alex Certify ಈ ರಾಶಿಯಲ್ಲಿ ಜನಿಸಿದವರನ್ನು ಹುಡುಕಿಕೊಂಡು ಬರಲಿದೆ ಉದ್ಯೋಗಾವಕಾಶ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯಲ್ಲಿ ಜನಿಸಿದವರನ್ನು ಹುಡುಕಿಕೊಂಡು ಬರಲಿದೆ ಉದ್ಯೋಗಾವಕಾಶ….!

ಮೇಷ : ನಿಮ್ಮ ಮನಸ್ಸು ಆಧ್ಯಾತ್ಮದತ್ತ ಹೆಚ್ಚು ವಾಲಲಿದೆ. ವೃತ್ತಿ ಜೀವನಕ್ಕಿಂತ ವೈಯಕ್ತಿಕ ಜೀವನವು ಹೆಚ್ಚು ನೆಮ್ಮದಿ ಎನಿಸಲಿದೆ. ಸಂಗಾತಿಯು ನಿಮ್ಮೆಲ್ಲ ಪ್ರಯತ್ನಗಳಿಗೆ ಹೆಗಲಾಗಲಿದ್ದಾರೆ. ಮಕ್ಕಳು ಓದಿನಲ್ಲಿ ಪ್ರಗತಿ ಕಾಣುವರು.

ವೃಷಭ : ಇಂದು ನೀವು ವಿವಿಧ ಮೂಲಗಳಿಂದ ಹಣವನ್ನು ಗಳಿಸಲಿದ್ದೀರಿ. ನಿಮ್ಮಿಂದ ಸಾಲ ಪಡೆದವರು ಇಂದು ತಾವಾಗಿಯೇ ಬಂದು ಸಾಲವನ್ನು ತೀರಿಸಲಿದ್ದಾರೆ. ಕಿರಿಯ ಸೋದರನು ನಿಮ್ಮ ಮೇಲೆ ಮುನಿಸಿಕೊಳ್ಳುವ ಸಾಧ್ಯತೆ ಇದೆ. ಕೃಷಿಕರಿಗೆ ಈ ದಿನ ಹೆಚ್ಚು ಶುಭಕರವಲ್ಲ.

ಮಿಥುನ: ಮಹಿಳೆಯರು ಚಂಚಲ ಬುದ್ಧಿಯನ್ನು ಹತೋಟಿಗೆ ತಂದುಕೊಳ್ಳಲೇಬೇಕು. ಇಲ್ಲವಾದಲ್ಲಿ ದೊಡ್ಡ ಸಮಸ್ಯೆಯ ಸುಳಿಗೆ ಸಿಲುಕುವ ಸಾಧ್ಯತೆ ಇದೆ. ಯಾರೋ ಮಾಡುತ್ತಾರೆ ಎಂದು ನೀವು ಮಾಡಲು ಹೋಗಿ ಕೈಲಿದ್ದ ಹಣವನ್ನು ಖಾಲಿ ಮಾಡಕೊಳ್ಳಬೇಡಿ.

ಕಟಕ: ನಿಮ್ಮ ಸಂಗಾತಿಯು ವೃತ್ತಿ ಜೀವನದಲ್ಲಿ ಬಹುದೊಡ್ಡ ಸಾಧನೆಯನ್ನು ಮಾಡಲಿದ್ದಾರೆ. ಇದು ನಿಮ್ಮ ಸಂತೋಷವನ್ನು ಮುಗಿಲೆತ್ತರಕ್ಕೆ ಏರಿಸಲಿದೆ. ವ್ಯಾಪಾರಸ್ಥರಿಗೆ ಸ್ನೇಹಿತರಿಂದಲೇ ಲಾಭವಿದೆ.

ಸಿಂಹ : ವಿದೇಶಗಳಲ್ಲಿ ನಿಮ್ಮ ವ್ಯವಹಾರವು ಉತ್ತಮ ಯಶಸ್ಸನ್ನು ಕಾಣಲಿದೆ. ಪೋಷಕರು ನಿಮ್ಮ ಯಶಸ್ಸಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಲಿದ್ದಾರೆ. ಆಸ್ತಿ ವಿಚಾರವಾಗಿ ಸಹೋದರರ ಜೊತೆ ಮೂಡಿದ್ದ ವೈಮನಸ್ಯವು ವಾಸಿಯಾಗಲಿದೆ. ಮನೆಯಲ್ಲಿ ಶುಭಕಾರ್ಯದ ಮುನ್ಸೂಚನೆ ಸಿಗಲಿದೆ.

ಕನ್ಯಾ : ವೃತ್ತಿ ಜೀವನದಲ್ಲಿ ನೀವಿಂದು ಯಶಸ್ಸನ್ನು ಗಳಿಸಲಿದ್ದೀರಿ. ನಿಮ್ಮ ಕಾರ್ಯವನ್ನು ಮೇಲಾಧಿಕಾರಿಗಳಿಗೆ ಮೆಚ್ಚುಗೆಯಾಗೋದ್ರಿಂದ ಹೆಚ್ಚಿನ ಜವಾಬ್ದಾರಿಗಳನ್ನು ನಿಮಗೆ ವಹಿಸುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚಲಿದೆ.

