ವ್ಯಾಪಾರ ವಹಿವಾಟು ಎಂದಿಗೂ ಸುಲಭವಲ್ಲ, ಇದಕ್ಕೆ ಸಾಕಷ್ಟು ಶ್ರಮ ಬೇಕಾಗುತ್ತದೆ. ಆದರೆ ನೀವು ತಿಂಗಳಿಗೆ 60,000 ರಿಂದ 70,000 ರೂಪಾಯಿಗಳವರೆಗೆ ಆರಾಮಾಗಿ ಗಳಿಸುವ ಸ್ಕೀಮ್ ಬಗ್ಗೆ ತಿಳಿದುಕೊಂಡಿದ್ದೀರಾ ? ಇದರಲ್ಲಿ ಯಾವುದೇ ಪರಿಶ್ರಮವಿಲ್ಲ, ಒಮ್ಮೆಲೇ ಸುಮಾರು 5 ಲಕ್ಷ ರೂಪಾಯಿಗಳ ಮರುಪಾವತಿಸಬಹುದಾದ ಹೂಡಿಕೆ ಮಾಡಿದ್ರೆ ಸಾಕು. ಇದು SBI ATM ಫ್ರಾಂಚೈಸ್ ಯೋಜನೆ.
SBI ಎಟಿಎಂ ಗಳನ್ನೆಲ್ಲ ಬ್ಯಾಂಕ್ ಸ್ಥಾಪಿಸಿರಬಹುದು ಎಂದುಕೊಂಡಿದ್ದರೆ ನಿಮ್ಮ ಲೆಕ್ಕಾಚಾರ ತಪ್ಪು. ಎಟಿಎಂಗಳನ್ನು ಸ್ಥಾಪಿಸುವ ಕಂಪನಿಗಳು ಈ ಬ್ಯಾಂಕ್ ಗಳಿಂದ ಗುತ್ತಿಗೆದಾರರಾಗಿದ್ದಾರೆ. ನಂತರ ಅವರು ವಿವಿಧ ಸ್ಥಳಗಳಲ್ಲಿ ಎಟಿಎಂಗಳನ್ನು ಸ್ಥಾಪಿಸುತ್ತಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಭಾರತದಲ್ಲಿ ಎಟಿಎಂ ಸ್ಥಾಪಿಸುವ ಒಪ್ಪಂದವು ಟಾಟಾ ಇಂಡಿಕ್ಯಾಶ್, ಮುತ್ತೂಟ್ ಎಟಿಎಂ ಮತ್ತು ಇಂಡಿಯಾ ಒನ್ ಎಟಿಎಂಗಳೊಂದಿಗಿದೆ. ನೀವು SBI ನ ATM ಫ್ರ್ಯಾಂಚೈಸ್ ಅನ್ನು ತೆಗೆದುಕೊಳ್ಳಲು ಬಯಸಿದರೆ, ಈ ಕಂಪನಿಗಳಿಗೆ ಅವರ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಎಟಿಎಂ ಫ್ರಾಂಚೈಸ್ ಹೆಸರಿನಲ್ಲಿ ಜನರನ್ನು ವಂಚಿಸುವ ಜಾಲವೂ ಇರುವುದರಿಂದ ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಹುಷಾರಾಗಿ ಅರ್ಜಿ ಸಲ್ಲಿಸಿ.
