alex Certify ಈ ಭಯಾನಕ ನದಿಯಲ್ಲಿ ಹರಿಯುತ್ತೆ ರಕ್ತ; ಬಲಿಗಾಗಿ ಕಾಯುತ್ತಿರುತ್ತವೆ ನರಭಕ್ಷಕ ಮೊಸಳೆಗಳು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಭಯಾನಕ ನದಿಯಲ್ಲಿ ಹರಿಯುತ್ತೆ ರಕ್ತ; ಬಲಿಗಾಗಿ ಕಾಯುತ್ತಿರುತ್ತವೆ ನರಭಕ್ಷಕ ಮೊಸಳೆಗಳು….!

ಹಿಂದೂ ಧರ್ಮದಲ್ಲಿ ಪವಿತ್ರ ನದಿಗಳನ್ನು ಮೋಕ್ಷದಾಯಿನಿ ಎಂದು ಪರಿಗಣಿಸಲಾಗುತ್ತದೆ. ಆದರೆ ನೀರಿನ ಬದಲು ರಕ್ತ ಹರಿಯುವ ನದಿಯೂ ಇದೆ. ಇದನ್ನು ಬ್ರಹ್ಮಾಂಡದ ಅತ್ಯಂತ ಅಪಾಯಕಾರಿ ನದಿ ಎಂದು ಕರೆಯಲಾಗುತ್ತದೆ. ಈ ನದಿಯ ಸ್ವಾರಸ್ಯಕರ ಸಂಗತಿಗಳನ್ನು ತಿಳಿಯೋಣ, ಗುರು ಪುರಾಣದಲ್ಲಿ ವೈತರಣಿ ನದಿಯ ಸ್ಥಳವನ್ನು ಯಮಲೋಕದಲ್ಲಿದೆ ಎಂದು ಹೇಳಲಾಗಿದೆ. ಈ ನದಿಯಲ್ಲಿ ರಕ್ತ ಹರಿಯುತ್ತದೆ ಎಂಬ ನಂಬಿಕೆಯಿದೆ.

ಸತ್ತು ಯಮಲೋಕಕ್ಕೆ ಹೋಗುವಾಗ, ಆತ್ಮವು ಈ ನದಿಯ ಮೂಲಕ ಹಾದುಹೋಗುತ್ತದೆ. ಅತ್ಯಂತ ಅಪಾಯಕಾರಿಯಾಗಿ ಕಾಣುವ ಈ ನದಿಯಲ್ಲಿ ಭಯಾನಕ ಮೊಸಳೆಗಳು, ಚೂಪಾದ ಕೊಕ್ಕಿನ ರಣಹದ್ದುಗಳು ಮತ್ತು ಅಪಾಯಕಾರಿ ಹುಳಗಳು ವಾಸಿಸುತ್ತವೆ. ಪಾಪದ ಆತ್ಮವು ಈ ನದಿಯ ಮೂಲಕ ಹಾದುಹೋದಾಗ ಈ ನರಭಕ್ಷಕ ಪ್ರಾಣಿಗಳು ಅದನ್ನು ಬಲಿ ಪಡೆಯುತ್ತವೆ.

ತಮ್ಮ ಜೀವನದಲ್ಲಿ ಎಂದೂ ದಾನ ಮಾಡದ ಜನರನ್ನು ನೋಡಿ ವೈತರಣಿ ನದಿಯು ರೋಷಗೊಳ್ಳಲು ಪ್ರಾರಂಭಿಸುತ್ತದೆ ಎಂದು ಹೇಳಲಾಗುತ್ತದೆ. ಅದರ ರಕ್ತ ಕುದಿಯಲು ಪ್ರಾರಂಭಿಸುತ್ತದೆ. ರಹಸ್ಯವಾಗಿ ತೊಂದರೆ ಕೊಡುವ, ಸುಳ್ಳು ಹೇಳುವ, ಇತರರ ಸಂತೋಷಕ್ಕೆ ಅಸೂಯೆ ಪಡುವ, ಮೋಸ ಮಾಡುವ ಜನರ ಆತ್ಮವೂ ವೈತರಣಿ ನದಿಯ ಕೋಪವನ್ನು ಎದುರಿಸಬೇಕಾಗುತ್ತದೆ.

ಯಮ ದೂತರು ಪಾಪಿ ಮನುಷ್ಯನ ಆತ್ಮವನ್ನು ಈ ನದಿಯ  ಮೂಲಕವೇ ದಾಟಿಸುತ್ತಾರೆ. ಆಕಾಶದ ಮೂಲಕ ಎಳೆದುಕೊಂಡು ಹೋಗುತ್ತಾರೆ. ಏಕಾದಶಿಯಂದು ವ್ರತವನ್ನು ಆಚರಿಸಿ ವಿಷ್ಣುವನ್ನು ಪೂಜಿಸಬೇಕು. ದಾನಗಳನ್ನು ಮಾಡುವ ವ್ಯಕ್ತಿಗೆ ವೈತರಣಿ ನದಿಯನ್ನು ದಾಟಲು ಯಾವುದೇ ತೊಂದರೆಯಾಗುವುದಿಲ್ಲ ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...