ತುಲಾ : ಗುತ್ತಿಗೆ ಕೆಲಸ ಮಾಡುವವರು ಇಂದು ಹೆಚ್ಚಿನ ಬೇಡಿಕೆಯನ್ನು ಪಡೆಯಲಿದ್ದಾರೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಮಕ್ಕಳಿಗೆ ಓದಿನ ಕಡೆಗೆ ಮನಸ್ಸು ಹೋಗದೇ ಇರಬಹುದು. ಪೋಷಕರು ಈ ಸಮಯಲ್ಲಿ ಎಚ್ಚರಿಕೆಯಿಂದ ಇರಬೇಕು.

ವೃಶ್ಚಿಕ: ಉದ್ಯಮಿಗಳಿಗೆ ಇಂದು ಅನಿರೀಕ್ಷಿತ ಲಾಭ ಕಾದಿದೆ. ಸಂಗಾತಿಯು ಸ್ವಂತ ಉದ್ಯಮ ಆರಂಭಿಸುವ ಬಗ್ಗೆ ನಿಮ್ಮೊಡನೆ ಚರ್ಚಿಸಲಿದ್ದಾರೆ. ವೈವಾಹಿಕ ಸಂಬಂಧಕ್ಕೆ ಅನೇಕ ವರ್ಷಗಳಿಂದ ಹುಡುಕಾಡುತ್ತಿರುವವರಿಗೆ ಇಂದು ಕಂಕಣ ಭಾಗ್ಯ ಕೂಡಿ ಬರಲಿದೆ.

ಧನು : ತಂದೆಯೊಂದಿಗೆ ನಿಮ್ಮ ಸಂಬಂಧವು ಸುಧಾರಿಸಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ತೋರಲಿದ್ದೀರಿ. ಅತ್ತೆ ಮಾವನೊಂದಿಗೆ ಮಾತನಾಡುವ ಮುನ್ನ ಎಚ್ಚರಿಕೆ ಇರಲಿ. ಎಂದಿಗೂ ನಾಲಗೆ ಹರಿಬಿಡಬೇಡಿ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ.

ಮಕರ : ಕೆಲಸಕ್ಕೆಂದು ಕಚೇರಿ ಅಲೆದಾಟ ಮಾಡಿ ಸುಸ್ತಾದ ನಿಮಗೆ ಹೊಸ ಉದ್ಯೋಗಾವಕಾಶವೊಂದು ನಿಮ್ಮನ್ನೇ ಹುಡುಕಿಕೊಂಡು ಮನೆಬಾಗಿಲಿಗೆ ಬರಲಿದೆ. ಯಾವುದೇ ಕಾರಣಕ್ಕೂ ಇದನ್ನು ತಿರಸ್ಕರಿಸಬೇಡಿ. ಮನೆಯಲ್ಲಿ ಚಿನ್ನಾಭರಣ ಖರೀದಿ ಮಾಡಲಿದ್ದೀರಿ.

ಕುಂಭ : ಆಘಾತಕಾರಿ ಸುದ್ದಿಯೊಂದು ನಿಮ್ಮ ಕುಟುಂಬಕ್ಕೆ ಬರಸಿಡಿಲಿನಂತೆ ಬಂದೆರಗಲಿದೆ. ಇದರಿಂದ ನೀವು ಅತಿಯಾದ ನೋವನ್ನು ಅನುಭವಿಸಲಿದ್ದೀರಿ. ವೈದ್ಯಕೀಯ ರಂಗದಲ್ಲಿ ಇರುವವರಿಗೆ ಒತ್ತಡ ಹೆಚ್ಚಲಿದೆ. ಧಾರ್ಮಿಕ ಕಾರ್ಯಗಳತ್ತ ಮನಸ್ಸು ಮಾಡಲಿದ್ದೀರಿ.

ಮೀನ : ಹೊಸ ಮನೆ ನಿರ್ಮಾಣದ ಬಗ್ಗೆ ಪೋಷಕರ ಮುಂದೆ ಪ್ರಸ್ತಾವನೆಯನ್ನು ಇಡಲಿದ್ದೀರಿ. ಧಾರ್ಮಿಕ ಕಾರ್ಯಗಳಿಗೆ ಪೋಷಕರು ಮಾರ್ಗದರ್ಶನ ನೀಡಲಿದ್ದಾರೆ. ಕಚೇರಿ ಕೆಲಸದ ನಿಮಿತ್ತ ಇಂದು ಅತಿಯಾಗಿ ಪ್ರಯಾಣ ಮಾಡಬೇಕಾಗಿ ಬರಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...