ಕಾರ್ತಿಕ ಮಾಸದ ಕೃಷ್ಣ ಪಕ್ಷದ ಅಮವಾಸ್ಯೆ ದಿನ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಗಣೇಶ ಹಾಗೂ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ. ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ಪ್ರಾಪ್ತಿಗಾಗಿ ಲಕ್ಷ್ಮಿ ಪೂಜೆ ನಡೆಯುತ್ತದೆ. ದೀಪಾವಳಿ ದಿನ ಮನೆ ಮನೆಗೆ ಹೋಗುವ ತಾಯಿ ಲಕ್ಷ್ಮಿ ಭಕ್ತರ ಬಯಕೆ ಈಡೇರಿಸುತ್ತಾಳೆ ಎಂಬ ನಂಬಿಕೆಯಿದೆ. ಇದೇ ಕಾರಣಕ್ಕೆ ದೀಪಾವಳಿಗೂ ಮುನ್ನ ಮನೆಯನ್ನು ಸ್ವಚ್ಛಗೊಳಿಸಲಾಗುತ್ತದೆ.
ಯಾರ ಮನೆಯಲ್ಲಿ ಸ್ವಚ್ಛತೆ ಕೊರತೆಯಿರುತ್ತದೆಯೋ ಆ ಮನೆಗೆ ತಾಯಿ ಲಕ್ಷ್ಮಿ ಪ್ರವೇಶ ಮಾಡುವುದಿಲ್ಲ. ಹಾಳಾದ, ಮುರಿದ ವಸ್ತುಗಳಿರುವ ಮನೆಗೂ ಲಕ್ಷ್ಮಿ ಬರುವುದಿಲ್ಲ. ದೀಪಾವಳಿಗೂ ಮುನ್ನ ಮನೆ ಸ್ವಚ್ಛಗೊಳಿಸುವ ವೇಳೆ ಮುರಿದ ಪಾತ್ರೆಗಳನ್ನು ಮೊದಲು ಹೊರಗೆ ಹಾಕಿ. ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಹಾಗೆ ಬಡತನ ಆವರಿಸುತ್ತದೆ.
ಹಾಗೆ ಮನೆಯಲ್ಲಿ ಹಾಳಾದ, ಒಡೆದ ಗಾಜಿನ ಪಾತ್ರೆಯಿದ್ದರೆ ಅದನ್ನು ಮನೆಯಿಂದ ಹೊರಗೆ ಹಾಕಿ. ಇದು ರಾಹುವಿನ ಪ್ರತೀಕ. ವಾಸ್ತು ದೋಷಕ್ಕೂ ಇದು ಕಾರಣವಾಗುತ್ತದೆ.
ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕುಟುಂಬಸ್ಥರ ಫೋಟೋ ಇರುತ್ತದೆ. ಈ ಫೋಟೋ ಒಡೆದಿದ್ದರೆ ಅದನ್ನು ದೀಪಾವಳಿಗೂ ಮೊದಲೂ ಸರಿಪಡಿಸಿ. ಒಡೆದ ಫೋಟೋ ಮನೆಯಲ್ಲಿ ವಾಸ್ತು ದೋಷ, ಸುಖ-ಶಾಂತಿಯ ಕೊರತೆಗೆ ಕಾರಣವಾಗುತ್ತದೆ. ಕುಟುಂಬ ಸದಸ್ಯರ ಮಧ್ಯೆ ಗಲಾಟೆಯಾಗುತ್ತದೆ.
ಮನೆಯಲ್ಲಿ ಬಂದ್ ಆಗಿರುವ ಗಡಿಯಾರವಿದ್ದರೆ ಅದನ್ನು ಕೂಡ ತಕ್ಷಣ ಬದಲಿಸಿ. ಇದು ವಾಸ್ತು ದೋಷಕ್ಕೆ ಮುಖ್ಯ ಕಾರಣವಾಗುತ್ತದೆ. ಹಾಳಾಗಿರುವ ಗಡಿಯಾರ ನಕಾರಾತ್ಮಕ ಶಕ್ತಿಯನ್ನು ಎಳೆಯುತ್ತದೆ.