alex Certify ಈ ಮನೆ ಮದ್ದಿನಿಂದ ಶೀತ ಕೆಮ್ಮಿಗೆ ಹೇಳಿ ಗುಡ್ ಬೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮನೆ ಮದ್ದಿನಿಂದ ಶೀತ ಕೆಮ್ಮಿಗೆ ಹೇಳಿ ಗುಡ್ ಬೈ

ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ಈ ಶೀತ, ಕೆಮ್ಮಿನ ಸಮಸ್ಯೆ ಕಾಡುತ್ತಿರುತ್ತದೆ. ಪದೇ ಪದೇ ಕಾಡುವ ಈ ಸಮಸ್ಯೆಗೆ ಮನೆಯಲ್ಲಿರುವ ಈ ವಸ್ತುಗಳನ್ನು ಬಳಸಿ ನಿವಾರಿಸಿಕೊಳ್ಳಬಹುದು.

ಉಗುರು ಬೆಚ್ಚಗಿನ ನೀರನ್ನು ಆಗಾಗ ಕುಡಿಯುವುದರಿಂದ ಕೆಮ್ಮು, ಕಫ ಹಾಗೂ ಗಂಟಲಿನ ಕಿರಿಕಿರಿಯನ್ನು ಕಡಿಮೆ ಮಾಡಿಕೊಳ್ಳಬಹುದು.

ಬಿಸಿ ಹಾಲಿಗೆ ಒಂದು ಚಿಟಿಕೆ ಅರಿಶಿನ ಹಾಕಿ ಕುಡಿಯುವುದರಿಂದ ಕಫದ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಮಲಗುವ ಮೊದಲು ಈ ಹಾಲನ್ನು ಕುಡಿಯುವುದರಿಂದ ಶೀತ, ಕೆಮ್ಮಿನ ತೊಂದರೆಯನ್ನು ನಿವಾರಿಸಿಕೊಳ್ಳಬಹುದು.

ಮಕ್ಕಳಿಗಾದರೆ ಕಾಳು ಮೆಣಸು, ಹಿಪ್ಪಲಿ ಎರಡನ್ನು ತೇದು ಪೇಸ್ಟ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ತಿನ್ನಿಸಿದರೆ ಕಫದ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು.

ಅರ್ಧ ಚಮಚ ಜೇನು ತುಪ್ಪ, 2 ಹನಿ ಲಿಂಬೆ ಹಣ್ಣಿನ ರಸ, ಚಿಟಿಕೆ ಚಕ್ಕೆ ಪುಡಿ ಇವಿಷ್ಟನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಇದನ್ನು ಕುಡಿಯುವುದರಿಂದ ಕೂಡ ಶೀತ, ಕೆಮ್ಮುವಿನ ಸಮಸ್ಯೆಗೆ ಗುಡ್ ಬೈ ಹೇಳಬಹುದು.

ಅರ್ಧ ಚಮಚ ಈರುಳ್ಳಿ ರಸಕ್ಕೆ ಅರ್ಧ ಚಮಚ ಜೇನುತುಪ್ಪ ಸೇರಿಸಿಕೊಂಡು ಈ ಮಿಶ್ರಣವನ್ನು ಕುಡಿಯಿರಿ. ಇದು ಕೂಡ ಕೆಮ್ಮನ್ನು ಶಮನ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...