ಮೇಷ : ಇಂದು ನೀವು ಅಂದುಕೊಂಡ ಕಾರ್ಯದಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ಹಣವನ್ನು ಗಳಿಸಬೇಕೆಂಬ ನಿಮ್ಮ ಆಸೆಯು ಅಡ್ಡದಾರಿಗೆ ಎಳೆದೊಯ್ಯುವ ಸಾಧ್ಯತೆ ಇದೆ.
ಆದಷ್ಟು ಎಚ್ಚರಿಕೆಯಿಂದಿರಿ. ನಿಮ್ಮ ಸಾಧನೆಯು ಸಹೋದ್ಯೋಗಿಗಳಲ್ಲಿ ಅಸೂಯೆಯನ್ನು ಹುಟ್ಟು ಹಾಕಬಹುದು.
ವೃಷಭ : ಪುಣ್ಯ ಕ್ಷೇತ್ರಗಳಿಗೆ ಪ್ರಯಾಣ ಬೆಳೆಸುವ ನೀವು ದಾನ – ಧರ್ಮ ಮಾಡುವಿರಿ. ಕೆಲಸದ ವಾತಾವರಣದಲ್ಲಿ ಗಮನಾರ್ಹ ಬದಲಾವಣೆಗಳು ಉಂಟಾಗಲಿದೆ. ನಿಮ್ಮ ಬಾಲ್ಯದ ಸ್ನೇಹಿತೆ ಇಂದು ನಿಮ್ಮನ್ನು ಭೇಟಿಯಾಗಲಿದ್ದಾರೆ. ಉತ್ತಮ ನಡವಳಿಕೆಯು ಪ್ರಶಂಸೆ ಗಿಟ್ಟಿಸಿಕೊಳ್ಳಲಿದೆ.
ಮಿಥುನ : ಪತ್ನಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಇದರಿಂದ ನಿಮಗೆ ಆಸ್ಪತ್ರೆಗೆ ತೆರಳಬೇಕಾಗಿ ಬರಲಿದೆ. ರಾತ್ರಿ ಪಾಳಿಯ ಕೆಲಸಗಾರರಿಗೆ ಇಂದು ಒತ್ತಡ ಹೆಚ್ಚಲಿದೆ. ಸ್ನೇಹಿತರು ಆರ್ಥಿಕವಾಗಿ ಸಹಾಯ ಮಾಡಲಿದ್ದಾರೆ.
ಕಟಕ : ಸಂಗಾತಿಯೊಡನೆ ಉತ್ತಮ ಸಮಯವನ್ನು ಕಳೆಯುವಿರಿ. ಮಕ್ಕಳಲ್ಲಿ ಓದಿನ ಪ್ರಗತಿಯು ನಿಮ್ಮ ನೆಮ್ಮದಿಯನ್ನು ಹೆಚ್ಚಿಸಲಿದೆ. ಮಧ್ಯಾಹ್ನದ ವೇಳೆಗೆ ಶುಭ ಸುದ್ದಿಯೊಂದನ್ನು ಕೇಳುವಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.
ಸಿಂಹ : ಉದ್ಯೋಗದಲ್ಲಿ ಇಂದು ನಿಮಗೆ ಯಶಸ್ಸಿದೆ. ನಿಮ್ಮ ಕಾರ್ಯ ವೈಖರಿಯು ಮೇಲಾಧಿಕಾರಿಗಳಿಂದ ಮೆಚ್ಚುಗೆಯನ್ನು ಗಳಿಸಲಿದೆ. ಈ ಹಿಂದೆ ಸಂಪೂರ್ಣವಾಗಿ ವಾಸಿಯಾಗಿದ್ದ ಕಾಯಿಲೆಯು ಇಂದು ಪುನಃ ತನ್ನ ಲಕ್ಷಣಗಳನ್ನು ತೋರಿಸಲಿದೆ. ಇದರಿಂದ ಮತ್ತೆ ಆತಂಕಕ್ಕೆ ಒಳಗಾಗುವಿರಿ.
ಕನ್ಯಾ : ಹಲ್ಲು ನೋವಿನ ಸಮಸ್ಯೆಯು ನಿಮ್ಮನ್ನು ಕಾಡಲಿದೆ. ಇದರಿಂದಾಗಿ ನಿಮಗೆ ಇಡೀ ದಿನ ಕಿರಿಕಿರಿ ಎನಿಸಲಿದೆ. ಆರೋಗ್ಯದ ಬಗ್ಗೆ ಜಾಗೃತೆ ಇರಲಿ. ಇಂದು ನಿಮ್ಮ ಮನೆಗೆ ಅತಿಥಿ ಆಗಮನವಿದೆ. ವಿದ್ಯಾರ್ಥಿಗಳಿಗೆ ವಿದೇಶಿ ಪ್ರಯಾಣದ ಯೋಗವಿದೆ.