SBI ATM ಫ್ರ್ಯಾಂಚೈಸ್ ತೆಗೆದುಕೊಳ್ಳಲು ಷರತ್ತುಗಳು
ಎಟಿಎಂ ಕ್ಯಾಬಿನ್ ಅನ್ನು ಹೊಂದಿಸಲು ನೀವು ಕನಿಷ್ಟ 50-80 ಚದರ ಅಡಿ ಜಾಗವನ್ನು ಹೊಂದಿರಬೇಕು. ಇತರ ಎಟಿಎಂಗಳಿಂದ ಅದರ ಅಂತರ ಕನಿಷ್ಠ 100 ಮೀಟರ್ ಆಗಿರಬೇಕು. ಸ್ಥಳವು ಜನರಿಗೆ ಸುಲಭವಾಗಿ ಗೋಚರಿಸುವಂತೆ ಇರಬೇಕು. 24 ಗಂಟೆ ವಿದ್ಯುತ್ ಪೂರೈಕೆಯಾಗಬೇಕು ಮತ್ತು ಕನಿಷ್ಠ 1kW ವಿದ್ಯುತ್ ಸಂಪರ್ಕವೂ ಕಡ್ಡಾಯವಾಗಿದೆ. ಕ್ಯಾಬಿನ್, ಇಟ್ಟಿಗೆ ಗೋಡೆಗಳು ಮತ್ತು ಕಾಂಕ್ರೀಟ್ ಛಾವಣಿಯೊಂದಿಗೆ ಶಾಶ್ವತ ರಚನೆಯಾಗಿರಬೇಕು. ನೀವು ಸೊಸೈಟಿಯಲ್ಲಿದ್ದರೆ V-SAT ಅನ್ನು ಸ್ಥಾಪಿಸಲು ಸೊಸೈಟಿ ಅಥವಾ ಪ್ರಾಧಿಕಾರದಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಎಸ್.ಬಿ.ಐ. ಎಟಿಎಂ ಫ್ರಾಂಚೈಸ್‌ಗೆ ಅಗತ್ಯವಿರುವ ದಾಖಲೆಗಳು
* ID ಪುರಾವೆ – ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮತದಾರರ ಕಾರ್ಡ್
* ವಿಳಾಸ ಪುರಾವೆ – ಪಡಿತರ ಚೀಟಿ, ವಿದ್ಯುತ್ ಬಿಲ್
* ಬ್ಯಾಂಕ್ ಖಾತೆ ಮತ್ತು ಪಾಸ್‌ಬುಕ್
* ಭಾವಚಿತ್ರ, ಇ-ಮೇಲ್ ಐಡಿ, ದೂರವಾಣಿ ಸಂಖ್ಯೆ.
* ಕಂಪನಿಗೆ ಅಗತ್ಯವಿರುವ ಇತರ ದಾಖಲೆಗಳು/ಫಾರ್ಮ್‌ಗಳು
* ಜಿಎಸ್‌ಟಿ ಸಂಖ್ಯೆ
* ಕಂಪನಿಗೆ ಅಗತ್ಯವಿರುವ ಹಣಕಾಸಿನ ದಾಖಲೆಗಳು
SBI ATM ಫ್ರಾಂಚೈಸಿಯಿಂದ ಗಳಿಕೆ
ನೀವು ಎಸ್.ಬಿ.ಐ. ಎಟಿಎಂ ಫ್ರಾಂಚೈಸ್‌ಗೆ ಅರ್ಜಿ ಸಲ್ಲಿಸಿದಾಗ ಮತ್ತು ಅನುಮೋದನೆ ಪಡೆದಾಗ 2 ಲಕ್ಷ ರೂಪಾಯಿಯನ್ನು ಭದ್ರತಾ ಠೇವಣಿಯಾಗಿ ಮತ್ತು 3 ಲಕ್ಷ ರೂಪಾಯಿಯನ್ನು ಬಂಡವಾಳವಾಗಿ ಪಾವತಿಸಬೇಕಾಗುತ್ತದೆ. ಒಟ್ಟು ಹೂಡಿಕೆ 5 ಲಕ್ಷ ರೂಪಾಯಿಗಳು ಮತ್ತು ಮೊತ್ತವು ಕಂಪನಿಯಿಂದ ಕಂಪನಿಗೆ ಭಿನ್ನವಾಗಿರಬಹುದು. ATM ಅನ್ನು ಸ್ಥಾಪಿಸಿದಾಗ ಮತ್ತು ಜನರು ಯಂತ್ರದಿಂದ ವಹಿವಾಟುಗಳನ್ನು ಮಾಡಲು ಪ್ರಾರಂಭಿಸಿದಾಗ, ನೀವು ಪ್ರತಿ ನಗದು ವಹಿವಾಟಿಗೆ 8 ರೂಪಾಯಿ, ಬ್ಯಾಲೆನ್ಸ್ ಚೆಕ್ ಮತ್ತು ಫಂಡ್ ವರ್ಗಾವಣೆಯಂತಹ ನಗದುರಹಿತ ವಹಿವಾಟಿಗೆ 2 ರೂಪಾಯಿ ಪಡೆಯುತ್ತೀರಿ.