ಹವಾಮಾನದಲ್ಲಿ ದಿಢೀರ್ ಬದಲಾವಣೆಯಿಂದ ಜ್ವರ, ನೆಗಡಿ ಸಾಮಾನ್ಯ. ಗಂಟಲಲ್ಲಿ ಕಿರಿಕಿರಿ ಶುರುವಾದ್ರೆ ಅದರಿಂದ ಕಿವಿ ನೋವು, ಕಣ್ಣುಗಳಲ್ಲಿ ತುರಿಕೆ, ಉರಿ ಕೂಡ ಕಾಣಿಸಿಕೊಳ್ಳುತ್ತದೆ.
ಇದಕ್ಕೆಲ್ಲಾ ನೀವು ವೈದ್ಯರ ಬಳಿಯೇ ಹೋಗಬೇಕೆಂದೇನಿಲ್ಲ. ಮನೆಯಲ್ಲೇ ಪರಿಣಾಮಕಾರಿ ಮದ್ದನ್ನು ಮಾಡಿಕೊಳ್ಳಬಹುದು. ಅದಕ್ಕೆ ಬೇಕಾದ ವಸ್ತುಗಳೆಲ್ಲ ನಿಮ್ಮ ಅಡುಗೆ ಮನೆಯಲ್ಲೇ ಇರುತ್ತವೆ.
ಜೇನುತುಪ್ಪ, ಶುಂಠಿ ಮತ್ತು ಬೇಸಿಲ್ : ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಅದಕ್ಕೆ ಜಜ್ಜಿದ ಶುಂಠಿ ಮತ್ತು ಬೇಸಿಲ್ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಅದನ್ನು ಸೋಸಿಕೊಂಡು ಅದಕ್ಕೆ 4 ಹನಿ ಜೇನುತುಪ್ಪ ಬೆರೆಸಿಕೊಂಡು ಕುಡಿಯಿರಿ.
ಅರಿಶಿನ ಮತ್ತು ಉಪ್ಪು : ಗಂಟಲು ನೋವು ಮತ್ತು ಜ್ವರಕ್ಕೆ ಬೆಸ್ಟ್ ಮದ್ದು ಗಾರ್ಗ್ಲಿಂಗ್. ಬಿಸಿ ನೀರಿಗೆ ಒಂದು ಚಿಟಿಕೆ ಅರಿಶಿನ, ಅರ್ಧ ಚಮಚ ಉಪ್ಪು ಬೆರೆಸಿಕೊಂಡು ಗಾರ್ಗಲ್ ಮಾಡಿ. ಇದರಿಂದ ನಿಮ್ಮ ಗಂಟಲಿನಲ್ಲಿರುವ ಕೀಟಾಣು ಮತ್ತು ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.
ತಾಜಾ ಹಣ್ಣಿನ ಜ್ಯೂಸ್ : ಜ್ವರ ಮತ್ತು ಗಂಟಲು ನೋವಿದ್ದಾಗ ನಿಮ್ಮ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳುವುದು ಬಹಳ ಮುಖ್ಯ. ಚೆನ್ನಾಗಿ ನೀರು ಕುಡಿಯಿರಿ. ವಿಟಮಿನ್ ಸಿ ಹೇರಳವಾಗಿರುವ ಕಿತ್ತಳೆ ಹಣ್ಣಿನ ಜ್ಯೂಸ್ ಸೇವಿಸಬೇಕು. ತಾಜಾ ಟೊಮೆಟೋ ಹಣ್ಣಿನ ಜ್ಯೂಸ್ ಗೆ ಸ್ವಲ್ಪ ಕಯೆನ್ನೆ ಸಾಸ್ ಹಾಕಿಕೊಂಡು ಕುಡಿದರೆ ದೇಹದಲ್ಲಿ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ಇದರಿಂದ ದೇಹದ ತಾಪಮಾನವೂ ಇಳಿಯುತ್ತದೆ.
ಆ್ಯಪಲ್ ಸೈಡರ್ ವಿನಿಗರ್ ಮತ್ತು ಉಪ್ಪು : ಆ್ಯಪಲ್ ಸೈಡರ್ ವಿನಗರ್ ಮತ್ತು ಉಪ್ಪನ್ನು ಸೇರಿಸಿ ಗಾರ್ಗಲ್ ಮಾಡುವುದರಿಂದ ಶೀಘ್ರ ಆರಾಮ ಸಿಗುತ್ತದೆ. ವಿನಿಗರ್ ಅಂಶ ನಿಮ್ಮ ಗಂಟಲಲ್ಲಿರುವ ಕೀಟಾಣುಗಳನ್ನು ಕೊಲ್ಲುತ್ತದೆ.
ನಿಂಬೆ ಹಣ್ಣಿನ ಪಾನೀಯ : ನಿಂಬೆ ಹಣ್ಣಿನ ರಸದೊಂದಿಗೆ ಕೆಲವೇ ಹನಿಗಳಷ್ಟು ಜೇನುತುಪ್ಪ ಬೆರೆಸಿ ಸೇವಿಸಿ. ಇದರಿಂದ ನೆಗಡಿ, ಜ್ವರ ಮತ್ತು ಗಂಟಲು ಕಿರಿಕಿರಿಯಿಂದ ಮುಕ್ತಿ ಪಡೆಯಬಹುದು. ಗ್ರೀನ್ ಟೀ, ರಾಸ್ಬೆರಿ ಟೀ ಕೂಡ ಶೀಘ್ರ ಉಪಶಮನ ನೀಡುತ್ತದೆ. ದೇಹವನ್ನು ಬೆಚ್ಚಗಿಡಿ, ಆದಷ್ಟು ಬೆಚ್ಚಗಿನ ನೀರನ್ನೇ ಕುಡಿಯಿರಿ.