alex Certify ಈ ರಾಶಿಯಲ್ಲಿ ಜನಿಸಿದ ವಿದ್ಯಾರ್ಥಿಗಳಿಗೆ ಕಾದಿದೆ ಶುಭ ಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯಲ್ಲಿ ಜನಿಸಿದ ವಿದ್ಯಾರ್ಥಿಗಳಿಗೆ ಕಾದಿದೆ ಶುಭ ಸುದ್ದಿ

ಮೇಷ : ಆಸ್ತಿ ವಿಚಾರದಲ್ಲಿ ದಾಯಾದಿ ಕಲಹ ಏರ್ಪಡಲಿದೆ. ಸೊಸೆಯು ರಂಪಾಟವನ್ನೇ ಮಾಡುವ ಸಾಧ್ಯತೆ ಇದೆ. ಸಂಗಾತಿಯು ಚಿಕ್ಕ ಚಿಕ್ಕ ವಿಷಯಕ್ಕೆ ನಿಮ್ಮ ಮೇಲೆ ಮುನಿಸಿಕೊಳ್ಳಲಿದ್ದಾರೆ.

ವಿದ್ಯಾರ್ಥಿಗಳು ಎಚ್ಚರಿಕೆಯಿಂದ ಇರಬೇಕು.

ವೃಷಭ : ಯಾವುದೇ ಸಂದರ್ಭದಲ್ಲಿಯೂ ಕೋಪದ ಕೈಗೆ ಬುದ್ಧಿ ನೀಡಬೇಡಿ. ಇದರಿಂದ ನಿಮಗೆ ಸಮಸ್ಯೆ ಆಗಲಿದೆ. ಆರ್ಥಿಕ ಸಂಕಷ್ಟಕ್ಕೆ ಸಹೋದರರು ನೆರವಾಗಲಿದ್ದಾರೆ. ತಂದೆಯ ಮನೆಯವರು ನಿಮಗೆ ಆಸ್ತಿ ವಿಚಾರದಲ್ಲಿ ಕಾಟ ನೀಡಲಿದ್ದಾರೆ.

ಮಿಥುನ : ಕ್ಷುಲ್ಲಕ ಕಾರಣಕ್ಕೆ ದಂಪತಿಯ ನಡುವೆ ವಾಗ್ವಾದ ಉಂಟಾಗಲಿದೆ. ಇದು ನಿಮ್ಮ ಇಡೀ ದಿನದ ನೆಮ್ಮದಿಯನ್ನು ಹಾಳು ಮಾಡಲಿದೆ. ಮಕ್ಕಳು ನಿಮ್ಮ ತಾಳ್ಮೆ ಪರೀಕ್ಷೆ ಮಾಡಲಿದ್ದಾರೆ. ಯಾವುದೇ ಕೆಲಸ ಮಾಡುವ ಮುನ್ನ ಆತಂಕ ಬೇಡ.

ಕಟಕ : ಹಣಕಾಸು ವಿಚಾರದಲ್ಲಿ ಸ್ನೇಹಿತರ ನಡುವೆ ಕಲಹ ಉಂಟಾಗಲಿದೆ. ಮಕ್ಕಳ ನಡುವೆ ಪಕ್ಷಪಾತ ಮಾಡಿ ಮಕ್ಕಳ ಎದುರು ನಿಮ್ಮ ಗೌರವ ಕಳೆದುಕೊಳ್ಳಲಿದ್ದೀರಿ. ಹೆಣ್ಣು ಮಕ್ಕಳಿಗೆ ಈ ದಿನ ಯೋಗ್ಯವಾಗಿಲ್ಲ. ಆದಷ್ಟು ಎಚ್ಚರಿಕೆಯಿಂದಿರಿ.

ಸಿಂಹ : ಕುಟುಂಬದಲ್ಲಿ ಇಂದು ನೆಮ್ಮದಿ ಇರಲಿದೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತೆ ಖರ್ಚಿನ ವಿಚಾರದಲ್ಲಿ ಜಾಗ್ರತೆ ಇರಲಿ. ಸ್ತ್ರೀಯರಿಗೆ ಇಂದು ಧನಲಾಭವಿದೆ. ಅತಿಯಾದ ಕೆಲಸದಿಂದ ಆಯಾಸಗೊಳ್ಳಲಿದ್ದೀರಿ.

