alex Certify ಈ ರಾಶಿಯವರಿಗೆ ಆಗಲಿದೆ ಇಂದು ಆರ್ಥಿಕ ಸುಧಾರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗೆ ಆಗಲಿದೆ ಇಂದು ಆರ್ಥಿಕ ಸುಧಾರಣೆ

ಮೇಷ : ನಿಮ್ಮ ಪ್ರೇಮ ಸಂಬಂಧವು ಮದುವೆಯಾಗಿ ಬಡ್ತಿ ಪಡೆಯವ ಸಾಧ್ಯತೆ ಸನ್ನಿಹಿತವಾಗಲಿದೆ. ಇಂದು ನೀವು ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗಿ ಭೂ ವ್ಯಾಜ್ಯಗಳಿಗೆ ಪರಿಹಾರ ಕಂಡುಕೊಳ್ಳಲಿದ್ದೀರಿ. ವಿದ್ಯಾರ್ಥಿಗಳು ಅಂದುಕೊಂಡ ಗುರಿಯನ್ನು ಸಾಧಿಸಲಿದ್ದಾರೆ.

ವೃಷಭ : ಕಷ್ಟದ ಸಮಯದಲ್ಲಿ ನಿಮ್ಮ ಸ್ನೇಹಿತರು ನಿಮಗೆ ಹೆಗಲು ನೀಡಲಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಪ್ರಶಂಸೆ ಗಿಟ್ಟಿಸಿಕೊಳ್ಳಲ್ಲಿದ್ದೀರಿ. ಗುತ್ತಿಗೆ ಆಧಾರಿತ ಹುದ್ದೆ ಮಾಡುತ್ತಿರುವವರು ಇಂದು ಉತ್ತಮ ಸಾಧನೆ ತೋರಲಿದ್ದೀರಿ.

ಮಿಥುನ : ನಿಮ್ಮ ಹೊಸ ಸಾಹಸಕ್ಕೆ ಕುಟುಂಬಸ್ಥರು ಬೆಂಬಲ ನೀಡಲಿದ್ದಾರೆ. ಇದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ. ಸಾರ್ವಜನಿಕ ಜೀವನದಲ್ಲಿ ನೀವು ಆಕರ್ಷಣೆಯ ಕೇಂದ್ರ ಬಿಂದು ಆಗಲಿದ್ದೀರಿ.

ಕಟಕ : ಕಚೇರಿ ಕೆಲಸದ ನಿಮಿತ್ತ ವಿದೇಶಿ ಪ್ರಯಾಣ ಕೈಗೊಳ್ಳುವ ಅವಕಾಶ ನಿಮ್ಮದಾಗಲಿದೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ಆಧ್ಮಾತ್ಮ ಜೀವನದತ್ತ ಒಲವು ತೋರಲಿದ್ದೀರಿ. ಕಮಿಷನ್​ ಆಧಾರದ ಮೇಲೆ ಕೆಲಸ ಮಾಡುವವರು ಇಂದು ನಷ್ಟ ಅನುಭವಿಸಲಿದ್ದಾರೆ.

ಸಿಂಹ : ಸಂಗಾತಿಯೊಂದಿಗೆ ಬಹಳ ದಿನದ ಬಳಿಕ ಸಮಯ ಕಳೆಯಲಿದ್ದೀರಿ. ಮಕ್ಕಳು ನಿಮ್ಮ ಕೀರ್ತಿಯನ್ನು ಹೆಚ್ಚಿಸುವಂತಹ ಸಾಧನೆ ತೋರಲಿದ್ದಾರೆ. ಹಿರಿಯರ ಮಾರ್ಗದರ್ಶನವೇ ವ್ಯವಹಾರದಲ್ಲಿ ನಿಮಗೆ ಮಾರ್ಗದರ್ಶನವಾಗಲಿದೆ.

