ಹೈ ಹೀಲ್ಡ್ ಚಪ್ಪಲಿಗಳನ್ನು ಹಾಕುವುದರಿಂದ, ಸರಿಯಾಗಿ ಹೊಂದಿಕೊಳ್ಳದ ಬೂಟುಗಳನ್ನು ಧರಿಸುವುದರಿಂದ, ಗಟ್ಟಿಯಾದ ನೆಲದಲ್ಲಿ ನಡೆಯುವುದರಿಂದ ಕೆಲವರಿಗೆ ಹಿಮ್ಮಡಿಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ನೋವನ್ನು ನಿವಾರಿಸಲು ಮನೆಯಲ್ಲಿಯೇ ಈ ರೀತಿ ಚಿಕಿತ್ಸೆ ನೀಡಿ.
ಬೆಚ್ಚಗಿನ ನೀರಿನಲ್ಲಿ 3 ಚಮಚ ಎಪ್ಸಮ್ ಉಪ್ಪನ್ನು ಬೆರೆಸಿ ಅದರಲ್ಲಿ ನಿಮ್ಮ ಪಾದವನ್ನು 15ರಿಂದ 20 ನಿಮಿಷಗಳ ಕಾಲ ನೆನೆಸಿಡಿ.
ಬಳಿಕ ಮೊಯಿಶ್ಚರೈಸರ್ ಕ್ರೀಂ ಹಚ್ಚಿ. ಹೀಗೆ ನೋವು ಸಂಪೂರ್ಣವಾಗಿ ಹೋಗುವವರೆಗೆ ವಾರಕ್ಕೆ 2 ಬಾರಿ ಇದನ್ನು ಮಾಡಿ.
ಇನ್ನು ಐಸ್ ನ್ನು ನೋವಿರುವ ಸ್ಥಳದಲ್ಲಿ 15 ನಿಮಿಷಗಳ ಕಾಲ ಇಡಿ. ದಿನಕ್ಕೆ ಹಲವು ಬಾರಿ ಹೀಗೆ ಮಾಡಿದರೆ ನೋವು ಕಡಿಮೆಯಾಗುತ್ತದೆ