
ಟ್ವಿಟರ್‌ನಲ್ಲಿ ಮರದ ಚಿತ್ರವನ್ನು ಹಂಚಿಕೊಂಡಿರುವ ಅವರು ಇದರಲ್ಲಿ ಏನು ಅಡಗಿದೆ ಎಂಬುದನ್ನು ಗುರುತಿಸಬಲ್ಲಿರಾ ಎಂದು ಪ್ರಶ್ನೆ ಕೇಳಿದ್ದಾರೆ.
ಅಧಿಕಾರಿ ಬಾಲಮುರುಗನ್ ಅವರ ಪ್ರಕಾರ ಚಿತ್ರವನ್ನು ಇಂದಿರಾಗಾಂಧಿ ರಾಷ್ಟ್ರೀಯ ಅಕಾಡೆಮಿಯಲ್ಲಿ (IGNFA) ತೆಗೆಯಲಾಗಿದೆ.
ನೋಡಿದಾಕ್ಷಣ ಚಿತ್ರದಲ್ಲಿ ಮರದ ಕಾಂಡ ಮತ್ತು ಕಟ್ಟಡವನ್ನು ಹೊರತುಪಡಿಸಿ ಬೇರೇನೂ ಇಲ್ಲ ಎಂದು ಹಲವರು ಭಾವಿಸಿದ್ದಾರೆ. ಕೆಲವರು ಕ್ಲೂ ಕೊಡಿ ಎಂದು ಕೇಳಿದ ನಂತರ ಅವರು ಚಿತ್ರದಲ್ಲಿ ಪಕ್ಷಿಯಿದೆ ಎಂದಿದ್ದಾರೆ. ಹಾಗಾದರೆ ಆ ಪಕ್ಷಿಯನ್ನು ನೀವು ಗುರ್ತಿಸುವಿರಾ? ಇಲ್ಲಿದೆ ನೋಡಿ ಚಿತ್ರ ಮತ್ತು ಉತ್ತರ.