alex Certify ಈ ರಾಶಿಯವರಿಗಿದೆ ಇಂದು ವ್ಯವಹಾರಗಳಲ್ಲಿ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯವರಿಗಿದೆ ಇಂದು ವ್ಯವಹಾರಗಳಲ್ಲಿ ಲಾಭ

ಮೇಷ: ವ್ಯಾಪಾರ – ವ್ಯವಹಾರಗಳಲ್ಲಿ ಪ್ರಗತಿ ಕಾಣುವಿರಿ. ದಾಂಪತ್ಯ ಜೀವನದಲ್ಲಿದ್ದ ಬಿರುಕುಗಳು ಶಮನವಾಗಲಿದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚು ಮಾಡಬೇಕಾಗಿ ಬರಬಹುದು. ಸಾರ್ವಜನಿಕ ಜೀವನದಲ್ಲಿ ಮುಜುಗರಕ್ಕೀಡಾಗುವ ಸನ್ನಿವೇಶವೊಂದು ಎದುರಾಗಲಿದೆ.

ವೃಷಭ : ಕಂಕಣ ಭಾಗ್ಯ ಕೂಡದೇ ತಲೆಕೆಡಿಸಿಕೊಂಡಿದ್ದ ನಿಮಗೆ ಇಂದು ವೈವಾಹಿಕ ಸಂಬಂಧವೊಂದು ಕೂಡಿಬರಲಿದೆ. ಸಂಗಾತಿಯ ಮೇಲೆ ಅತಿಯಾದ ಸಂದೇಹ ಒಳ್ಳೆಯದಲ್ಲ. ಬದಲಾವಣೆ ಜಗದ ನಿಯಮ ಎಂಬ ಮಾತು ನೆನಪಿನಲ್ಲಿರಲಿ. ಯಾವುದಕ್ಕೂ ಅತಿಯಾಗಿ ಚಿಂತಿಸಬೇಡಿ.

ಮಿಥುನ : ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ವೃತ್ತಿ ಜೀವನದ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿ ಬರಲಿದೆ. ಅಂದುಕೊಂಡ ಕಾರ್ಯಗಳು ನೆರವೇರಲಿದೆ. ನಡೆಸುವ ವ್ಯವಹಾರಗಳಲ್ಲಿ ಮಹತ್ವಾಕಾಂಕ್ಷೆ ಇರಲಿ. ಎಲ್ಲಾ ವಿಚಾರದಲ್ಲೂ ಹಠ ಸಾಧನೆ ಬೇಡ.

ಕಟಕ : ಮೌನ ಪ್ರಿಯರಾದ ನಿಮಗೆ ಈ ಗುಣವೇ ಇಂದು ಮಾರಕವಾಗಿ ಪರಿಣಮಿಸಬಹುದು. ಮಾತನಾಡುವ ಸಂದರ್ಭದಲ್ಲಿ ಮೌನವಾಗಿದ್ದರೆ ನಿಮಗೇ ನಷ್ಟವಾಗಲಿದೆ. ವಿದ್ಯಾರ್ಥಿಗಳು ಉತ್ತಮ ಗುರಿಯನ್ನು ನಿರ್ಮಿಸಿಕೊಳ್ಳಿ. ಅದರಲ್ಲಿ ಸ್ಪಷ್ಟತೆ ಇರಲಿದೆ. ದೈವಾನುಗ್ರಹವಿದೆ.

ಸಿಂಹ : ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ನೀಡಲಿದ್ದಾರೆ. ಇದು ಪೋಷಕರಿಗೆ ಸಮಾಧಾನ ತಂದುಕೊಡಲಿದೆ. ವೈವಾಹಿಕ ಸಂಬಂಧದ ಬಗ್ಗೆ ಮಾತುಕತೆ ನಡೆಯಲಿದೆ. ಪೋಷಕರೊಂದಿಗೆ ಅತಿಯಾದ ವಾದ ಒಳ್ಳೆಯದಲ್ಲ.

ಕನ್ಯಾ : ನಿಮ್ಮ ಒಳ್ಳೆಯ ಗುಣವನ್ನು ದುರುಪಯೋಗ ಪಡಿಸಿಕೊಳ್ಳುವವರು ಇದ್ದಾರೆ. ಇಂತವರಿಂದ ಹುಷಾರಾಗಿರಿ. ಮನೆಯ ನವೀಕರಣ ಕಾರ್ಯದ ಬಗ್ಗೆ ಚಿಂತನೆ ಮಾಡಲಿದ್ದೀರಿ. ವ್ಯಾಪಾರ – ವ್ಯವಹಾರಗಳಲ್ಲಿ ಲಾಭವಿದೆ. ಆದರೆ ಹೊಸ ಉದ್ಯಮದಲ್ಲಿ ಹೂಡಿಕೆ ಬೇಡ.

