ಆರೋಗ್ಯ ಮನುಷ್ಯನಿಗೆ ಬಹಳ ಮುಖ್ಯ. ಆರೋಗ್ಯವಾಗಿರುವ ವ್ಯಕ್ತಿ ಕೂಲಿ ಕೆಲಸ ಮಾಡಿಯಾದ್ರೂ ಹೊಟ್ಟೆ ತುಂಬಿಸಿಕೊಳ್ಳಬಲ್ಲ. ಆರೋಗ್ಯಕ್ಕೂ ಮನೆ ಹಾಗೂ ಕಚೇರಿ ವಾಸ್ತುವಿಗೂ ಸಂಬಂಧವಿದೆ. ಎಷ್ಟು ಚಿಕಿತ್ಸೆ, ಔಷಧಿ, ಮಾತ್ರೆ ಸೇವನೆ ಮಾಡಿದ್ರೂ ಕೆಲವೊಮ್ಮೆ ಆರೋಗ್ಯ ಸರಿಯಾಗುವುದಿಲ್ಲ. ಇದಕ್ಕೆ ವಾಸ್ತು ದೋಷ ಕಾರಣವಾಗುತ್ತದೆ.
ಮನೆಯ ಈಶಾನ್ಯ ಭಾಗದಲ್ಲಿ ಶೌಚಾಲಯವಿದ್ದರೆ ಅಥವಾ ಮೆಟ್ಟಿಲುಗಳಿದ್ದರೆ ಮನೆಯ ಮುಖ್ಯ ಮಹಿಳೆ ಜೊತೆ ಮನೆಯ ಎಲ್ಲ ಸದಸ್ಯರಿಗೂ ಮಾನಸಿಕ ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ. ಇದಲ್ಲದೆ ಸಂತಾನ ಸುಖಕ್ಕೂ ಸಮಸ್ಯೆಯಾಗುತ್ತದೆ. ಮಹಿಳೆಯರಿಗೆ ಗಂಭೀರ ಅನಾರೋಗ್ಯ ಸಮಸ್ಯೆ ಕಾಡುತ್ತದೆ.
ಮನೆಯ ಉತ್ತರ-ಪೂರ್ವ ದಿಕ್ಕು ಬಂದ್ ಆಗಿದ್ದು, ದಕ್ಷಿಣ-ಪಶ್ಚಿಮ ಭಾಗ ತೆರೆದಿದ್ದರೆ ಇದು ಕೂಡ ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಹಾಗೂ ಖರ್ಚು ಹೆಚ್ಚಾಗುತ್ತದೆ.
ಮನೆಯಲ್ಲಿ ಅಡುಗೆ ಮಾಡುವ ವೇಳೆ ಅಪ್ಪಿತಪ್ಪಿಯೂ ಮಹಿಳೆ ಮುಖ ದಕ್ಷಿಣ ದಿಕ್ಕಿಗೆ ಇರಬಾರದು. ಇದ್ರಿಂದ ಬೆನ್ನು ನೋವು, ಗರ್ಭ ಕಂಠದ ಸಮಸ್ಯೆ ಕಾಡುತ್ತದೆ.
ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗುವುದ್ರಿಂದ ಮೈಗ್ರೇನ್, ಸೈನಸ್, ತಲೆ ನೋವು ಕಾಡುತ್ತದೆ. ಹಾಸಿಗೆ ಮುಂದೆ ಕನ್ನಡಿಯಿದ್ದು, ಮಲಗಿದ ವ್ಯಕ್ತಿ ಕನ್ನಡಿಯಲ್ಲಿ ಕಾಣ್ತಿದ್ದರೆ ನಿಧಾನವಾಗಿ ಅನಾರೋಗ್ಯ ಕಾಡಲು ಶುರುವಾಗುತ್ತದೆ.