ಬೆವರು ಆರೋಗ್ಯವಂತ ಮನುಷ್ಯನಿಗೆ ಸಾಮಾನ್ಯ. ಆದ್ರೆ ಈ ಬೆವರು ಕೆಟ್ಟ ವಾಸನೆ ಬರುತ್ತಿದ್ದರೆ ಕಿರಿಕಿರಿಯಾಗುತ್ತೆ. ಕೆಲವೊಮ್ಮೆ ಬಟ್ಟೆ ಮೇಲೆ ಕಲೆ ಬೀಳುತ್ತದೆ. ಅಕ್ಕ-ಪಕ್ಕದಲ್ಲಿರುವವರು ಮೂಗು ಮುಚ್ಚಿಕೊಳ್ಳುವಂತಾಗುತ್ತದೆ. ಹಾಗಾಗಿ ಕೆಟ್ಟ ವಾಸನೆ ಬರುವ ಬೆವರನ್ನು ನಿರ್ಲಕ್ಷ್ಯಿಸುವುದು ಸರಿಯಲ್ಲ. ಡಿಯೋ, ಸೆಂಟ್ ಹಾಕಿದ್ರೂ ವಾಸನೆ ಹೋಗಲ್ಲ ಎನ್ನುವವರು ಮನೆ ಮದ್ದು ಬಳಸಿ.
ಬೆವರಿನ ವಾಸನೆ ಕಡಿಮೆ ಮಾಡಲು ಅಡುಗೆ ಸೋಡಾ ಬೆಸ್ಟ್. ಸ್ನಾನದ ನಂತ್ರ ಸ್ವಲ್ಪ ನೀರಿಗೆ ಅಡುಗೆ ಸೋಡಾ ಹಾಕಿ ಅದನ್ನು ಅಂಡರ್ ಆರ್ಮ್ ಹಾಗೂ ದೇಹದ ಭಾಗಕ್ಕೆ ಹಚ್ಚಿಕೊಳ್ಳಿ. ನಂತ್ರ ಇಡೀ ದೇಹವನ್ನು ಟವೆಲ್ ಸಹಾಯದಿಂದ ಸ್ವಚ್ಛಗೊಳಿಸಿ.
ಬೆವರಿನ ವಾಸನೆ ಕಡಿಮೆ ಮಾಡಲು ಸೌತೆಕಾಯಿಯನ್ನೂ ಬಳಸಬಹುದು. ಸ್ನಾನದ ನಂತ್ರ ಸೌತೆಕಾಯಿ ಹೋಳುಗಳನ್ನು ಅಂಡರ್ ಆರ್ಮ್ ಗೆ ಉಜ್ಜಿಕೊಳ್ಳಿ. ಕೆಟ್ಟ ವಾಸನೆ ಹೊರ ಹಾಕುವ ಬ್ಯಾಕ್ಟೀರಿಯಾ ಉತ್ಪತ್ತಿಯಾಗುವುದನ್ನು ಸೌತೆಕಾಯಿ ತಡೆಯುತ್ತದೆ.
ಆಪಲ್ ವಿನೆಗರ್ ಬಳಸಿ ನಿಮ್ಮ ಸಮಸ್ಯೆಗೆ ಗುಡ್ ಬೈ ಹೇಳಬಹುದು. ಸ್ನಾನಕ್ಕೆ ಅರ್ಧ ಗಂಟೆ ಮೊದಲು ಅಂಡರ್ ಆರ್ಮ್ ಗೆ ಸೇಬು ವಿನೆಗರ್ ಹಚ್ಚಿ. ಸ್ನಾನದ ವೇಳೆ ಸೋಪ್ ಹಚ್ಚಿ ಇದನ್ನು ಸ್ವಚ್ಛಗೊಳಿಸಿಕೊಳ್ಳಿ.
ಬೆವರಿನ ವಾಸನೆ ಕಡಿಮೆ ಮಾಡುವ ಶಕ್ತಿ ನಿಂಬೆ ಹಣ್ಣಿಗಿದೆ. ಜೊತೆಗೆ ಅಂಡರ್ ಆರ್ಮ್ ನ ಕಪ್ಪು ಕಲೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ನೀರಿಗೆ ನಿಂಬೆ ತುಣುಕನ್ನು ಹಾಕಿ ಆ ನೀರಿನಲ್ಲಿ ಸ್ನಾನ ಮಾಡಿ. ಇದ್ರಿಂದ ಎರಡೂ ಸಮಸ್ಯೆಗೆ ಪರಿಹಾರ ಸಿಗಲಿದೆ.