ಬಿರಿಯಾನಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಾಂಸಹಾರಿಗಳಿಗಂತೂ ಬಿರಿಯಾನಿ ಎಂದರೆ ತುಂಬಾ ಇಷ್ಟ. ಹೊಟೇಲ್ ಫುಡ್ ಇಷ್ಟಪಡದವರು ಮನೆಯಲ್ಲಿಯೇ ಬಿರಿಯಾನಿ ಮಾಡುತ್ತಾರೆ. ಅಂತವರಿಗೆ ಸುಲಭವಾಗಿ ಮನೆಯಲ್ಲಿರುವ ಮಸಾಲಾ ವಸ್ತುಗಳನ್ನು ಉಪಯೋಗಿಸಿ ರುಚಿಕರವಾದ ಬಿರಿಯಾನಿ ಮಸಾಲಾ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿದೆ ಒಂದಷ್ಟು ಮಾಹಿತಿ.
ಬೇಕಾಗುವ ಸಾಮಾಗ್ರಿ: ಚಕ್ಕೆ-4 ಪೀಸ್, ಸೋಂಪು ಕಾಳು-2 ಟೀ ಸ್ಪೂನ್, ಜೀರಿಗೆ-1 ಟೀ ಸ್ಪೂನ್, ಪಲಾವ್ ಎಲೆ-2, ಹಸಿರು ಏಲಕ್ಕಿ-5, ಲವಂಗ-5, ಕಪ್ಪು ಏಲಕ್ಕಿ-1, ಜಾಯಿಪತ್ರೆ-2, ಬ್ಲ್ಯಾಕ್ ಸ್ಟೂನ್ ಫ್ಲವರ್-4, ಕೊತ್ತಂಬರಿ ಕಾಳು-3 ಟೇಬಲ್ ಚಮಚ, ಒಣ ಮೆಣಸು -4, ಕಾಳು ಮೆಣಸು-1 ಟೀ ಸ್ಪೂನ್.
ಹೊಂಡದಲ್ಲಿ ಸಿಲುಕಿದ್ದ ಹಸುವಿನ ರಕ್ಷಣಾ ಕಾರ್ಯಾಚರಣೆಗೆ ಪಂಜಾಬ್ ಸಿಎಂ ಸಹಾಯ ಹಸ್ತ: ವಿಡಿಯೋ ವೈರಲ್
ಮಾಡುವ ವಿಧಾನ: ಒಂದು ಬಾಣಲೆ ತೆಗೆದುಕೊಂಡು ಗ್ಯಾಸ್ ಮೇಲೆ ಇಡಿ. ನಂತರ ಕಡಿಮೆ ಉರಿಯಲ್ಲಿ ಎಲ್ಲಾ ಸಾಮಾಗ್ರಿಯನ್ನು 5 ನಿಮಿಗಳ ಹುರಿಯಿರಿ. ನಂತರ ಇದನ್ನು ಒಂದು ಪ್ಲೇಟ್ ಗೆ ಹಾಕಿ ತಣ್ಣಗಾಗಲು ಬಿಡಿ. ಒಣ ಮೆಣಸು ಹಾಗೂ ಕೊತ್ತಂಬರಿ ಕಾಳಿನ ಬದಲು ಇವೆರಡರ ಪುಡಿಯನ್ನು ಉಪಯೋಗಿಸಬಹುದು. ಆದರೆ ಇದನ್ನು ಸ್ವಲ್ಪ ಹುರಿದುಕೊಳ್ಳಬೇಕಾಗುತ್ತದೆ.
30 ಸೆಕೆಂಡುಗಳ ಕಾಲ ಇವೆರೆಡನ್ನು ಬೇರೆ ಬೇರೆಯಾಗಿ ಹುರಿದುಕೊಂಡರೆ ಸಾಕು. ನಂತರ ತಣ್ಣಗಾದ ಮಸಾಲ ಸಾಮಾಗ್ರಿಗಳನ್ನೆಲ್ಲಾ ಒಂದು ಮಿಕ್ಸಿಯಲ್ಲಿ ಹಾಕಿ ನಯವಾದ ಪುಡಿ ಮಾಡಿಕೊಳ್ಳಿ. ನಂತರ ಒಂದು ಗಾಳಿಯಾಡದ ಡಬ್ಬದಲ್ಲಿ ಇದನ್ನು ತುಂಬಿಸಿ ಇಟ್ಟುಕೊಳ್ಳಿ. ಬಿರಿಯಾನಿ ಮಾಡಬೇಕೆನಿಸಿದಾಗಲೆಲ್ಲಾ ಈ ಮಸಾಲೆಯನ್ನು ಸೇರಿಸಿ ಬಿರಿಯಾನಿ ಮಾಡಿ. ರುಚಿಕರವಾಗಿರುತ್ತದೆ.