ತುಲಾ : ಕಚೇರಿ ಕೆಲಸದಲ್ಲಿ ನಿಮಗೆ ಮಹತ್ವದ ಮುನ್ನಡೆ ಇದೆ. ದೊಡ್ಡ ಅಧಿಕಾರವು ನಿಮಗೆ ಸಿಗಲಿದೆ. ಸಂಗಾತಿಯು ನಿಮ್ಮ ಪ್ರಯತ್ನಗಳನ್ನು ಪ್ರಶಂಸಿಸಲಿದ್ದಾರೆ. ಇದರಿಂದ ನೀವು ಸಂತೋಷಗೊಳ್ಳುವಿರಿ. ನಿಮ್ಮ ಸರಳತೆ ದುರುಪಯೋಗ ಮಾಡಿಕೊಳ್ಳದಂತೆ ನೋಡಿಕೊಳ್ಳಿ.

ವೃಶ್ಚಿಕ : ಮನೆಯಲ್ಲಿ ಪೋಷಕರಿಗೆ ಅನಾರೋಗ್ಯ ಉಂಟಾಗುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಕಿರಿಕಿರಿ ಉಂಟಾಗಲಿದೆ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಯಲಿದೆ. ಹೊಂದಾಣಿಕೆ ಇಲ್ಲದೇ ಸಂಸಾರ ಬಂಡಿ ಸಾಗದು. ಹೀಗಾಗಿ ಅತಿಯಾಗಿ ಹಠ ಸಾಧನೆ ಮಾಡಬೇಡಿ.

ಧನು : ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ನಿಮಗೆ ಬಂಧುಗಳು ಸಹಾಯ ಹಸ್ತ ಚಾಚಲಿದ್ದಾರೆ. ಉದ್ಯೋಗ ಬದಲಾವಣೆ ಸದ್ಯಕ್ಕೆ ಬೇಡ. ಅಂದುಕೊಂಡ ಕಾರ್ಯಗಳಲ್ಲಿ ವಿಘ್ನ ಎದುರಾಗಲಿದೆ. ಜಾರಿಕೊಳ್ಳುವ ನಿಮ್ಮ ಸ್ವಭಾವ ಟೀಕೆಗೆ ಒಳಗಾಗಲಿದೆ.

ಮಕರ : ಯಾವುದೇ ಕಾರ್ಯದಲ್ಲಿ ಅತಿಯಾದ ಗೊಂದಲ ಬೇಡ. ಇದರಿಂದ ನಿಮಗೆ ಹಿನ್ನಡೆ ಆಗಲಿದೆ. ಸ್ನೇಹಿತರಿಗೆ ನೀವು ನೀಡಿದ ಸಾಲವು ಇಂದು ಹಿಂದಿರುಗಲಿದೆ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಮೂಡಬಹುದು.

ಕುಂಭ : ತಪ್ಪುಗಳನ್ನು ಸಮರ್ಥಿಸಿಕೊಳ್ಳುವ ನಿಮ್ಮ ಗುಣದಿಂದಾಗಿ ಕಚೇರಿಯಲ್ಲಿ ನಿಂದನೆಗೆ ಒಳಗಾಗುವಿರಿ. ಧಾರ್ಮಿಕ ಸಮಾರಂಭಗಳಲ್ಲಿ ಭಾಗಿಯಾಗಲಿದ್ದೀರಿ. ವ್ಯಾಪಾರ ವ್ಯವಹಾರ ವಿಚಾರದಲ್ಲಿ ಹಿರಿಯರಿಂದ ಸಲಹೆ ಪಡೆಯಲಿದ್ದೀರಿ.

ಮೀನ : ಅಧಿಕಾರಿಗಳ ಕಿರಿಕಿರಿಯಿಂದಾಗಿ ಕೆಲಸದ ಮೇಲಿನ ಆಸಕ್ತಿಯನ್ನು ಕಳೆದುಕೊಳ್ಳುವಿರಿ. ಸ್ನೇಹಿತರ ಮೇಲಿನ ಅತಿಯಾದ ವಿಶ್ವಾಸವು ನಿಮಗೆ ದೊಡ್ಡ ಆಘಾತವನ್ನೇ ನೀಡಲಿದೆ. ವಿದೇಶಿ ಪ್ರಯಾಣದ ಅವಕಾಶವು ಕೂಡಿ ಬರಲಿದೆ.ಮನೆಯಲ್ಲಿ ಅಶಾಂತಿ ಇರಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...