![](https://kannadadunia.com/wp-content/uploads/2022/04/horoscope-astrology-1632749846-1024x435-1.jpg)
ಮೇಷ ರಾಶಿ
ಲೇಖಕರು ಮತ್ತು ಕಲಾವಿದರಿಗೆ ಸಮಯ ಅನುಕೂಲಕರವಾಗಿದೆ. ಸಹೋದರರ ನಡುವೆ ಪ್ರೀತಿ ಹೆಚ್ಚಲಿದೆ. ಮಧ್ಯಾಹ್ನದ ನಂತರ ಚಿಂತೆ ಹೆಚ್ಚಾಗುವ ಸಾಧ್ಯತೆ ಇದೆ. ಉತ್ಸಾಹ ಕುಂದಲಿದೆ.
ವೃಷಭ ರಾಶಿ
ಮಹತ್ವಪೂರ್ಣ ಕಾರ್ಯವನ್ನು ಇವತ್ತು ಪೂರ್ಣಗೊಳಿಸಿ. ಧನಲಾಭದ ಸಂಭವ ಇದೆ. ಇಂದು ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಉತ್ಸಾಹದಿಂದ ಇರುತ್ತೀರಿ. ಕುಟುಂಬದವರೊಂದಿಗೆ ಆನಂದವಾಗಿ ಸಮಯ ಕಳೆಯುತ್ತೀರಿ.
ಮಿಥುನ ರಾಶಿ
ಇವತ್ತು ಕೊಂಚ ಸಾವಧಾನದಿಂದ ಇರುವುದು ಒಳಿತು. ಮನೆಯ ಸದಸ್ಯರೇ ನಿಮ್ಮನ್ನು ವಿರೋಧಿಸುತ್ತಾರೆ. ಕಾರ್ಯ ಪ್ರಾರಂಭವಾದ್ರೂ ಅಪೂರ್ಣವಾಗಿ ಉಳಿಯಲಿದೆ. ಆತ್ಮವಿಶ್ವಾಸ ಹೆಚ್ಚಲಿದೆ.
ಕರ್ಕ ರಾಶಿ
ವ್ಯಾಪಾರಿಗಳಿಗೆ ಇವತ್ತು ಲಾಭವಿದೆ. ರಮಣೀಯ ಕ್ಷೇತ್ರಕ್ಕೆ ಪ್ರವಾಸದ ಆಯೋಜನೆಯಾಗುವ ಸಾಧ್ಯತೆ ಇದೆ. ಭೂರಿ ಭೋಜನ ಸವಿಯುವ ಅವಕಾಶವೂ ಸಿಗಲಿದೆ.
ಸಿಂಹ ರಾಶಿ
ಹೊಸ ಕಾರ್ಯವನ್ನು ಆರಂಭಿಸಲು ಇಂದು ಶುಭದಿನ. ಅಪೂರ್ಣವಾಗಿದ್ದ ಕೆಲಸಗಳೆಲ್ಲ ಪೂರ್ಣಗೊಳ್ಳಲಿವೆ. ಮಿತ್ರರೊಂದಿಗೆ ಉಪಹಾರ ಮಾಡಲಿದ್ದೀರಿ. ಆದಾಯ ವೃದ್ಧಿಸಲಿದೆ. ಚಿಕ್ಕದೊಂದು ಪ್ರವಾಸ ಯೋಗವೂ ಇದೆ.
ಕನ್ಯಾ ರಾಶಿ
ಉದ್ಯಮದಲ್ಲಿ ಇತರ ವ್ಯಾಪಾರಸ್ಥರಿಂದ ನಿಮಗೆ ಲಾಭವಾಗಲಿದೆ. ದೀರ್ಘ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರಿ. ಮನಸ್ಸು ಇಂದು ಶಾಂತವಾಗಿ ಇರಲಿದೆ.
