ಕಳೆದ ತಿಂಗಳು ಬೈಕ್ ಮತ್ತು ಸ್ಕೂಟರ್‌ಗಳ ಮಾರಾಟ ಭರ್ಜರಿಯಾಗಿತ್ತು. ದ್ವಿಚಕ್ರ ವಾಹನ ಮಾರಾಟದಲ್ಲಿ ಶೇ.18 ರಷ್ಟು ಪ್ರಗತಿಯಾಗಿದೆ. ಫೆಬ್ರವರಿಯಲ್ಲಿ ಒಟ್ಟು 8,29,810 ದ್ವಿಚಕ್ರ ವಾಹನಗಳು ಮಾರಾಟವಾಗಿವೆ. ಫೆಬ್ರವರಿ 2022 ರಲ್ಲಿ ಈ ಸಂಖ್ಯೆ 7,03,228 ಇತ್ತು. ಈ ವರ್ಷ ಫೆಬ್ರವರಿಯಲ್ಲಿ 1,26,582 ಯುನಿಟ್‌ಗಳು ಹೆಚ್ಚುವರಿಯಾಗಿ ಬಿಕರಿಯಾಗಿವೆ.
ಫೆಬ್ರವರಿಯಲ್ಲಿ ಹೀರೋ ಕಂಪನಿ ಬೈಕ್‌ಗಳ ಮಾರಾಟದಲ್ಲಿ ಅಗ್ರಸ್ಥಾನದಲ್ಲಿದೆ. 2.8 ಲಕ್ಷಕ್ಕಿಂತ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ. ಹೀರೋ ಕಂಪನಿಯ ವಹಿವಾಟಿನಲ್ಲಿ ಸುಮಾರು 50 ಪ್ರತಿಶತದಷ್ಟು ಬೆಳವಣಿಗೆಯಾಗಿದೆ. ಹೀರೋ ಕಂಪನಿಯ ಒಂದೇ ಒಂದು ಬೈಕ್ ಎಲ್ಲವನ್ನೂ ಹಿಂದಿಕ್ಕಿದೆ.
ಹೀರೋ ಮೋಟೋ ಕಾರ್ಪ್: ಈ ಕಂಪನಿಯ ಸ್ಪ್ಲೆಂಡರ್ ಬೈಕ್ ಮತ್ತೊಮ್ಮೆ ದೇಶದಲ್ಲಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನ ಎನಿಸಿಕೊಂಡಿದೆ. ಫೆಬ್ರವರಿಯಲ್ಲಿ 2,88,605 ಸ್ಪ್ಲೆಂಡರ್ ಬೈಕ್‌ಗಳು ಮಾರಾಟವಾಗಿವೆ. ಫೆಬ್ರವರಿ 2022 ರಲ್ಲಿ 1,93,731 ಯುನಿಟ್‌ಗಳು ಮಾರಾಟವಾಗಿದ್ದವು. ಸ್ಪ್ಲೆಂಡರ್ ಮಾರಾಟದಲ್ಲಿ ಸುಮಾರು 49 ಪ್ರತಿಶತದಷ್ಟು ಜಿಗಿತವನ್ನು ದಾಖಲಿಸಿದೆ. ಈ ಬೈಕಿನ ಬೆಲೆ 72 ಸಾವಿರ ರೂಪಾಯಿಗಳಿಂದ ಆರಂಭವಾಗುತ್ತದೆ.
ಹೋಂಡಾ ಆಕ್ಟಿವಾ: ಹೋಂಡಾ ಆಕ್ಟಿವಾ ಸ್ಕೂಟರ್ ಎರಡನೇ ಸ್ಥಾನದಲ್ಲಿದೆ. ಫೆಬ್ರವರಿಯಲ್ಲಿ 1,74,503 ಹೋಂಡಾ ಆಕ್ಟಿವಾ ಸ್ಕೂಟರ್‌ಗಳು ಸೇಲ್ ಆಗಿವೆ. ಶೀಘ್ರದಲ್ಲೇ ಹೋಂಡಾ ಆಕ್ಟಿವಾ ಸ್ಕೂಟರ್‌ನ ಎಲೆಕ್ಟ್ರಿಕ್ ರೂಪಾಂತರ ಕೂಡ ಬಿಡುಗಡೆಯಾಗಲಿದೆ.
ಬಜಾಜ್ ಪಲ್ಸರ್: ಈ ಬೈಕ್ ಅತಿ ಹೆಚ್ಚು ಮಾರಾಟವಾದ ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇದರ ಮಾರಾಟವು 45.78 ಪ್ರತಿಶತದಷ್ಟು ಸುಧಾರಿಸಿದೆ. ಫೆಬ್ರವರಿ 2023ರಲ್ಲಿ 80,106 ಯುನಿಟ್‌ಗಳು ಮಾರಾಟವಾಗಿವೆ. Pulsar 220F ಅನ್ನು ಮರುಪ್ರಾರಂಭಿಸಿದ ನಂತರ, ಕಂಪನಿಯು ತನ್ನ Pulsar NS ಶ್ರೇಣಿಯನ್ನು ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದೆ.
HF ಡೀಲಕ್ಸ್: ಈ ಬೈಕ್‌ನ ಮಾರಾಟ ಶೇ.25.86 ರಷ್ಟು ಕಡಿಮೆಯಾಗಿದೆ. ಆದ್ರೂ ಇದು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, 56,290 ಯುನಿಟ್‌ಗಳು ಸೇಲ್ ಆಗಿವೆ.
ಟಿವಿಎಸ್ ಜುಪಿಟರ್: ಐದನೇ ಸ್ಥಾನ ಟಿವಿಎಸ್ ಜುಪಿಟರ್ಗೆ ಲಭ್ಯವಾಗಿದೆ. ಫೆಬ್ರವರಿ 2023 ರಲ್ಲಿ ಟಿವಿಎಸ್ ಜುಪಿಟರ್ ಮಾರಾಟವು 14.44 ಪ್ರತಿಶತದಷ್ಟು ಹೆಚ್ಚಾಗಿದ್ದು, 53,891 ಯುನಿಟ್‌ಗಳು ಬಿಕರಿಯಾಗಿವೆ. ಫೆಬ್ರವರಿ 2022 ರಲ್ಲಿ 47,092 ಯುನಿಟ್‌ಗಳು ಮಾರಾಟವಾಗಿದ್ದವು.