದು. ಕುಟುಂಬಸ್ಥರ ಸಂತೋಷದಲ್ಲಿ ನಿಮ್ಮ ಸಂತೋಷವನ್ನ ಕಾಣಲಿದ್ದೀರಿ. ಆರ್ಥಿಕವಾಗಿ ಬೆಳವಣಿಗೆ ಹೊಂದಲಿದ್ದೀರಿ.