ಮಸಾಜ್ ದಣಿದ ದೇಹಕ್ಕೆ ಹಾಗೂ ಮನಸ್ಸಿಗೆ ಆರಾಮ ನೀಡುತ್ತದೆ. ಕಾಲಿಗೆ, ಕೈಗೆ, ಕಣ್ಣಿಗೆ ಹೀಗೆ ಬೇರೆ ಬೇರೆ ಭಾಗಕ್ಕೆ ಭೇರೆ ಬೇರೆ ಮಸಾಜ್ ಗಳಿವೆ. ಈಗಂತೂ ಹೊಸ ಹೊಸ ವಿಧಾನದಲ್ಲಿ ಮಸಾಜ್ ಮಾಡಲಾಗುತ್ತದೆ.
ನೀವು ಬೇರೆ ಬೇರೆ ಮಸಾಜ್ ಗಳ ಬಗ್ಗೆ ಕೇಳಿರ್ತಿರಾ. ಹಾಗೆ ಕೆಲವೊಂದು ಮಸಾಜ್ ಮಾಡಿಸಿಕೊಂಡಿರುತ್ತೀರಾ. ಆದ್ರೆ ಈಗ ನಾವು ಹೇಳುವ ಮಸ್ಸಾಜ್ ಬಗ್ಗೆ ನೀವು ಕೇಳಿರಲಿಕ್ಕಿಲ್ಲ. ವಿಲಕ್ಷಣವಾಗಿರುವ ಈ ಮಸಾಜ್ ಹಲ್ಲಿನಿಂದ ಮಾಡುವಂತಹದ್ದು.
ಹಲ್ಲಿನಿಂದ ದೇಹದ ಹಿಂಭಾಗವನ್ನು ಕಚ್ಚಿ ಮಸಾಜ್ ಮಾಡ್ತಾರೆ. ಹೀಗೆ ಕಚ್ಚಿಸಿಕೊಳ್ಳುವುದರಿಂದ ಆರಾಮ ಸಿಗುತ್ತದೆಯಂತೆ.