ತುಲಾ ರಾಶಿ
ಆಲಸ್ಯ ಮತ್ತು ಹೆಚ್ಚು ಕೆಲಸದ ಒತ್ತಡದಿಂದಾಗಿ ಮನಸ್ಸು ವ್ಯಾಕುಲಗೊಳ್ಳಲಿದೆ. ಆದ್ರೆ ನಿರ್ಧರಿತ ಸಮಯದಲ್ಲಿ ಅಂದುಕೊಂಡ ಕಾರ್ಯವನ್ನು ಪೂರ್ಣಗೊಳಿಸುತ್ತೀರಿ. ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ.
ವೃಶ್ಚಿಕ ರಾಶಿ
ಇಂದು ಬೆಳಗಿನ ಸಮಯದಲ್ಲಿ ಮನಸ್ಸು ಶಾಂತವಾಗಿ, ಪ್ರಫುಲ್ಲತೆಯಿಂದ ಇರುತ್ತದೆ. ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ಸಂತೋಷದಿಂದ ಸಮಯ ಕಳೆಯಲಿದ್ದೀರಿ. ಮಧ್ಯಾಹ್ನದ ನಂತರ ಮಾನಸಿಕ ಮತ್ತು ಶಾರೀರಿಕ ಆರೋಗ್ಯ ಹದಗೆಡಬಹುದು.
ಧನು ರಾಶಿ
ಇವತ್ತಿನ ದಿನ ನಿಮ್ಮ ಪಾಲಿಗೆ ಸಂತೋಷ ಮತ್ತು ಉತ್ಸಾಹಪೂರ್ಣವಾಗಿರಲಿದೆ. ನಿಮ್ಮ ಕೆಲಸ ಕೂಡ ಯೋಜನೆಗೆ ತಕ್ಕಂತೆ ನಡೆಯಲಿದೆ. ಅಪೂರ್ಣ ಕೆಲಸವನ್ನೂ ಪೂರ್ಣಗೊಳಿಸಲಿದ್ದೀರಿ. ಧನಲಾಭದ ಯೋಗವೂ ಇದೆ.
ಮಕರ ರಾಶಿ
ನಿರೀಕ್ಷೆಗೆ ತಕ್ಕ ಪ್ರತಿಫಲ ಸಿಗುತ್ತದೆ. ಆದ್ರೂ ಕೆಲಸದ ಕಡೆಗೆ ನಿಮ್ಮ ನಿಷ್ಠೆ ಕಡಿಮೆಯಾಗುವುದಿಲ್ಲ. ಇತರರೊಂದಿಗೆ ಬಾಂಧವ್ಯ ಇನ್ನಷ್ಟು ಉತ್ತಮವಾಗಲಿದೆ. ಆರೋಗ್ಯವೂ ಸುಧಾರಿಸಲಿದೆ.
ಕುಂಭ ರಾಶಿ
ವಿದ್ಯಾರ್ಥಿಗಳು, ಕಲಾವಿದರು ಮತ್ತು ಕ್ರೀಡಾಪಟುಗಳಿಗೆ ಇವತ್ತು ಶುಭ ದಿನ. ತಂದೆ ಮತ್ತು ಸರ್ಕಾರದಿಂದ ಲಾಭವಾಗಲಿದೆ. ಆತ್ಮವಿಶ್ವಾಸದ ಮೇಲೆ ಸಂಪೂರ್ಣ ನಂಬಿಕೆ ಇಟ್ಟು ಮುನ್ನಡೆಯಿರಿ.
ಮೀನ ರಾಶಿ
ಇವತ್ತು ಕಾಲ್ಪನಿಕ ಲೋಕದಲ್ಲಿ ದಿನ ಕಳೆಯುತ್ತೀರಿ. ಸೃಜನಾತ್ಮಕ ಶಕ್ತಿಗೂ ಸೂಕ್ತ ದಿಸೆ ದೊರೆಯಲಿದೆ. ಸ್ನೇಹಿತರು ಮತ್ತು ಮಿತ್ರರ ಜೊತೆಗೆ ಭೋಜನ ಮಾಡುವ ಸಾಧ್ಯತೆ ಇದೆ.