ಮನುಷ್ಯನ ದೇಹದ ಅನೇಕ ಕಡೆ ಮಚ್ಚೆಗಳಿರುತ್ತವೆ. ಭಾರತದಲ್ಲಿ ಜ್ಯೋತಿಷ್ಯ ಶಾಸ್ತ್ರವನ್ನು ನಂಬುವವರ ಸಂಖ್ಯೆ ಬಹಳಷ್ಟಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಮನುಷ್ಯನ ದೇಹದ ಮೇಲಿರುವ ಮಚ್ಚೆಗೂ ಮನುಷ್ಯನ ಜೀವನಕ್ಕೂ ಇರುವ ಸಂಬಂಧವನ್ನು ಹೇಳಲಾಗಿದೆ.
ದೇಹದ ಯಾವ ಭಾಗದಲ್ಲಿ ಮಚ್ಚೆಯಿದ್ರೆ ಏನು ಎಂಬುದನ್ನು ಶಾಸ್ತ್ರದಲ್ಲಿ ಹೇಳಲಾಗಿದೆ.
ನಿಮ್ಮ ಗುಪ್ತಾಂಗದಲ್ಲಿ ಮಚ್ಚೆಯಿದ್ರೆ ನೀವು ಉದಾರರು ಹಾಗೂ ಪ್ರಾಮಾಣಿಕರು ಎಂದರ್ಥ. ಗುಪ್ತಾಂಗದಲ್ಲಿ ಮಚ್ಚೆಯಿರುವವರು ಸಂಗಾತಿಯನ್ನು ಹೆಚ್ಚು ಪ್ರೀತಿ ಮಾಡ್ತಾರಂತೆ. ಇಂಥ ವ್ಯಕ್ತಿಗಳ ವೈವಾಹಿಕ ಜೀವನ ಹಾಗೂ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆಯಂತೆ.
ಹಿಂಭಾಗದಲ್ಲಿ ಮಚ್ಚೆಯಿದ್ರೆ ಅಂಥ ವ್ಯಕ್ತಿಗಳು ತೃಪ್ತಿಕರ, ಹೊಂದಿಕೊಳ್ಳುವ ಹಾಗೂ ಉತ್ಸಾಹಿಗಳಾಗಿರುತ್ತಾರಂತೆ.
ತುಟಿಗಳ ಮೇಲೆ ಮಚ್ಚೆಯಿದ್ರೆ ಅಂಥವರು ಹೆಚ್ಚು ಪ್ರೀತಿಯುಳ್ಳವರಾಗಿರುತ್ತಾರೆ. ಕಾಮುಕ ಪ್ರವೃತ್ತಿ ಹೆಚ್ಚಿರುತ್ತದೆ. ತುಟಿ ಮೇಲೆ ಮಚ್ಚೆಯಿರುವ ಜನರು ಸದಾ ಜೀವನದಲ್ಲಿ ಮುಂದೆ ಹೋಗುವ ಕನಸು ಕಾಣ್ತಾರೆ.
ಹುಡುಗಿಯರ ಬಲ ಸ್ತನದ ಮೇಲೆ ಮಚ್ಚೆಯಿದ್ರೆ ಅದು ಆಲಸ್ಯದ ಸಂಕೇತ. ಎಡ ಸ್ತನದ ಮೇಲೆ ಮಚ್ಚೆಯಿದ್ರೆ ಅವ್ರು ಸಕ್ರಿಯ ಹಾಗೂ ಶಕ್ತಿಶಾಲಿಗಳಾಗಿರುತ್ತಾರೆ.
ಯಾವ ಪುರುಷನ ನಿಪ್ಪಲ್ ಮೇಲೆ ಮಚ್ಚೆಯಿರುತ್ತದೆಯೋ ಆ ವ್ಯಕ್ತಿ ಚಂಚಲನಾಗಿರುತ್ತಾನಂತೆ. ಮಹಿಳೆ ನಿಪ್ಪಲ್ ಮೇಲೆ ಮಚ್ಚೆಯಿದ್ರೆ ಅಂಥವರು ಸಮಾಜದಲ್ಲಿ ಹೆಸರು ಮಾಡುವ ಬಗ್ಗೆ ಸದಾ ಚಿಂತೆ ಮಾಡ್ತಿರುತ್ತಾರಂತೆ.
ಬಲ ಕೆನ್ನೆ ಮೇಲೆ ಮಚ್ಚೆಯಿದ್ರೆ ಇದು ಶುಭ ಸಂಕೇತವಾಗಿದೆ. ಎಡ ಕೆನ್ನೆ ಮೇಲೆ ಮಚ್ಚೆಯಿದ್ರೆ ಅದನ್ನು ಅಶುಭ, ದುಃಖದ ಸಂಕೇತ ಎನ್ನಲಾಗುತ್ತದೆ.