ಕನ್ಯಾ : ಕಚೇರಿಯಲ್ಲಿ ಇಂದು ಭಯದ ವಾತಾವರಣ ಇರಲಿದೆ. ಮೇಲಾಧಿಕಾರಿಗಳು ನಿಮ್ಮನ್ನು ತರಾಟೆಗೆ ತೆಗೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಅಂದುಕೊಂಡ ಕಾರ್ಯದಲ್ಲಿ ಜಯ ಸಿಗಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ಮುನ್ನಡೆ ಇರಲಿದೆ.

ತುಲಾ : ಮನೆಯ ಮಗಳಿಗೆ ಇಂದು ವೈವಾಹಿಕ ಸಂಬಂಧ ಕೂಡಿ ಬರಲಿದೆ. ವ್ಯಾಪಾರ – ವ್ಯವಹಾರದಲ್ಲಿ ಹಿನ್ನಡೆ ಉಂಟಾಗಲಿದೆ. ಆಂಜನೇಯನನ್ನು ಪ್ರಾರ್ಥನೆ ಮಾಡಿ. ಹಣ್ಣು – ಹಂಪಲುಗಳನ್ನು ಅನಾಥರಿಗೆ ದಾನ ಮಾಡಿ. ಸಂಗಾತಿಯ ಆರೋಗ್ಯ ಕೆಡಲಿದೆ.

ವೃಶ್ಚಿಕ : ವ್ಯಾಪಾರ – ವ್ಯವಹಾರದಲ್ಲಿ ನಿರೀಕ್ಷೆಗೂ ಮೀರಿದ ಲಾಭವನ್ನು ಗಳಿಸಲಿದ್ದೀರಿ. ಸ್ತ್ರೀಯರಿಗೆ ಬಲ ಇರಲಿದೆ. ಅಗ್ನಿಯಿಂದ ಎಚ್ಚರಿಕೆ ವಹಿಸಿ. ಕಚೇರಿ ಕೆಲಸದ ನಿಮಿತ್ತ ವಿದೇಶಿ ಪ್ರಯಾಣ ಮಾಡುವ ಸಂದರ್ಭ ಎದುರಾಗಬಹುದು.

ಧನು : ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ನಿಮಗೆ ಸಂಗಾತಿಯೇ ಹೆಗಲಾಗಲಿದ್ದಾರೆ. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಜವಳಿ ಉದ್ಯಮಿಗಳಿಗೆ ಇಂದು ಲಾಭವಿದೆ. ಕಲಾವಿದರಿಗೆ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿದೆ.

ಮಕರ : ವ್ಯಾಪಾರಿಗಳಿಗೆ ಈ ದಿನ ಶುಭಕರವಾಗಿ ಇರಲಿದೆ. ಪತಿಯ ಮನೆಯ ದೂರನ್ನು ಎಲ್ಲಾ ಕಡೆ ಹೇಳಬೇಡಿ. ಇದರಿಂದ ನಿಮ್ಮ ಹೆಸರೇ ಹಾಳಾಗಲಿದೆ. ವಿದ್ಯಾರ್ಥಿಗಳಿಗೆ ಈ ದಿನ ಅನುಕೂಲಕರವಾಗಿ ಇರಲಿದೆ. ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ.

ಕುಂಭ : ನಿಮ್ಮ ಹೊಸ ಉದ್ಯಮಕ್ಕೆ ಹಿರಿಯರಿಂದ ಮಾರ್ಗದರ್ಶನ ಸಿಗಲಿದೆ. ಕುಲದೇವತೆಯ ದರ್ಶನ ಮಾಡಲು ಕುಟುಂಬಸ್ಥರ ಜೊತೆ ತೆರಳಲಿದ್ದೀರಿ. ಬಹಳ ದಿನಗಳ ಬಳಿಕ ಬಾಲ್ಯದ ಸ್ನೇಹಿತರನ್ನು ಭೇಟಿ ಮಾಡುವಿರಿ. ತಾಯಿಯು ನಿಮ್ಮ ಮನಸ್ಸಿಗೆ ನೋವುಂಟು ಮಾಡಬಹುದು.

ಮೀನ : ಇಂದು ನಿಮಗೆ ಮನೋವ್ಯಥೆ ಕಾಡುವ ಸಾಧ್ಯತೆ ಇದೆ. ಅತಿಯಾದ ಓಡಾಟದಿಂದ ಆಯಾಸಗೊಳ್ಳಲಿದ್ದೀರಿ. ಆದಷ್ಟು ವಿಶ್ರಾಂತಿ ಪಡೆಯಲು ಯತ್ನಿಸಿ. ಎಲೆಕ್ಟ್ರಾನಿಕ್​ ಉದ್ಯಮಿಗಳಗೆ ಲಾಭ ಕಾದಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...