ತುಲಾ : ಅಮೂಲ್ಯವಾದ ವಸ್ತುವೊಂದನ್ನು ಇಂದು ಕಳೆದುಕೊಳ್ಳಲಿದ್ದೀರಿ. ರಾತ್ರಿ ವೇಳೆಗೆ ದುಃಖಕರ ಸುದ್ದಿಯೊಂದು ನಿಮ್ಮ ಕಿವಿಗೆ ಬಂದಪ್ಪಳಿಸುವ ಸಾಧ್ಯತೆ ಇದೆ. ಏನನ್ನು ಸಾಧಿಸಬೇಕೆಂದು ಇಷ್ಟು ದಿನ ಪ್ರಯತ್ನ ಪಟ್ಟಿದ್ದೀರೋ ಅವೆಲ್ಲದ್ದಕ್ಕೂ ಇಂದು ಕಾಲ ಕೂಡಿ ಬರಲಿದೆ.
ವೃಶ್ಚಿಕ : ಹಣ ಉಳಿತಾಯ ಆಗಬೇಕು ಅಂದರೆ ವ್ಯರ್ಥ ಖರ್ಚಿಗೆ ಕಡಿವಾಣ ಬೀಳಲೇಬೇಕು. ವೇಗವಾಗಿ ವಾಹನ ಸಂಚಾರ ಮಾಡಲೇಬೇಡಿ. ಕಚೇರಿ ಕೆಲಸದ ನಿಮಿತ್ತ ಪ್ರವಾಸಿ ತಾಣಕ್ಕೆ ತೆರಳುವ ಸದಾವಕಾಶ ಕೂಡಿ ಬರಲಿದೆ. ಪತ್ನಿಯ ಸಾಧನೆಯು ನಿಮ್ಮ ಗೌರವ ಹೆಚ್ಚಿಸಲಿದೆ.
ಧನು : ಸಂಬಂಧಿಗಳು ನಿಮ್ಮ ಗುಣವನ್ನು ಕೊಂಡಾಡಲಿದ್ದಾರೆ. ಇಂದು ನೀವು ಪ್ರಭಾವಿ ವ್ಯಕ್ತಿಗಳನ್ನು ಭೇಟಿ ಮಾಡುವಿರಿ. ದೊಡ್ಡ ಮೊತ್ತದ ಹಣವು ಲಾಭದ ರೂಪದಲ್ಲಿ ನಿಮ್ಮ ಕೈ ಸೇರಲಿದೆ. ವ್ಯಾಪಾರ – ವ್ಯವಹಾರಗಳಲ್ಲಿ ಲಾಭವಿದೆ.
ಮಕರ : ಯಾರದ್ದೋ ಮೇಲಿನ ಕೋಪಕ್ಕೆ ಸ್ವೀಕರಿಸಿದ ಸವಾಲು ನಿಮಗೆ ದೊಡ್ಡ ಕಷ್ಟವನ್ನೇ ನೀಡುವುದು. ಹೀಗಾಗಿ ಕೋಪದ ಕೈಗೆ ಎಂದಿಗೂ ಬುದ್ಧಿ ಕೊಡಬೇಡಿ. ಮನೆಯಲ್ಲಿ ಕೃಷಿ ಸಂಬಂಧಿ ಚಟುವಟಿಕೆಗಳು ನಡೆಯಲಿದೆ. ಇಂದು ನಿಮಗೆ ದೇವಿ ದರ್ಶನ ಭಾಗ್ಯ ಕೂಡಿ ಬರಲಿದೆ.
ಕುಂಭ : ರಾಜಕೀಯ ಕ್ಷೇತ್ರದಲ್ಲಿ ಇರುವವರು ಇಂದು ಸಾರ್ವಜನಿಕ ಜೀವನದಲ್ಲಿ ಮನ್ನಣೆ ಗಳಿಸಲಿದ್ದಾರೆ. ಮಕ್ಕಳ ಓದಿನ ಬಗ್ಗೆ ಜಾಗ್ರತೆ ಅತ್ಯಗತ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ತಯಾರಿ ನಡೆಸಿ. ಮುಂದಿನ ದಿನಗಳಲ್ಲಿ ಶುಭವಿದೆ.
ಮೀನ : ಪ್ರೀತಿ ಪಾತ್ರರಿಂದ ಸಿಹಿ ಸುದ್ದಿಯನ್ನು ಕೇಳುವಿರಿ. ಮಕ್ಕಳು ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲಿದ್ದಾರೆ. ಉದರ ಸಂಬಂಧಿ ಕಾಯಿಲೆಗಳು ನಿಮ್ಮನ್ನು ಭಾದಿಸುವ ಸಾಧ್ಯತೆ ಇದೆ. ಹವಾಮಾನ ವೈಪರಿತ್ಯದಿಂದ ಅನಾರೋಗ್ಯಕ್ಕೀಡಾಗುವಿರಿ. ಅಂದುಕೊಂಡ ಕಾರ್ಯವು ನೆರವೇರಲಿದೆ.