ಕನ್ಯಾ : ವಿದೇಶಿ ಹೂಡಿಕೆದಾರರು ನಿಮ್ಮ ಉದ್ಯಮಕ್ಕೆ ಬಹುದೊಡ್ಡ ಲಾಭವನ್ನೇ ತರಲಿದ್ದಾರೆ. ನಿಮ್ಮ ಮನಸ್ಸು ಇಂದು ಆಹ್ಲಾದಕರವಾಗಿ ಇರಲಿದೆ. ನಿಮ್ಮ ದಕ್ಷತೆಯನ್ನು ಕಂಡು ಮೇಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ. ಬಹಳ ದಿನಗಳ ಬಳಿಕ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ.

ತುಲಾ : ಸ್ನೇಹಿತರ ನಡುವೆ ಮೂಡಿದ್ದ ವೈಮನಸ್ಯ ದೂರಾಗಲಿದೆ. ನೀವು ಮಾಡಿದ ಒಳ್ಳೆಯ ಕೆಲಸ ಮೆಚ್ಚುಗೆಗೆ ಪಾತ್ರವಾಗಲಿದೆ. ತಾಯಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ.

ವೃಶ್ಚಿಕ : ನಿಮ್ಮ ಪ್ರೇಮ ಸಂಬಂಧವು ಮನೆಯಲ್ಲಿ ತಿಳಿದು ದೊಡ್ಡ ರಾದ್ಧಾಂತವೇ ಆಗಲಿದೆ. ಇಂದು ನೀವು ಆರ್ಥಿಕವಾಗಿ ಸುಧಾರಣೆ ಕಾಣಲಿದ್ದೀರಿ. ಆರೋಗ್ಯ ಸಂಬಂಧಿ ಯಾವುದೇ ಸಮಸ್ಯೆ ನಿಮ್ಮ ಹತ್ತಿರವೂ ಸುಳಿಯೋದಿಲ್ಲ.

ಧನು : ಕ್ಷುಲ್ಲಕ ಕಾರಣಕ್ಕೆ ಸಂಗಾತಿಯ ಜೊತೆಗೆ ದೊಡ್ಡ ಮಾತಿನ ಯುದ್ಧವೇ ನಡೆಯಲಿದೆ. ಇದರಿಂದ ಇಡೀ ದಿನ ನಿಮ್ಮ ಮನಸ್ಸು ಹಾಳಾಗಲಿದೆ. ಅನವಶ್ಯಕ ಖರ್ಚುಗಳತ್ತ ಕಡಿವಾಣ ಹಾಕುವುದು ಉತ್ತಮ. ಹೂಡಿಕೆಯತ್ತ ಗಮನ ಹರಿಸಿ.

ಮಕರ : ವೈವಾಹಿಕ ಸಂಬಂಧದಲ್ಲಿ ಸಿಹಿ ಹೆಚ್ಚಲಿದೆ. ಉತ್ತಮ ಜೀವನ ಶೈಲಿಯು ನಿಮ್ಮ ಆರೋಗ್ಯವನ್ನು ಸುಧಾರಿಸಲಿದೆ. ಕಚೇರಿಯಲ್ಲಿ ವಾತಾವರಣ ಚೆನ್ನಾಗಿರಲಿದೆ.

ಕುಂಭ : ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಲಿದ್ದಾರೆ. ತಂದೆಯು ನಿಮ್ಮ ಮೇಲೆ ಮುನಿಸಿಕೊಳ್ಳಬಹುದು. ವೃತ್ತಿಪರ ಜೀವನದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ.

ಮೀನ : ಸಂಗಾತಿಯ ಕೊಂಕು ಮಾತುಗಳು ನಿಮ್ಮ ಮನಸ್ಸನ್ನು ಕಲುಷಿತಗೊಳಿಸಬಹುದು. ಗುರುವಿನ ಅನುಗ್ರಹದಿಂದ ವಿದ್ಯಾರ್ಥಿಗಳಿಗೆ ಗುರಿ ಸಾಧಿಸಲು ಅನುಕೂಲ ವಾತಾವರಣ ಇರಲಿದೆ. ಕುಟುಂಬಸ್ಥರ ಜೊತೆ ಉತ್ತಮ ಸಮಯ ಕಳೆಯಲಿದ್ದೀರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...