ಕಳೆದ ವರ್ಷ ದೇಶದಲ್ಲಿ ಕಾಣಿಸಿಕೊಂಡ ಕೊರೊನಾ ಮಹಾಮಾರಿ ಇನ್ನೂ ಬೆಂಬಿಡದಂತೆ ಕಾಡುತ್ತಿದೆ. ಕೊರೊನಾ ಇದ್ದ ಕಾರಣ ಕಳೆದ ಬಾರಿ ಹಬ್ಬಗಳ ಅದ್ದೂರಿ ಆಚರಣೆಗೆ ಬ್ರೇಕ್ ಬಿದ್ದಿತ್ತು. ಈ ಬಾರಿಯೂ ಅದು ಮರುಕಳಿಸಿದೆ.
ಶ್ರಾವಣಮಾಸದೊಂದಿಗೆ ಹಬ್ಬಗಳ ಸಾಲು ಆರಂಭವಾಗುತ್ತದೆ. ನಾಗರಪಂಚಮಿ, ಗಣೇಶ ಚತುರ್ಥಿ, ವರಮಹಾಲಕ್ಷ್ಮಿ, ಕೃಷ್ಣ ಜನ್ಮಾಷ್ಟಮಿ, ಹೋಳಿ ಹಬ್ಬ, ದಸರಾ, ದೀಪಾವಳಿ ಸೇರಿದಂತೆ ಹಬ್ಬಗಳ ಆಚರಣೆಗೆ ಈ ಸಲ ಕಡಿವಾಣ ಹಾಕಲಾಗುತ್ತಿದೆ.
ಅದ್ದೂರಿಯಾಗಿ ಹಬ್ಬ ಆಚರಿಸದೇ ಸರಳವಾಗಿ ಮನೆಗಳಲ್ಲಿ ಹಬ್ಬ ಆಚರಿಸಲು ಮಾರ್ಗಸೂಚಿ ಹೊರಡಿಸಲಾಗಿದೆ.